Viral Photo: ವಮಿಕಾ ಆಟಾಡೋ ಜಾಗ ಇದೇ! ನೀವೂ ನೋಡಿ ಖುಷಿಪಡಿ!

ಬಹುಶಃ ಈ ಚಿತ್ರವನ್ನು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮನೆಯ ಬಾಲ್ಕನಿಯಲ್ಲಿ ಕ್ಲಿಕ್ಕಿಸಿರಬೇಕು. ಅಲ್ಲೇ ವಮಿಕಾಳ ಪ್ಲೇ ಏರಿಯಾ ಇದೆ ಅನಿಸುತ್ತೆ, ಇದೇ ಜಾಗದಲ್ಲಿ ವಮಿಕಾ ತನ್ನ ಬಾಲ್ಯದ ತುಂಟಾಟಗಳನ್ನು ಆಡೋದು.

ವಮಿಕಾಳ ಆಟೋಡೋ ಜಾಗ

ವಮಿಕಾಳ ಆಟೋಡೋ ಜಾಗ

 • Share this:
  ಭಾರತದ ಅತ್ಯಂತ ಜನಪ್ರಿಯ ಸ್ಟಾರ್ ಜೋಡಿ ಯಾರು ಅಂತ ಕೇಳಿದ್ರೆ ಥಟ್ಟನೆ ಎಲ್ಲರೂ ಹೇಳೋ ಹೆಸರೇ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ!. ಒಬ್ಬರು ಕ್ರಿಕೆಟ್​ನಲ್ಲಿ (Cricket) ಭರ್ಜರಿ ಹೆಸರಾಗಿದ್ರೆ ಇನ್ನೊಬ್ರು ಬಾಲಿವುಡ್(Bollywood)​ನ ದೈತ್ಯ ಪ್ರತಿಭೆ. ಈ ಇಬ್ಬರೂ ಜೋಡಿಯಾಗಿದ್ದೇ ಮಸ್ತ್ ಎಂದು ಈಗಲೂ ನೆಟ್ಟಿಗರೂ ಆಗಾಗ ಉದ್ಘರಿಸುತ್ತಾ ಇರುತ್ತಾರೆ. ಈ ಸ್ಟಾರ್ ಜೋಡಿಯ (Star Couple)  ಮುದ್ದಿನ ಕೂಸು ವಮಿಕಾ ಕೂಡ ಸ್ಟಾರ್ ಪಟ್ಟವನ್ನು (Star Kid)  ಪಡೆದೇ ಹುಟ್ಟಿದ್ದಾಳೆ. ವಮಿಕಾಳ (Vamika) ಮುಖವನ್ನು ಹೊರಜಗತ್ತಿಗೆ ತೋರಿಸಲು ಇಚ್ಛೆ ಪಡದ ವಿರಾಟ್ ಕೊಹ್ಲಿ (Virat Kohli)  ಮತ್ತು ಅನುಷ್ಕಾ ಶರ್ಮಾ (Anushka Sharma)  ಜೋಡಿ ಇದೀಗ ತಮ್ಮ ಮಗಳು ಆಟಾಡೋ ಜಾಗವನ್ನು ರಿವೀಲ್ ಮಾಡಿದ್ದಾರೆ. ಅದು ಹೇಗಿದೆ? ಬನ್ನಿ, ನೀವೇ ನೋಡಿ.

  ಬಹುಶಃ ಈ ಚಿತ್ರವನ್ನು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮನೆಯ ಬಾಲ್ಕನಿಯಲ್ಲಿ ಕ್ಲಿಕ್ಕಿಸಿರಬೇಕು. ಅಲ್ಲೇ ವಮಿಕಾಳ ಪ್ಲೇ ಏರಿಯಾ ಇದೆ ಅನಿಸುತ್ತೆ, ಇದೇ ಜಾಗದಲ್ಲಿ ವಮಿಕಾ ತನ್ನ ಬಾಲ್ಯದ ತುಂಟಾಟಗಳನ್ನು ಆಡೋದು ಅಂತ ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ ಬರೆದುಕೊಂಡಿದ್ದಾರೆ. ಈಮೂಲಕ ಮಗಳ ಮುದ್ದಿನ ವಿಷಯವನ್ನು ಇಡೀ ಜಗತ್ತಿನ ಜೊತೆ ಅಷ್ಟೇ ಮುದ್ದಾಗಿ ಹಂಚಿಕೊಂಡಿದ್ದಾರೆ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕಪ್ತಾನ.
  View this post on Instagram


  A post shared by Virat Kohli (@virat.kohli)


  ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ ಹೃದಯದ ಎಮೋಜಿಯೊಂದಿಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಅನುಷ್ಕಾ ಕೆಂಪು ಮತ್ತು ಬಿಳಿ ಬಣ್ಣದ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅವರು ಉದ್ಯಾನವನದ ಬೆಳಕಿನಲ್ಲಿ ಕಾಂತಿಯುತವಾಗಿ ಹೊಳೆಯುತ್ತಿದ್ದಾರೆ. ವಿರಾಟ್ ಕೊಹ್ಲಿ ಕಂದು ಬಣ್ಣದ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಫೋಟೊದಲ್ಲಿ ಬಹಳ ಮಿಂಚಿದ್ದಾರೆ. ಅವರ ಹಿಂದೆ, ಒಂದು ಪ್ಲೇಪೆನ್, ಆಟಿಕೆ ಮೋಟಾರ್​ ಸೈಕಲ್ ಮತ್ತು ಮಕ್ಕಳು ಆಟ ಆಡುವಆಟಿಕೆ ಬಾಸ್ಕೆಟ್‌ಬಾಲ್ ಅನ್ನು ನಾವು ನೋಡಬಹುದಾಗಿದೆ.
  View this post on Instagram


  A post shared by Virat Kohli (@virat.kohli)

  ಕೆಟ್ಟ ದಾಖಲೆ ಮಾಡಿದ ಆರ್​ಸಿಬಿ
  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಋತುವನ್ನು ಕೆಟ್ಟ ದಾಖಲೆಯೊಂದಿಗೆ ಪ್ರಾರಂಭಿಸಿದೆ. ಹೌದು, ಪಂಜಾಬ್ ನಡುವಿನ ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸಿದರೂ ಉತ್ತಮ ಬೌಲಿಂಗ್ ಮಾಡದ ಹಿನ್ನಲೆ ಆರ್​ಸಿಬಿ ಸೋಲನ್ನಪ್ಪಿತು. ಇದರೊಂದಿಗೆ ಕೆಟ್ಟ ದಾಖಲೆಯನ್ನೂ ದಾಖಲಿಸಿದೆ.

  ಇದನ್ನೂ ಓದಿ: RCB ಐಪಿಎಲ್ ಗೆದ್ದಾಗ ನೆನಪಾಗೋದು ಕುಚಿಕು ಗೆಳೆಯ! Kohli ಮನದಾಳ ಮಾತು

  ಪಂಜಾಬ್ ಕಿಂಗ್ಸ್ ವಿರುದ್ಧದ ಫಾಪ್ ಡು ಪ್ಲೆಸಿಸ್ ಅವರ ಇನ್ನಿಂಗ್ಸ್ ನೋಡಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯವನ್ನು ಸೋಲುತ್ತದೆ ಎಂದು ಯಾರಾದರೂ ನಿರೀಕ್ಷಿಸಿರಲಿಲ್ಲ. ಆದರೆ, ಬೆಂಗಳೂರು ತಂಡ ಕಳಪೆ ಬೌಲಿಂಗ್ ಮತ್ತು ಕಳಪೆ ಫೀಲ್ಡಿಂಗ್‌ನಿಂದ ಪಂದ್ಯವನ್ನು ಕಳೆದುಕೊಂಡಿದೆ. ಪಂಜಾಬ್ ಕಿಂಗ್ಸ್ ಕೂಡ 205 ರನ್ ಗಳ ಬೃಹತ್ ಗುರಿ ಬೆನ್ನತ್ತಿ ಇನ್ನೂ ಒಂದು ಓವರ್ ಬಾಕಿ ಉಳಿದಿರುವಂತೆ ಗೆಲುವನ್ನು ದಾಖಲಿಸಿತು.

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಸರಣಿಯಲ್ಲಿ ಕೆಟ್ಟ ದಾಖಲೆ ನಿರ್ಮಿಸಿದೆ. ಹೌದು, ಒಂದು ಪಂದ್ಯದಲ್ಲಿ ಅತಿ ಹೆಚ್ಚು ವೈಡ್‌ಗಳನ್ನು ದಾಖಲಿಸಿದ ತಂಡವಾಗಿದ್ದು, ಈ ಪಂದ್ಯದಲ್ಲಿ ಬೆಂಗಳೂರು ತಂಡ 21 ವೈಡ್​ಗಳನ್ನು ಹಾಕಿದೆ. RCB ಬೌಲಿಂಗ್‌ನಲ್ಲಿ ಒಟ್ಟು 22 ಎಕ್ಸ್‌ಟ್ರಾಗಳನ್ನು ನೀಡಿದ್ದು, ಅದರಲ್ಲಿ 21 ವೈಡ್‌ಗಳ ರೂಪದಲ್ಲಿ ಬಂದಿವೆ.

  ಇದನ್ನೂ ಓದಿ: IPL 2022: ಸೋತರೂ ಸಂತಸದಲ್ಲಿರುವ ಚೆನ್ನೈ, ಗೆದ್ದರೂ ಸಂಕಷ್ಟದಲ್ಲಿದೆ ಡೆಲ್ಲಿ.. ಕಾರಣವೇನು?

  ಈ ಪ್ರದರ್ಶನದ ಮೂಲಕ ಬೆಂಗಳೂರು ತಂಡವು 19 ವೈಡ್​ಗಳ ಹಿಂದಿನ ದಾಖಲೆಯನ್ನು ಮುರಿದಿದೆ. 2011ರ ಐಪಿಎಲ್ ಋತುವಿನಲ್ಲಿ, ನಂತರ ಕಿಂಗ್ಸ್ ಇಲೆವೆನ್ ಪಂಜಾಬ್. ಕೊಚ್ಚಿ ಟಸ್ಕರ್ಸ್ ವಿರುದ್ಧದ ಪಂದ್ಯದಲ್ಲಿ 19 ವೈಡ್​ಗಳನ್ನು ಹಾಕಿತ್ತು.
  Published by:guruganesh bhat
  First published: