ನನ್ನ ನಾಯಕತ್ವದ ಬೆಳವಣಿಗೆಗೆ ಆತನೇ ಕಾರಣ; ವಿರಾಟ್ ಕೊಹ್ಲಿ

ನನ್ನ ನಾಯಕತ್ವದ ಬೆಳವಣಿಗೆಗೆ ಟೀಂ ಇಂಡಿಯಾದ ಮತ್ತೊಬ್ಬ ನಾಯಕ ಕಾರಣವೆಂದು ಕೊಹ್ಲಿ ಹೇಳಿದ್ದಾರೆ. ಯಾರಾವರು?

ವಿರಾಟ್​​ ಕೊಹ್ಲಿ

ವಿರಾಟ್​​ ಕೊಹ್ಲಿ

 • Share this:
  ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅನೇಕ ಕಷ್ಟದ ಸಂದರ್ಭದಲ್ಲೂ ದೃಢ ನಾಯಕತ್ವದಿಂದಾಗಿ ಟೀಂ ಇಂಡಿಯಾವನ್ನು ಜಯದ ದಡಕ್ಕೇ ಸೇರಿದ್ದಾರೆ. ಹಾಗಾಗಿ ನನ್ನ ನಾಯಕತ್ವದ ಬೆಳವಣಿಗೆಗೆ ಟೀಂ ಇಂಡಿಯಾದ ಮತ್ತೊಬ್ಬ ನಾಯಕ ಕಾರಣವೆಂದು ಕೊಹ್ಲಿ ಹೇಳಿದ್ದಾರೆ. ಯಾರಾವರು?

  ವಿರಾಟ್​​ ಕೊಹ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ  ಅವರು ನನ್ನ ನಾಯಕತ್ವದ ಬೆಳವಣಿಗೆ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚೆಗೆ ರವಿಚಂದ್ರನ್​ ಅಶ್ವಿನ್​​ ಜೊತೆ ಇನ್​​ಸ್ಟಾಗ್ರಾಂ ಲೈವ್​ನಲ್ಲಿ ಮಾತನಾಡಿದ್ದ ಕೊಹ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.

  ಧೋನಿ ನಾಯಕತ್ವವನ್ನು ನಾನು ಸಾಕಷ್ಟು ಗಮನಿಸಿದ್ದೇನೆ. ಆದರೆ ಅವರು ನಿವೃತ್ತಿ ಹೊಂದಿದ ನಂತರ ನಾನು ನಾಯಕನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಪಂದ್ಯದ ವೇಳೆ ಧೋನಿ ಬಳಿ ಸಾಕಷ್ಟು ವಿಚಾರಗಳನ್ನು ಕೇಳಿದ್ದೇನೆ. ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ನನ್ನ ಮೇಲೆ ಬಹಳ ನಂಬಿಕೆಯನ್ನು ಇಟ್ಟಿದ್ದರು.

  ಧೋನಿ ಆಟರಾರರ ಕ್ಷಮತೆಯನ್ನು ಮತ್ತು ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ನನ್ನ ಬೆಳವಣೆಯಲ್ಲಿ ಧೋನಿಯ ಪಾತ್ರ ಮಹತ್ವವಿದೆ ಎಂದು ಲೈವ್​ನಲ್ಲಿ ಹೇಳಿದ್ದಾರೆ.

  ಕೊಹ್ಲಿ 2014ರಲ್ಲಿ ಅಂಡರ್​ 19 ನಾಯಕತ್ವದ ಪಡೆದರು. ನಂತರ 2017ರಲ್ಲಿ ಏಕದಿನ ಮತ್ತು ಟಿ20 ತಂಡದ ನಾಯಕತ್ಚವನ್ನು ಪಡೆಯುವ ಮೂಲಕ ಟೀಂ ಇಂಡಿಯಾದವನ್ನು ಮುನ್ನಡೆಸುತ್ತಿದ್ದಾರೆ.

  ಕಡಿಮೆ ಬೆಲೆಯಲ್ಲಿ ರಿಲಾಯನ್ಸ್ ಸಂಸ್ಥೆ​ ದಿನವೊಂದಕ್ಕೆ ತಯಾರಿಸುತ್ತಿದೆ 1 ಲಕ್ಷ ಪಿಪಿಇ ಕಿಟ್​
  First published: