Virat Kohli: ನನ್ನ ಅತೀ ಕಷ್ಟದ ಕಾಲದಲ್ಲಿ ಫೋನ್ ಮಾಡಿದ್ದು ಧೋನಿ ಮಾತ್ರ, ಇನ್ಯಾರೂ ಅಲ್ಲ!

ಭಾರತ ಮತ್ತು ಪಾಕಿಸ್ತಾನ ಮಹತ್ವದ ಕ್ರಿಕೆಟ್ ಪಂದ್ಯದ ನಂತರ ವಿರಾಟ್ ಕೊಹ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಆಘಾತಕಾರಿ ಸಂಗತಿಗಳನ್ನು ಸಹ ಬಹಿರಂಗಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ ಅವರು ಪ್ರಸ್ತುತ ಪಂದ್ಯದ ಬಗ್ಗೆ ಮಾತಾಡುವುದಲ್ಲದೆ, ತಮ್ಮ ಟೆಸ್ಟ್ ಕ್ರಿಕೆಟ್ ನ ನಾಯಕತ್ವವನ್ನು ತೊರೆದ ಬಗ್ಗೆ ಸಹ ಕೆಲವೊಂದು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ನೋಡಿ.

ವಿರಾಟ್ ಕೊಹ್ಲಿ ಮತ್ತು ಎಂ ಎಸ್ ಧೋನಿ

ವಿರಾಟ್ ಕೊಹ್ಲಿ ಮತ್ತು ಎಂ ಎಸ್ ಧೋನಿ

  • Share this:
ನಿನ್ನೆ ರಾತ್ರಿ ಬಹುತೇಕರು ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆದ ಭಾರತ (India) ಮತ್ತು ಪಾಕಿಸ್ತಾನ (Pakistan) ಕ್ರಿಕೆಟ್ ಪಂದ್ಯವನ್ನು ಟಿವಿಯಲ್ಲಿ ನೋಡಿಯೇ ಇರುತ್ತೀರಿ. ಭಾರತದ ಪರ ವಿರಾಟ್ ಕೊಹ್ಲಿ (Virat Kohli) ಅವರು ಕೇವಲ 44 ಎಸೆತಗಳಲ್ಲಿ 60 ರನ್ ಗಳನ್ನು ಗಳಿಸಿದರೂ ಸಹ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಕೊನೆಗೆ ಪಾಕಿಸ್ತಾನ ತಂಡವು ಭಾರತದ ವಿರುದ್ಧ ಐದು ವಿಕೆಟ್ (Wicket) ಗಳಿಂದ ಜಯ ಸಾಧಿಸಿತು. ಈ ಮಹತ್ವದ ಪಂದ್ಯದ ನಂತರ ವಿರಾಟ್ ಕೊಹ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಆಘಾತಕಾರಿ ಸಂಗತಿಗಳನ್ನು ಸಹ ಬಹಿರಂಗಪಡಿಸಿದರು. ಮಾಧ್ಯಮಗಳೊಂದಿಗೆ (Media) ಮಾತನಾಡಿದ ವಿರಾಟ್ ಕೊಹ್ಲಿ ಅವರು ಪ್ರಸ್ತುತ ಪಂದ್ಯದ ಬಗ್ಗೆ ಮಾತಾಡುವುದಲ್ಲದೆ, ತಮ್ಮ ಟೆಸ್ಟ್ ಕ್ರಿಕೆಟ್ ನ (Test Cricket) ನಾಯಕತ್ವವನ್ನು ತೊರೆದ ಬಗ್ಗೆ ಸಹ ಕೆಲವೊಂದು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ನೋಡಿ.

ಕೊಹ್ಲಿ ಅವರು ಮಾತಾಡುತ್ತಾ “ಈ ವರ್ಷದ ಆರಂಭದಲ್ಲಿ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ ನಂತರ ನನಗೆ ಕೇವಲ ಎಂ ಎಸ್ ಧೋನಿ ಅವರಷ್ಟೇ ಫೋನ್ ಕರೆ ಮಾಡಿದ್ದರು, ಅವರನ್ನು ಹೊರತುಪಡಿಸಿ ಬೇರೆ ಯಾರಿಂದಲೂ ನನಗೆ ಕರೆಗಳು ಬಂದಿಲ್ಲ” ಎಂದು ಹೇಳಿದರು.

ವಿರಾಟ್ ಕ್ರಿಕೆಟ್ ನ ನಾಯಕತ್ವವನ್ನು ತ್ಯಜಿಸಲು ಕಾರಣ
2021 ರ ಟ್ವೆಂಟಿ20 ವಿಶ್ವಕಪ್ ನಿಂದ ಭಾರತ ಮೊದಲ ಪಂದ್ಯದಲ್ಲೇ ಎದುರಾಳಿ ಪಾಕಿಸ್ತಾನ ವಿರುದ್ಧ ಸೋತ ನಂತರ ನಾಕ್ಔಟ್ ಆದಾಗ ಕೊಹ್ಲಿ ಅವರು ಒಂದೊಂದಾಗಿ ಎಲ್ಲಾ ಮಾದರಿಯ ಕ್ರಿಕೆಟ್ ನ ನಾಯಕತ್ವವನ್ನು ತ್ಯಜಿಸಿದರು. ಹೀಗೆ ಟ್ವೆಂಟಿ20 ವಿಶ್ವಕಪ್ ನಿಂದ ಹೊರ ಬಿದ್ದ ನಂತರ ವಿರಾಟ್ ಕೊಹ್ಲಿ ಅವರು ತಮ್ಮ ಟ್ವೆಂಟಿ20 ಕ್ರಿಕೆಟ್ ನ ನಾಯಕತ್ವವನ್ನು ತೊರೆದರು ಮತ್ತು ನಂತರ ಅವರ ಏಕದಿನ ನಾಯಕತ್ವವನ್ನು ಬಿಸಿಸಿಐ ಕಸಿದುಕೊಂಡಿತು ಎನ್ನಬಹುದು.

ಟೆಸ್ಟ್ ನಾಯಕತ್ವವನ್ನು ತೊರೆದಾಗ, ಧೋನಿ ಮಾತ್ರ ಕರೆ ಮಾಡಿದ್ರು 
ಏತನ್ಮಧ್ಯೆ, ಜನವರಿ 2022 ರಲ್ಲಿ ಅವರು ತಮ್ಮ ಟೆಸ್ಟ್ ಕ್ರಿಕೆಟ್ ನ ನಾಯಕತ್ವದ ಕೆಲಸವನ್ನು ಸಹ ತೊರೆದರು. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೊಹ್ಲಿ ಅವರು ಈ ವಿಷಯವನ್ನು ಮಾಧ್ಯಮದವರೊಂದಿಗೆ ಹಂಚಿಕೊಳ್ಳುವುದಕ್ಕೆ ಒಂದು ಕ್ಷಣವು ಹಿಂದೆ ಮುಂದೆ ನೋಡಲಿಲ್ಲ. "ನಾನು ನನ್ನ ಟೆಸ್ಟ್ ನಾಯಕತ್ವವನ್ನು ತೊರೆದಾಗ, ಧೋನಿ ಮಾತ್ರ ನನಗೆ ಕರೆ ಮಾಡಿದರು, ಅನೇಕರು ನನ್ನ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದರೂ ಸಹ ಬೇರೆ ಯಾರೂ ನನಗೆ ಒಂದು ಕರೆ ಸಹ ಮಾಡಲಿಲ್ಲ" ಎಂದು ಅವರು ಹೇಳಿದರು.

ಇದನ್ನೂ ಓದಿ:  India vs Pakistan: ಈ 5 ಕಾರಣಗಳಿಂದಲೇ ಪಾಕ್​ ಎದುರು ಸೋತ ಭಾರತ! ಅವ್ರೊಬ್ಬರಿಗೆ ಬೌಲಿಂಗ್​ ನೀಡದೇ ಎಡವಿದ್ರಾ ರೋಹಿತ್​?

"ನೀವು ಯಾರೊಂದಿಗಾದರೂ ಒಂದು ನಿರ್ದಿಷ್ಟ ಪ್ರಮಾಣದ ಗೌರವ ಮತ್ತು ಸಂಪರ್ಕವನ್ನು ಹೊಂದಿದ್ದೀರಿ ಅಂತಾದರೆ ಅದು ನಿಜವಾಗಿಯೂ ಹೊರಗೆ ಕಾಣುತ್ತದೆ. ಇದು ಸಂಬಂಧದಲ್ಲಿ ಭದ್ರತೆ ಇದೆ ಎಂದು ತೋರಿಸುತ್ತದೆ. ನಾನು ಯಾರಿಗಾದರೂ ಏನನ್ನಾದರೂ ಹೇಳಲು ಬಯಸಿದರೆ, ನಾನು ಸಾರ್ವಜನಿಕವಾಗಿ ಹೋಗಿ ಅದರ ಬಗ್ಗೆ ಮಾತನಾಡುವ ಬದಲು, ವೈಯಕ್ತಿಕವಾಗಿ ಅವರನ್ನು ಸಂಪರ್ಕಿಸುತ್ತೇನೆ ಮತ್ತು ನಾನು ಏನು ಯೋಚಿಸುತ್ತೇನೆ ಮತ್ತು ಏನು ಮಾಡಬೇಕು ಎಂದು ಅವರಿಗೆ ಹೇಳುತ್ತೇನೆ" ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಅವರು ಗಳಿಸಿದ ಅತ್ಯಧಿಕ ಸ್ಕೋರ್
ಇದಕ್ಕೂ ಮುನ್ನ ಕೊಹ್ಲಿ ಅವರು ತಮ್ಮ ಅಮೋಘವಾದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿಸಿದರು. ತಾವು ಬಾರಿಸಿದ 60 ರನ್ ಗಳಲ್ಲಿ ನಾಲ್ಕು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಅವರು ಗಳಿಸಿದ ಅತ್ಯಧಿಕ ಸ್ಕೋರ್ ಅಂತ ಸಹ ಹೇಳಬಹುದು. ಅಮೋಘವಾದ ಆಟದಿಂದ ಭಾರತ ತಂಡವನ್ನು ಗೌರವಾನ್ವಿತ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ಕೊಂಡೊಯ್ದರು.

ಇದನ್ನೂ ಓದಿ:  MS Dhoni: ಧೋನಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

ಎಲ್ಲಾ ಬ್ಯಾಟ್ಸ್ಮನ್ ಗಳು ಒಂದು ಕಡೆಯಲ್ಲಿ ಕೆಲವೇ ಕೆಲವು ರನ್ ಗಳಿಸಿ ಪೆವಿಲಿಯನ್ ಗೆ ಮರಳುತ್ತಿದ್ದರೆ, ಒಂದು ಕಡೆಯಲ್ಲಿ ವಿರಾಟ್ ತಮ್ಮ ಆಟವನ್ನು ಹಾಗೆಯೇ ಮುಂದುವರೆಸಿದ್ದರು.  ಮಿಡ್ ವಿಕೆಟ್ ಸ್ಟ್ಯಾಂಡ್ ಗಳಲ್ಲಿ ಸಿಕ್ಸ್ ಹೊಡೆಯುವ ಮೂಲಕ ಅವರು ತಮ್ಮ ಅರ್ಧಶತಕವನ್ನು ಕೇವಲ 36 ಎಸೆತಗಳಲ್ಲಿಯೇ ತಲುಪಿದರು.
Published by:Ashwini Prabhu
First published: