Virat and Anushka: ಮೊದಲ ಬಾರಿ ನನ್ನ ಜೊತೆ ಜಾಹೀರಾತಿನಲ್ಲಿ ನಟಿಸಲು ಸಿಕ್ಕಾಪಟ್ಟೆ ನರ್ವಸ್​ ಆಗಿದ್ರು ವಿರಾಟ್​​

Virat Kohli Love Story: ವಿರಾಟ್ ಕೊಹ್ಲಿ ಸಾಕಷ್ಟು ಕುಳ್ಳ ಎಂದು ಅನುಷ್ಕಾ ಶರ್ಮಾ ಭಾವಿಸಿದ್ದರಂತೆ.. ಹೀಗಾಗಿಯೇ ಜಾಹೀರಾತು ಚಿತ್ರೀಕರಣದ ವೇಳೆ ವಿರಾಟ್ ಕೊಹ್ಲಿಗೆ ಸರಿ ಹೊಂದಲು ಅನುಷ್ಕಾ ಶರ್ಮಾ ಹೈಹೀಲ್ಸ್ ಧರಿಸಿರಲಿಲ್ಲವಂತೆ.. ಆದ್ರೂ ಕೂಡ ಅನುಷ್ಕಾ ವಿರಾಟ್ ಕೊಹ್ಲಿ ಗಿಂತ ಉದ್ದವಾಗಿ ಕಾಣಿಸುತ್ತಿದ್ದರಂತೆ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ

  • Share this:
    ವಿರಾಟ್ ಕೊಹ್ಲಿ(Virat Kohli) ಹಾಗೂ ಅನುಷ್ಕಾ ಶರ್ಮಾ(Anushka Sharma) ಬಾಲಿವುಡ್(Bollywood) ಹಾಗೂ ಕ್ರಿಕೆಟ್(Cricket) ಕ್ಯೂಟ್ ಜೋಡಿಗಳಲ್ಲಿ(Cute Couple) ಒಬ್ಬರು.. ಯಾವುದೇ ಪರಿಸ್ಥಿತಿಯಲ್ಲಿ ಒಬ್ಬರನ್ನೊಬ್ಬರು ಬಿಟ್ಟು ಕೊಡದ ಈ ಜೋಡಿ ಸ್ಟಾರ್ ದಂಪತಿಗಳು(Star Couple) ಹೇಗೆ ಇರಬೇಕು ಎಂಬುದಕ್ಕೆ ಒಂದು ಉದಾಹರಣೆ.. ತಮ್ಮ ದಾಂಪತ್ಯ ಜೀವನಕ್ಕೆ ಮಗಳು ವಮಿಕಾಳನ್ನು(Vamika Kohli) ಬರ ಮಾಡಿಕೊಂಡಿರುವ ಈ ಜೋಡಿ ಮಗಳ ಲಾಲನೆ ಪಾಲನೆ ಜೊತೆಗೆ ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಬ್ಯುಸಿ ಆಗಿದೆ.. ಹೀಗಿದ್ದರೂ ಕೂಡ ಇಂದಿಗೂ ಈ ಜೋಡಿಯ ಲವ್ ಸ್ಟೋರಿ ಹಾಗೂ ಮೊದಲ ಭೇಟಿ ಸಾಕಷ್ಟು ಸುದ್ದಿ ಮಾಡುತ್ತಲೇ ಇರುತ್ತದೆ.. ಅಭಿಮಾನಿಗಳು ಈ ಜೋಡಿಯ ಮೊದಲ ಭೇಟಿ ಹೇಗಾಯಿತು ಅವರು ಏನೇನೋ ಮಾತನಾಡಿರಬಹುದು ಎಂಬ ಬಗ್ಗೆ ಸದಾ ಚರ್ಚೆ ಮಾಡುತ್ತಲೇ ಇರುತ್ತದೆ. ಹೀಗಾಗಿಯೇ ವಿರಾಟ್ ಕೊಹಿಲಿ ಆಗಲಿ ಅನುಷ್ಕಾ ಶರ್ಮಾ ಆಗಲಿ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಹೋದರೆ ಅಲ್ಲಿ ಎದುರಾಗುವ ಪ್ರಶ್ನೆ ಅವರಿಬ್ಬರ ಮೊದಲ ಭೇಟಿ ಬಗ್ಗೆ..

    ಜಾಹೀರಾತು ಚಿತ್ರೀಕರಣದಲ್ಲಿ ಭೇಟಿಯಾಗಿದ್ದ ವಿರಾಟ್-ಅನುಷ್ಕಾ

    ನಿಮಗೆಲ್ಲ ತಿಳಿದಿರುವಂತೆ 2013ರಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕ್ಲಿಯರ್ ಹೇರ್ ಶಾಂಪುವಿನ ಜಾಹೀರಾತಿನಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು.. ಕಪ್ಪು ಬಣ್ಣದ ಬಟ್ಟೆ ಧರಿಸಿ ಸಿಕ್ಕಾಪಟ್ಟೆ ಹಾಟಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಅಂದೇ ಇವರಿಬ್ಬರ ಮಧ್ಯೆ ಏನು ನಡೆಯಬಹುದು ಎನ್ನುವ ಮುನ್ಸೂಚನೆಯನ್ನು ನೀಡಿದ್ರು.. ಅಭಿಮಾನಿಗಳ ನಿರೀಕ್ಷೆಯಂತೆಯೇ ಕೊನೆಗೂ ಇವರಿಬ್ಬರು ಪ್ರೀತಿಯಲ್ಲಿ ಬಿದ್ದು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..ಇದು ನಮಗೆಲ್ಲ ಗೊತ್ತಿರುವ ವಿಚಾರ.. ಆದರೆ ಈ ಜೋಡಿಯ ಮೊದಲ ಭೇಟಿ ವೇಳೆ ಆಗಿದ್ದು ಏನು ಅನ್ನುವ ಮಾಹಿತಿ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ.. ಅದರ ಬಗ್ಗೆ ಇಲ್ಲಿದೆ ಮಾಹಿತಿ

    ಇದನ್ನೂ ಓದಿ: ಕೊನೆಗೂ ಅಭಿಮಾನಿಗಳಿಗೆ ಸಿಕ್ತು ಕೊಹ್ಲಿ ಪುತ್ರಿ ದರ್ಶನ.. ಥೇಟ್​ ಅಪ್ಪನಂತೆ ಮುದ್ದಾಗಿದ್ದಾಳೆ ವಮಿಕಾ!

    ಅನುಷ್ಕಾ ಜೊತೆ ಜಾಹೀರಾತುವಿನಲ್ಲಿ ನಟಿಸಬೇಕು ಎಂದಾಗ ಶಾಕ್ ಆಗಿದ್ದ ಕೊಹ್ಲಿ

    ಇನ್ನು ವಿರಾಟ್ ಕೊಹ್ಲಿ ಆಗತಾನೇ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡುತ್ತಿದ್ದವರು. ಅದಾಗಲೇ ಬಾಲಿವುಡ್ ನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಅನುಷ್ಕಾ ಶರ್ಮಾ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸ್ಸು ಗೆದ್ದಿದ್ದರು.. ಈ ವೇಳೆ ಅನುಷ್ಕಾ ಶರ್ಮ ಜೊತೆಗೆ ನೀವು ಜಾಹೀರಾತೊಂದರಲ್ಲಿ ನಟಿಸಬೇಕು ಎಂದು ಕೊಹ್ಲಿಗೆ ಅವರ ಮ್ಯಾನೇಜರ್ ಹೇಳಿದ್ದಾರೆ.. ಈ ಮಾತನ್ನ ಕೇಳಿದ್ದ ಕೊಹ್ಲಿ ನಾನು ಪ್ರೊಫೆಷನಲ್ ಆಕ್ಟರ್ ಜೊತೆ ನಟಿಸ್ಬೇಕಾ ಎಂದು ಅಚ್ಚರಿಪಟ್ಟಿದ್ದರಂತೆ. ಅಲ್ಲದೆ ಜಾಹೀರಾತಿನ ಮೊದಲ ದಿನದ ಚಿತ್ರೀಕರಣದ ವೇಳೆ ಅನುಷ್ಕಾ ಶರ್ಮಾರನ್ನು ನೋಡಿ ವಿರಾಟ್ ಕೊಹ್ಲಿ ಸಾಕಷ್ಟು ನರ್ವಸ್ ಆಗಿದ್ದರಂತೆ.. ಅಲ್ಲದೆ ಜಾಹೀರಾತು ಚಿತ್ರೀಕರಣ ಮಾಡುವ ವೇಳೆ ಅನುಷ್ಕಾ ಕುರಿತು ವಿರಾಟ್ ಕೊಹ್ಲಿ ಜೋಕ್ ಮಾಡಿದ್ದಾರಂತೆ.

    ಕೊಹ್ಲಿ ಕುಳ್ಳ ಎಂದು ಭಾವಿಸಿದ್ದ ಅನುಷ್ಕಾ..

    ಇನ್ನು ವಿರಾಟ್ ಕೊಹ್ಲಿ ಸಾಕಷ್ಟು ಕುಳ್ಳ ಎಂದು ಅನುಷ್ಕಾ ಶರ್ಮಾ ಭಾವಿಸಿದ್ದರಂತೆ.. ಹೀಗಾಗಿಯೇ ಜಾಹೀರಾತು ಚಿತ್ರೀಕರಣದ ವೇಳೆ ವಿರಾಟ್ ಕೊಹ್ಲಿಗೆ ಸರಿ ಹೊಂದಲು ಅನುಷ್ಕಾ ಶರ್ಮಾ ಹೈಹೀಲ್ಸ್ ಧರಿಸಿರಲಿಲ್ಲವಂತೆ.. ಆದ್ರೂ ಕೂಡ ಅನುಷ್ಕಾ ವಿರಾಟ್ ಕೊಹ್ಲಿ ಗಿಂತ ಉದ್ದವಾಗಿ ಕಾಣಿಸುತ್ತಿದ್ದರಂತೆ.. ಆದ್ರೂ ವಿರಾಟ್ ಕೊಹ್ಲಿ ಅನುಷ್ಕಾರ ಹೀಲ್ಸ್ ನೋಡಿ ಹೈಹೀಲ್ಸ್ ಇರ್ಲಿಲ್ವಾ ಅಂತ ಪ್ರಶ್ನಿಸಿ ತಮಾಷೆ ಮಾಡಿದ್ದರು ಕೊಹ್ಲಿ. ಎಕ್ಸ್‌ಕ್ಯೂಸ್ ಮಿ ಎಂದು ನಕ್ಕಿದ್ದರು ಅನುಷ್ಕಾ. ಇನ್ನು ಮೂರುದಿನಗಳ ಶೂಟಿಂಗ್‌ನಲ್ಲಿ ತಮ್ಮಿಬ್ಬರಲ್ಲಿ ಬಹಳಷ್ಟು ವಿಚಾರಗಳು ಸೇಮ್ ಇವೆ ಎಂದು ತಿಳ್ಕೊಂಡಿದ್ದರು ಇಬ್ಬರು. ನಂತರ ಸ್ನೇಹಿತರಾಗಿ, ಪ್ರೀತಿಸಿ 2017ರಲ್ಲಿ ಇಟಲಿಯಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.. ಅಲ್ಲದೇ ತಮ್ಮ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಮಗಳು ವಾಮಿಕಾಳನ್ನು ಬರಮಾಡಿಕೊಂಡು ಅವರ ಲಾಲನೆ ಪಾಲನೆ ಪೋಷಣೆಯಲ್ಲಿ ಅನುಷ್ಕಾ ಹಾಗೂ ವಿರಾಟ್ ತೊಡಗಿಕೊಂಡಿದ್ದಾರೆ..

    ಇದನ್ನೂ ಓದಿ: ಮಗಳ ಫೋಟೊ ಶೇರ್ ಮಾಡಬೇಡಿ ಎಂದು ರಿಕ್ವೆಸ್ಟ್ ಮಾಡ್ಕೊಳ್ತಿದ್ದಾರೆ Virat-Anushka

    ಸದ್ಯ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿ ಓರ್ವ ಆಟಗಾರನಾಗಿ ಮಾತ್ರ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.. ಇತ್ತ ಅನುಷ್ಕಾ ಶರ್ಮಾ ಮಗಳನ್ನು ನೋಡಿಕೊಳ್ಳುವುದರ ಜೊತೆಗೆ ಹಲವು ಚಿತ್ರನಿರ್ಮಾಣದಲ್ಲಿಯು ತಮ್ಮನ್ನ ತೊಡಗಿಸಿಕೊಂಡಿದ್ದಾರೆ.. ಜೊತೆಗೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
    Published by:ranjumbkgowda1 ranjumbkgowda1
    First published: