Virat Kohli-Anushka Sharma: ವಿರಾಟ್-ಅನುಷ್ಕಾ ನಡುವೆ ಪ್ರೀತಿ ಹುಟ್ಟಿದ್ದು ಹೀಗಂತೆ! ವಿರಾಟ್ ಬಿಚ್ಚಿಟ್ಟ ಪ್ರೇಮಕತೆ...

2019ರಲ್ಲಿ ಇನ್ ಡೆಪ್ತ್ ವಿತ್ ಗ್ರಹಮ್ ಬೆನ್‍ಸಿಂಗರ್ ಎಂಬ ಟಾಕ್ ಶೋನಲ್ಲಿ ವಿರಾಟ್ ಅನುಷ್ಕಾ ಜೊತೆಗಿನ ತಮ್ಮ ಮೊದಲ ಭೇಟಿಯ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ತನಗೆ ಕೊಂಚ ಹೆದರಿಕೆ ಆಗಿತ್ತು, ಹಾಗಾಗಿ ಜೋಕ್‍ಗಳನ್ನು ಹೇಳುತ್ತಿದ್ದೆ ಎಂದಿದ್ದಾರೆ ವಿರಾಟ್.

ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ

ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ

  • Share this:

Anushka Sharma - Virat Kohli: ಭಾರತೀಯರ ಅಚ್ಚುಮೆಚ್ಚಿನ ಕ್ರಿಕೆಟ್‌ ತಾರೆ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾರ ಪ್ರೇಮ ಕತೆ ಯಾವುದೇ ‘ಫೇರಿ ಟೇಲ್’ಗೆ ಕಡಿಮೆ ಇಲ್ಲ. ಅದು ಶುರುವಾಗಿದ್ದು 2013ರಲ್ಲಿ. ಅವರಿಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದು ಶಾಂಪೂ ಜಾಹೀರಾತಿನ ಶೂಟಿಂಗ್ ಒಂದರಲ್ಲಿ. ಮತ್ತೊಬ್ಬ ಜನಪ್ರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರೊಂದಿಗಿನ ಸಂದರ್ಶನದಲ್ಲಿ, ತಾವು ಮೊದಲ ಬಾರಿಗೆ ಅನುಷ್ಕಾರನ್ನು ಭೇಟಿಯಾಗಿದ್ದು ಮತ್ತು ಅವರಿಬ್ಬರು ಮಾತನಾಡಲು ಕಾರಣವಾದ ಸನ್ನಿವೇಶದ ನೆನಪುಗಳನ್ನು ಹಂಚಿಕೊಂಡಿದ್ದಾರೆ ವಿರಾಟ್ ಕೊಹ್ಲಿ. ಅನುಷ್ಕಾ ಜೊತೆ ಜೋಕು ಮಾಡುತ್ತಾ ಮಾಡುತ್ತಾ ಒಂದು ಹಂತದಲ್ಲಿ ಅವರ ಜೊತೆ ಭಾಂದವ್ಯ ಬೆಸೆಯಲು ಆರಂಭವಾಗಿದ್ದನ್ನು 32 ವರ್ಷದ ಕ್ರಿಕೆಟಿಗ ಹೇಳಿದ್ದಾರೆ. “ನಾನು ಎಲ್ಲರೊಂದಿಗೆ ಜೋಕ್ ಮಾಡುತ್ತಿದ್ದೆ. ಹಾಗೆಯೇ ಅವಳೊಂದಿಗೂ ಜೋಕ್ ಮಾಡಲು ಆರಂಭಿಸಿದೆ. ‘ನಾನು ಬಾಲ್ಯದಲ್ಲಿ ಅನುಭವ ಮಾಡಿರುವ ಸಂಗತಿಗಳ ಬಗ್ಗೆ, ನನ್ನೊಡನೆ ಜೋಕ್ಸ್ ಮಾಡಿದ ವ್ಯಕ್ತಿಯನ್ನು ಕಂಡಿದ್ದು ಇದೇ ಮೊದಲ ಬಾರಿ’ ಎಂದಳು ಅನುಷ್ಕಾ. ಅದು ನಿಜಕ್ಕೂ ಕನೆಕ್ಸ್ ಆಯಿತು” ಎಂದು ವಿರಾಟ್ ದಿನೇಶ್ ಕಾರ್ತಿಕ್‍ಗೆ ಹೇಳಿದ್ದಾರೆ.


2019ರಲ್ಲಿ ಇನ್ ಡೆಪ್ತ್ ವಿತ್ ಗ್ರಹಮ್ ಬೆನ್‍ಸಿಂಗರ್ ಎಂಬ ಟಾಕ್ ಶೋನಲ್ಲಿ ವಿರಾಟ್ ಅನುಷ್ಕಾ ಜೊತೆಗಿನ ತಮ್ಮ ಮೊದಲ ಭೇಟಿಯ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ತನಗೆ ಕೊಂಚ ಹೆದರಿಕೆ ಆಗಿತ್ತು, ಹಾಗಾಗಿ ಜೋಕ್‍ಗಳನ್ನು ಹೇಳುತ್ತಿದ್ದೆ ಎಂದಿದ್ದಾರೆ ವಿರಾಟ್.


“ಮೊದಲ ಬಾರಿ ಆಕೆಯನ್ನು ಭೇಟಿ ಆದಾಗ ಕೂಡಲೇ ಒಂದು ಜೋಕ್ ಹೇಳಿಬಿಟ್ಟೆ, ಏಕೆಂದರೆ ನಾನು ಹೆದರಿದ್ದೆ. ನನಗೇನು ಮಾಡಬೇಕು ಎಂದು ಗೊತ್ತಾಗಲಿಲ್ಲ, ಅದಕ್ಕೆ ಜೋಕ್ ಹೇಳಿಬಿಟ್ಟೆ” .“ನಾನು ಅಂದು ಅಸಮಂಜಸವಾದದ್ದನೇನೋ ಹೇಳಿಬಿಟ್ಟಿದ್ದೆ” ಎಂದು ವಿರಾಟ್ ಸಂದರ್ಶನದಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: Zameer Ahmed: ಶಾಸಕ ಜಮೀರ್ ಮನೆ ಮೇಲಿನ ED Raid ರೇಡ್ ಅಂತ್ಯ, ಮನೆಯಲ್ಲಿ ಸಿಕ್ಕಿದ್ದೇನು? ಫೋನ್ ಮಾಡಿದಾಗ ಥಟ್ಟನೆ ವಿಚಾರಣೆಗೆ ಬರ್ಬೇಕು ಎಂದಿದ್ದಾರೆ ಅಧಿಕಾರಿಗಳು

ಅವರು ಜಾಹೀರಾತಿನ ಸೆಟ್‍ನಲ್ಲಿ ಅನುಷ್ಕಾಗೆ ಹೇಳಿದ್ದು ಹೀಗಿದೆ: “ನಿಮಗೆ ಎತ್ತರದ ಹೀಲ್ಡ್ಸ್ ಸಿಗಲಿಲ್ಲವೇ?”.ಅದಕ್ಕೆ ಅನುಷ್ಕಾ 'ಎಕ್ಸ್‌ಕ್ಯೂಸ್‌ಮಿ' ಎಂಬಂತೆ ನೋಡಿದರೆ, “ಇಲ್ಲ, ನಾನು ಸುಮ್ಮನೆ ಜೋಕ್ ಮಾಡುತ್ತಿದ್ದೆ” ಎಂದು ವಿರಾಟ್ ಹೇಳಿದ್ದರಂತೆ. ನನ್ನ ಜೋಕ್ ಆ ಕ್ಷಣದಲ್ಲಿ ವಿಲಕ್ಷಣವೆನಿಸಿಬಿಟ್ಟಿತ್ತು. ನಾನೆಂತ ದಡ್ಡನಾಗಿದ್ದೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವಳು ತುಂಬಾ ಆತ್ಮ ವಿಶ್ವಾಸದಿಂದಿದ್ದಳು” ಎಂದಿದ್ದಾರೆ ವಿರಾಟ್.


ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2014ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಒಮ್ಮೆ ವಿರಾಟ್ “ಹೃದಯ ಒಡೆದಿದೆ” ಎಂಬ ಅಡಿಬರಹದೊಂದಿಗೆ ತನ್ನ ಸೆಲ್ಫಿಯೊಂದನ್ನು ಪೋಸ್ಟ್ ಮಾಡಿದಾಗ, ಅವರಿಬ್ಬರ ಸಂಬಂಧ ಮುರಿದುಬಿದ್ದ ಬಗ್ಗೆ ಗಾಳಿಸುದ್ದಿ ಎದ್ದಿತ್ತು.


ಬಳಿಕ ವಿರಾಟ್ ಆ ಪೋಸ್ಟನ್ನು ತೆಗೆದು ಹಾಕಿದ್ದರು. ನಂತರದ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ವಿರಾಟ್ ಮತ್ತು ಅನುಷ್ಕಾ ಜೊತೆಗಿರುವ ಫೋಟೋಗಳು ಅವರಿಬ್ಬರು ಮತ್ತೆ ಒಂದಾಗಿದ್ದಾರೆ ಎಂಬುದನ್ನು ಸೂಚಿಸಿದ್ದವು. 2017ರಲ್ಲಿ ಅವರಿಬ್ಬರು ಇಟಲಿಯಲ್ಲಿ ಮದುವೆಯಾದರು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: