ಬಿಗ್ಗೆಸ್ಟ್​​ ಬಾಸ್ ಜೊತೆ ಕಿಂಗ್ ಕೊಹ್ಲಿ; ವೈರಲ್ ಆಗುತ್ತಿದೆ ಫೋಟೋ

ಭಾರತ ನಾಳೆ ವೆಸ್ಟ್​ ಇಂಡೀಸ್ ವಿರುದ್ಧ ಅಂತಿಮ ಟಿ-20 ಪಂದ್ಯವನ್ನಾಡಲಿದ್ದು, ಸರಣಿ ಕ್ಲೀನ್ ಸ್ವೀಪ್​ ಮಾಡುವತ್ತ ಚಿತ್ತ ನೆಟ್ಟಿದೆ.

Vinay Bhat | news18
Updated:August 5, 2019, 6:39 PM IST
ಬಿಗ್ಗೆಸ್ಟ್​​ ಬಾಸ್ ಜೊತೆ ಕಿಂಗ್ ಕೊಹ್ಲಿ; ವೈರಲ್ ಆಗುತ್ತಿದೆ ಫೋಟೋ
ವಿರಾಟ್ ಕೊಹ್ಲಿ ಹಾಗೂ ವಿವ್ ರಿಚರ್ಡ್ಸ್
  • News18
  • Last Updated: August 5, 2019, 6:39 PM IST
  • Share this:
ಬೆಂಗಳೂರು (ಆ. 05): ಕೆರಿಬಿಯನ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದ್ಯ ಟಿ-20 ಸರಣಿ ಆಡುತ್ತಿದೆ. ಈಗಾಗಲೇ ಮೂರು ಪಂದ್ಯಗಳ ಟಿ-20 ಸರಣಿ ಪೈಕಿ 2-0 ಮುನ್ನಡೆ ಸಾಧಿಸಿರುವ ಭಾರತ ಸರಣಿ ವಶ ಪಡಿಸಿಕೊಂಡಿದೆ.

ಈ ಮಧ್ಯೆ ವಿರಾಟ್ ಕೊಹ್ಲಿ ವೆಸ್ಟ್​ ಇಂಡೀಸ್ ಕ್ರಿಕೆಟ್ ದಿಗ್ಗಜ, ಎರಡು ಬಾರಿಯ ವಿಶ್ವಕಪ್ ವಿಜೇತ ವಿವ್ ರಿಚರ್ಡ್ಸ್​ ಜೊತೆ ಫೋಟೋ ಕ್ಲಿಕ್ಕಿಸಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ 'ವಿಥ್ ಬಿಗ್ಗೆಸ್ಟ್​ ಬಾಸ್' ಎಂದು ಅಡಿ ಬರಹ ನೀಡಿದ್ದು ಸಾಮಾಜಿಕ ತಾಣಗಳಲ್ಲಿ ಭಾರೀ ಹರಿದಾಡುತ್ತಿದೆ.

 

ನನ್ನ ಮನಸ್ಸು, ಹೃದಯ ಅಲ್ಲೇ ಇದೆ; ಕಾಶ್ಮೀರ ಬಿಟ್ಟುಬಂದ ಪಠಾಣ್​ರಿಂದ ಭಾವನಾತ್ಮಕ ಟ್ವೀಟ್

ಇತ್ತೀಚೆಗಷ್ಟೆ ರಿಚರ್ಡ್ಸ್​ ಅವರು ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದರು. 'ನಾನು ಕೊಹ್ಲಿಯ ದೊಡ್ಡ ಅಭಿಮಾನಿ. ಅವರ ಆಕ್ರಮಣಕಾರಿ ಶೈಲಿ ನನಗೆ ತುಂಬಾ ಇಷ್ಟ. ನಾನು ಅತ್ಯುತ್ತಮ ಬ್ಯಾಟ್ಸ್​ಮನ್​ ಹಾಗೂ ಆಕ್ರಮಣಕಾರಿ ಆಟಗಾರನನ್ನು ಇಷ್ಟ ಪಡುತ್ತೇನೆ' ಎಂದಿದ್ದರು.

ಭಾರತ ನಾಳೆ ವೆಸ್ಟ್​ ಇಂಡೀಸ್ ವಿರುದ್ಧ ಅಂತಿಮ ಟಿ-20 ಪಂದ್ಯವನ್ನಾಡಲಿದ್ದು, ಸರಣಿ ಕ್ಲೀನ್ ಸ್ವೀಪ್​ ಮಾಡುವತ್ತ ಚಿತ್ತ ನೆಟ್ಟಿದೆ.

First published: August 5, 2019, 6:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading