ICC World Cup 2019: ಈ ಬಾರಿಯ ವಿಶ್ವಕಪ್ ಅತ್ಯಂತ ದೊಡ್ಡ ಸವಾಲು: ವಿರಾಟ್ ಕೊಹ್ಲಿ

ಪ್ರತಿಯೊಂದು ತಂಡ ಉತ್ತಮವಾಗಿದೆ. ಈ ಹಿಂದೆ ಅಘ್ಘಾನಿಸ್ತಾನ್ ತಂಡ ಹೇಗಿತ್ತು, ಇತ್ತೀಚಿನ ದಿನಗಳಲ್ಲಿ ತಂಡದ ಪ್ರದರ್ಶನ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

zahir | news18
Updated:May 23, 2019, 11:25 AM IST
ICC World Cup 2019: ಈ ಬಾರಿಯ ವಿಶ್ವಕಪ್ ಅತ್ಯಂತ ದೊಡ್ಡ ಸವಾಲು: ವಿರಾಟ್ ಕೊಹ್ಲಿ
ಕೊಹ್ಲಿ
  • News18
  • Last Updated: May 23, 2019, 11:25 AM IST
  • Share this:
ಮುಂಬರುವ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ಪ್ರತಿಯೊಬ್ಬರ ಆಟಗಾರನು ಸಹ ಕಠಿಣ ಪರಿಶ್ರಮವಹಿಸಬೇಕಾಗುತ್ತದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.  ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡ ಪರ್ಯಟನೆಗೂ ಮುಂಚಿತವಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಾಯಕ ಕೊಹ್ಲಿ ಆಟಗಾರರ ಪಾತ್ರದ ಬಗ್ಗೆ ವಿವರಣೆ ನೀಡಿದರು.

ಈ ಬಾರಿಯ ವಿಶ್ವಕಪ್​ನಲ್ಲಿ ಎಲ್ಲ ತಂಡಗಳು ಬಲಿಷ್ಠವಾಗಿವೆ. ಇಲ್ಲಿ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸಲಾಗುವುದಿಲ್ಲ. ನಮ್ಮ ಗೆಲುವಿಗಾಗಿ ತಂಡವು ಕಠಿಣ ಪ್ರರಿಶ್ರಮವಹಿಸಬೇಕಾಗುತ್ತದೆ. ಹಾಗೆಯೇ ಪ್ರತಿ ಆಟಗಾರರು ವೈಯುಕ್ತಿಕ ಕೊಡುಗೆಯ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬೇಕಾಗುತ್ತದೆ ಎಂದು ಕೊಹ್ಲಿ ಹೇಳಿದರು.

ಈಗಷ್ಟೇ ಐಪಿಎಲ್​ ಪಂದ್ಯಗಳಲ್ಲಿ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೇ ಫಾರ್ಮ್​ನಲ್ಲಿ ಇಂಗ್ಲೆಂಡ್​ನಲ್ಲೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷಿಯಿದೆ. ನಾವು ಪ್ರತಿಯೊಬ್ಬ ಆಟಗಾರನಿಂದ ಅತ್ಯುತ್ತಮ ಆಟವನ್ನು ನಿರೀಕ್ಷಿಸುತ್ತಿದ್ದೇವೆ. ಇಂಗ್ಲೆಂಡ್​ನಲ್ಲಿ ಟೆಸ್ಟ್​ ಪಂದ್ಯ ಆಡುವುದಕ್ಕಿಂತ ಏಕದಿನ ಪಂದ್ಯವಾಡುವುದು ಕಷ್ಟವಲ್ಲ. ಹೀಗಾಗಿ ನಮ್ಮ ತಂಡವು ಚೆನ್ನಾಗಿ ಆಡುವ ಭರವಸೆಯಿದೆ. ಇಲ್ಲಿ ಆಟಗಾರರು ಒತ್ತಡವನ್ನು ನಿಭಾಯಿಸಬೇಕಿದೆ ಎಂದು ಟೀಂ ಇಂಡಿಯಾ ನಾಯಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಇಲ್ಲಿವರೆಗಿನ ಅತ್ಯಂತ ಸವಾಲಿನ ವಿಶ್ವಕಪ್ ಪಂದ್ಯಾವಳಿಗಳು ಈ ಬಾರಿ ಇರಲಿದ್ದು, ಪ್ರತಿಯೊಂದು ತಂಡ ಉತ್ತಮವಾಗಿದೆ. ಈ ಹಿಂದೆ ಅಘ್ಘಾನಿಸ್ತಾನ್ ತಂಡ ಹೇಗಿತ್ತು, ಇತ್ತೀಚಿನ ದಿನಗಳಲ್ಲಿ ತಂಡದ ಪ್ರದರ್ಶನ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿ ಈ ವಿಶ್ವಕಪ್​ನಲ್ಲಿ ಯಾವುದೇ ತಂಡವನ್ನು ಲಘವಾಗಿ ಪರಿಗಣಿಸಲಾಗುವುದಿಲ್ಲ. ಈ ಬಾರಿಯ ವಿಶ್ವಕಪ್ ಗೆಲ್ಲುವುದು ಅತ್ಯಂತ ದೊಡ್ಡ ಸವಾಲಾಗಿದೆ ಎಂದರು.

ICC Cricket World Cup 2019: ವಿರಾಟ್ vs ಅಮೀರ್: ವಿಶ್ವಕಪ್​ಗಾಗಿ ಬಲಿಷ್ಠ ಪಾಕ್ ತಂಡ ಪ್ರಕಟ

First published:May 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ