IND vs SA: ಟೆಸ್ಟ್ ದಾಖಲೆ, ಮೈಲಿಗಲ್ಲುಗಳ ಗಡಿಯಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್

Virat Kohli and Rishabh Pant Records: ನಾಳೆಯಿಂದ ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಅವರು ಕೆಲ ದಾಖಲೆ ಮತ್ತು ಮೈಲಿಗಲ್ಲುಗಳ ದಡದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್

ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್

 • Share this:
  ಬೆಂಗಳೂರು, ಡಿ. 24: ನಾಳೆ ದಕ್ಷಿಣ ಆಫ್ರಿಕಾ ಮತ್ತು ಭಾರತದ (South Africa vs India first test match) ನಡುವೆ ಮೂರು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಲಿದೆ. ಜೋಹಾನಸ್​ಬರ್ಗ್ ನಗರದ ಸೆಂಚೂರಿಯನ್​ನಲ್ಲಿ (Centurion SuperSport park) ನಾಳೆ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ (Boxing day match) ಟೀಮ್ ಇಂಡಿಯಾ ಆಟಗಾರರ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಒಮ್ಮೆಯೋ ಟೆಸ್ಟ್ ಸರಣಿ ಗೆಲ್ಲದ ಟೀಮ್ ಇಂಡಿಯಾ ನಾಳೆ ಆರಂಭವಾಗುವ ಮೊದಲ ಪಂದ್ಯವನ್ನ ಗೆದ್ದು ಶುಭಾರಂಭ ಮಾಡುತ್ತಾ ಎಂಬ ನಿರೀಕ್ಷೆ, ಕುತೂಹಲ ಇದೆ. ಇದರ ಜೊತೆಗೆ ಟೀಮ್ ಇಂಡಿಯಾದ ಕೆಲ ಆಟಗಾರರ ವೈಯಕ್ತಿಕ ಮೈಲಿಗಲ್ಲು, ದಾಖಲೆಗಳ ಮೇಲೂ ಅನೇಕ ಚಿತ್ತ ನೆಟ್ಟಿದೆ. ಮುಖ್ಯವಾಗಿ ವಿರಾಟ್ ಕೊಹ್ಲಿ (Virat Kohli) ಮತ್ತು ರಿಷಭ್ ಪಂತ್ (Rishabh Pant) ಕೆಲ ದಾಖಲೆ ಮತ್ತು ಮೈಲಿಗಲ್ಲುಗಳ ದಡದಲ್ಲಿದ್ಧಾರೆ.

  ಟೆಸ್ಟ್ ಕ್ರಿಕೆಟ್​ನಲ್ಲಿ ಈವರೆಗೆ 97 ಟೆಸ್ಟ್ ಪಂದ್ಯ ಆಡಿರುವ ವಿರಾಟ್ ಕೊಹ್ಲಿ 50.65 ಸರಾಸರಿಯಲ್ಲಿ 7801 ರನ್ ಗಳಿಸಿದ್ದಾರೆ. ಅವರು ಇನ್ನೂ 199 ರನ್ ಗಳಿಸಿದರೆ 8 ಸಾವಿರ ರನ್​ಗಳ ಮೈಲಿಗಲ್ಲು ಮುಟ್ಟಲಿದ್ದಾರೆ. ಈ ಸಾಧನೆ ಮಾಡಿದ ಆರನೇ ಭಾರತೀಯ ಹಾಗೂ ವಿಶ್ವದ 33ನೇ ಭಾರತೀಯ ಎನಿಸಲಿದ್ಧಾರೆ.

  ಎರಡು ವರ್ಷಗಳಿಂದ ಒಂದೂ ಟೆಸ್ಟ್ ಶತಕ ಭಾರಿಸದ ವಿರಾಟ್ ಕೊಹ್ಲಿ ಹರಿಣಗಳ ನಾಡಿನಲ್ಲಿ ಒಂದಾದರೂ ಶತಕ ಭಾರಿಸುವ ನಿರೀಕ್ಷೆ ಇದೆ. ಸದ್ಯ ವಿಶ್ವದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಭಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ ಜಂಟಿ 17ನೇ ಸ್ಥಾನದಲ್ಲಿದ್ಧಾರೆ.

  ವಿಕೆಟ್ ಕೀಪರ್ ರಿಷಭ್ ಪಂತ್ ಒಂದು ಮಹತ್ವದ ದಾಖಲೆಯ ಹೊಸ್ತಿಲಲ್ಲಿದ್ಧಾರೆ. 25 ಟೆಸ್ಟ್ ಪಂದ್ಯಗಳಿಂದ 97 ಮಂದಿಯನ್ನ ಔಟ್ ಮಾಡಿರುವ (ಸ್ಟಂಪಿಂಗ್, ಕ್ಯಾಚ್) ರಿಷಭ್ ಪಂತ್ ಇನ್ನು ಮೂರು ಮಂದಿಯನ್ನ ಔಟ್ ಮಾಡಿದರೆ 100ರ ಗಡಿ ಮುಟ್ಟುತ್ತಾರೆ. ಧೋನಿ ದಾಖಲೆಯನ್ನ ಮುರಿಯಲಿದ್ದಾರೆ. ಈ ವೇಳೆ ಅತಿ ಕಡಿಮೆ ಪಂದ್ಯಗಳಲ್ಲಿ 100 ಮಂದಿಯನ್ನ ಔಟ್ ಮಾಡಿದ ದಾಖಲೆ ಅವರದ್ದಾಗಲಿದೆ.

  ಇದನ್ನೂ ಓದಿ: IPL Auction: ಫೆ. 12-13ಕ್ಕೆ ಬೆಂಗಳೂರಿನಲ್ಲೇ ಮೆಗಾ ಹರಾಜು: ಮತ್ತೆ​ ಭಾರತ-ವೆಸ್ಟ್​ ಇಂಡೀಸ್​ ಪಂದ್ಯದ ಕಥೆಯೇನು?

  ಸೌತ್ ಆಫ್ರಿಕಾ ಸರಣಿಗೆ ರಿಷಭ್ ಪಂತ್ ಜೊತೆ ಟೀಮ್ ಇಂಡಿಯಾದಲ್ಲಿರುವ ವೃದ್ಧಿಮಾನ್ ಸಾಹ ಅವರು ಪಂತ್​ಗಿಂತ 7 ಹೆಚ್ಚು ಮಂದಿಯನ್ನ ಔಟ್ ಮಾಡಿದ್ಧಾರೆ. ಈ ಪಟ್ಟಿಯಲ್ಲಿ ಎಂಎಸ್ ಧೋನಿ, ಸಯದ್ ಕಿರ್ಮಾನಿ, ಕಿರಣ್ ಮೋರೆ, ನಯನ್ ಮೊಂಗಿಯಾ ಮತ್ತು ವೃದ್ಧಿಮಾನ್ ಸಾಹ ಅವರು ರಿಷಭ್ ಪಂತ್ ಅವರಿಗಿಂತ ಹೆಚ್ಚು ನಂಬರ್ ಹೊಂದಿದ್ಧಾರೆ.

  ವಿರಾಟ್ ಕೊಹ್ಲಿ:

  1) ಟೆಸ್ಟ್ ಕ್ರಿಕೆಟ್​ನಲ್ಲಿ ಎಂಟು ಸಾವಿರ ರನ್ ಗಡಿ ಮುಟ್ಟಲು ಕೊಹ್ಲಿಗೆ 199 ರನ್ ಮಾತ್ರ ಅಗತ್ಯ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುನೀಲ್ ಗವಾಸ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ವಿರೇಂದರ್ ಸೆಹ್ವಾಗ್ ಮಾತ್ರವೇ 8 ಸಾವಿರ ಟೆಸ್ಟ್ ರನ್ ಗಳಿಸಿರುವ ಭಾರತೀಯ ಕ್ರಿಕೆಟಿಗರು.

  2) ಸರಣಿಯ ಎಲ್ಲಾ ಮೂರು ಪಂದ್ಯಗಳನ್ನ ಆಡಿದರೆ ವಿರಾಟ್ ಕೊಹ್ಲಿ ನೂರು ಟೆಸ್ಟ್ ಆಡಿದ ಮೈಲಿಗಲ್ಲು ಮುಟ್ಟುತ್ತಾರೆ.

  3) ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ 27 ಶತಕ ಭಾರಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವ ಕ್ರಿಕೆಟಿಗರ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದಾರೆ. ಇನ್ನೊಂದು ಶತಕ ಗಳಿಸಿದರೆ 16ನೇ ಸ್ಥಾನಕ್ಕೇರುತ್ತಾರೆ. ಭಾರತೀಯರ ಕ್ರಿಕೆಟಿಗರ ಪೈಕಿ ವಿರಾಟ್ ಕೊಹ್ಲಿಗಿಂತ ಹೆಚ್ಚು ಶತಕ ಭಾರಿಸಿರುವುದು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನೀಲ್ ಗವಾಸ್ಕರ್ ಮಾತ್ರವೇ.

  ಇದನ್ನೂ ಓದಿ: Asian champions trophy 2021: ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ ಭಾರತ ಹಾಕಿ ತಂಡ: ಕಂಚಿನ ಪದಕಕ್ಕೆ ಮುತ್ತಿಟ್ಟ ನಮ್​ ಹುಡುಗ್ರು!

  ರಿಷಬ್ ಪಂತ್ ಸಾಧನೆ:

  1) ರಿಷಭ್ ಪಂತ್ 25 ಟೆಸ್ಟ್ ಪಂದ್ಯಗಳಲ್ಲಿ 97 ಬ್ಯಾಟುಗಾರರನ್ನ ಔಟ್ ಮಾಡಿದ್ದಾರೆ. ಇನ್ನು 3 ಮಂದಿಯನ್ನ ಔಟ್ ಮಾಡಿದರೆ 100ರ ಮೈಲಿಗಲ್ಲು ಮುಟ್ಟುತ್ತಾರೆ. ಅತಿ ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ ನೂರು ಮಂದಿಯನ್ನ ಔಟ್ ಮಾಡಿದ ದಾಖಲೆಗೆ ಪಂತ್ ಬಾಜನರಾಗಲಿದ್ದಾರೆ.
  Published by:Vijayasarthy SN
  First published: