• Home
 • »
 • News
 • »
 • sports
 • »
 • Kohli-Dhoni: ಕೊಹ್ಲಿ ಫಾರ್ಮ್​ ಕಳೆದುಕೊಂಡಾಗ ಧೋನಿ ಹೀಗೆ ಸಹಾಯ ಮಾಡಿದ್ರಂತೆ!

Kohli-Dhoni: ಕೊಹ್ಲಿ ಫಾರ್ಮ್​ ಕಳೆದುಕೊಂಡಾಗ ಧೋನಿ ಹೀಗೆ ಸಹಾಯ ಮಾಡಿದ್ರಂತೆ!

ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ

ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ

ಆಸಮಯದಲ್ಲಿ ನನ್ನನ್ನು ನಿಜವಾಗಿಯೂ ಸಂಪರ್ಕಿಸಿದ ಏಕೈಕ ವ್ಯಕ್ತಿ ಎಂದರೆ ಅವರು ಎಂ ಎಸ್ ಧೋನಿ ಅಂತ ಹೇಳಬಹುದು ಎಂದಿದ್ದಾರೆ ಕೊಹ್ಲಿ!

 • Share this:

  ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟ್ವೆಂಟಿ20 ವಿಶ್ವಕಪ್​ನಲ್ಲಿ ( T20 World Cup) ತುಂಬಾನೇ ಒಳ್ಳೆಯ ಫಾರ್ಮ್ ನಲ್ಲಿದ್ದು, ಪಂದ್ಯದಿಂದ ಪಂದ್ಯಕ್ಕೆ ತುಂಬಾನೇ ಚೆನ್ನಾಗಿ ಆಟವಾಡುತ್ತಿದ್ದಾರೆ ಅಂತ ಹೇಳಬಹುದು. ಆಡಿದ ಐದು ಇನ್ನಿಂಗ್ಸ್ ಗಳಲ್ಲಿ 138.98 ಸ್ಟ್ರೈಕ್ ರೇಟ್ ನಲ್ಲಿ 246 ರನ್ ಗಳನ್ನು ಗಳಿಸುವ ಮೂಲಕ ಕೊಹ್ಲಿ ಪ್ರಸ್ತುತ ಟೂರ್ನಿಯಲ್ಲಿ ಅತ್ಯಧಿಕ ರನ್ ಸ್ಕೋರರ್ ಆಗಿದ್ದಾರೆ.  ಈ ವರ್ಷದ ಆರಂಭದಲ್ಲಿ ಟೆಸ್ಟ್ ನಾಯಕತ್ವವನ್ನು ತೊರೆದಾಗ ತನಗೆ ಮೆಸೇಜ್ ಮಾಡಿದ ಏಕೈಕ ವ್ಯಕ್ತಿ ಎಂಎಸ್ ಧೋನಿ (MS Dhoni) ಎಂದು ಬ್ಯಾಟರ್ ಕೊಹ್ಲಿ ಬಹಿರಂಗಪಡಿಸಿದರು. 


  ಏಷ್ಯಾಕಪ್​ನಲ್ಲಿ ಕೊಹ್ಲಿ ಅವರು ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಮತ್ತೆ ರನ್ ಗಳನ್ನು ಹೊಡೆಯುವುದಕ್ಕೆ ಶುರು ಮಾಡಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ದಾಖಲಾದ ಪಾಡ್ಕಾಸ್ಟ್​ನಲ್ಲಿ ಕೊಹ್ಲಿ ತನಗೆ ಧೋನಿ ಕಳುಹಿಸಿದ ಪಠ್ಯ ಸಂದೇಶವನ್ನು ಬಹಿರಂಗಪಡಿಸಿದ್ದರು.


  ಫಾರ್ಮ್​ಗಾಗಿ ಹೆಣಗಾಡಿದ್ದ ಕೊಹ್ಲಿ
  34 ವರ್ಷದ ಬ್ಯಾಟರ್ ಪ್ರಸ್ತುತ ನಡೆಯುತ್ತಿರುವ ಟ್ವೆಂಟಿ 20 ವಿಶ್ವಕಪ್ ನಲ್ಲಿ ಇದುವರೆಗೆ ಅಜೇಯ ಮೂರು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಆದರೂ ಒಟ್ಟಾರೆಯಾಗಿ ವಿರಾಟ್ ಕೊಹ್ಲಿಗೆ ಇದು ಅಂತಹ ಹೇಳಿಕೊಳ್ಳುವಂತಹ ವರ್ಷವೇನಲ್ಲ ಅಂತ ಹೇಳಬಹುದು. ಏಕೆಂದರೆ ವಿರಾಟ್ ಅವರು ವರ್ಷದ ಬಹುತೇಕ ತಿಂಗಳುಗಳಲ್ಲಿ ಆಡಿದ ಟೂರ್ನಿಗಳಲ್ಲಿ ಅಷ್ಟಾಗಿ ರನ್ ಗಳಿಸಿರಲಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ತಮ್ಮ ಕಳೆದುಕೊಂಡ ಫಾರ್ಮ್ ಅನ್ನು ಮತ್ತೆ ಮರಳಿ ಪಡೆಯಲು ತುಂಬಾನೇ ಹೆಣಗಾಡಿದರು.


  ಟ್ವೆಂಟಿ20 ವಿಶ್ವಕಪ್ ಗೂ ಮುಂಚೆ ಫಾರ್ಮ್​ನಲ್ಲಿರಲಿಲ್ಲ ವಿರಾಟ್!
  ವಿರಾಟ್ ಅವರು ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದ ನಂತರ ಆಟದಿಂದ ಸ್ವಲ್ಪ ಸಮಯದವರೆಗೆ ವಿರಾಮವನ್ನು ಸಹ ತೆಗೆದುಕೊಂಡರು. ಒಂದು ತಿಂಗಳ ನಂತರ ಏಷ್ಯಾಕಪ್ ನಲ್ಲಿ ತಂಡಕ್ಕೆ ಮರಳಿದಾಗ, ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಿರುವ ಸಮಯದುದ್ದಕ್ಕೂ ತಮ್ಮ ಬ್ಯಾಟ್ ಅನ್ನು ಮುಟ್ಟಲಿಲ್ಲ.  ಅವರು ತಮ್ಮ ಆಟದ ತೀವ್ರತೆಯನ್ನು "ನಕಲಿ ಮಾಡಲು" ಪ್ರಯತ್ನಿಸುತ್ತಿದ್ದಾರೆಂದು ಅರಿತುಕೊಂಡರು ಎಂದು ಬಹಿರಂಗಪಡಿಸಿದ್ದರು. ಕೊಹ್ಲಿ ಅವರು ವರ್ಷವಿಡೀ ಮಾನಸಿಕ ಆರೋಗ್ಯದೊಂದಿಗಿನ ತಮ್ಮ ಹೋರಾಟಗಳ ಬಗ್ಗೆ ವಿವರವಾಗಿ ತೆರೆದಿಟ್ಟಿದ್ದಾರೆ ನೋಡಿ.


  ಆ ಸಮಯದಲ್ಲಿ ವಿರಾಟ್ ಬಗ್ಗೆ ವಿಚಾರಿಸಿದ್ದು ಧೋನಿ ಒಬ್ಬರೇ ಅಂತೆ!
  "ನನ್ನನ್ನು ನಿಜವಾಗಿಯೂ ಸಂಪರ್ಕಿಸಿದ ಏಕೈಕ ವ್ಯಕ್ತಿ ಎಂದರೆ ಅವರು ಎಂ ಎಸ್ ಧೋನಿ ಅಂತ ಹೇಳಬಹುದು. ನನಗೆ ನನಗಿಂತ ತುಂಬಾ ಹಿರಿಯರಾದ ಯಾರೊಂದಿಗಾದರೂ ನಾನು ಅಂತಹ ಬಲವಾದ ಸಂಬಂಧವನ್ನು ಹೊಂದಿರುವುದು ನನಗೆ ಒಂದು ವರದಾನ ಅಂತ ತಿಳಿದುಕೊಳ್ಳುತ್ತೇನೆ. ಇದು ನಮ್ಮಿಬ್ಬರ ಮಧ್ಯೆ ಇರುವ ಗೌರವವನ್ನು ಇನ್ನಷ್ಟು ಹೆಚ್ಚು ಮಾಡಿದೆ.


  ಧೋನಿ ಕಳಿಸಿದ್ ಮೆಸೇಜ್​ನಲ್ಲಿ ಏನಿತ್ತು?
  "ನೀವು ಬಲಶಾಲಿಯಾಗಿರಬೇಕೆಂದು ನಿರೀಕ್ಷಿಸಿದಾಗ ಮತ್ತು ನಿಮ್ಮನ್ನೊಬ್ಬ ಬಲಶಾಲಿ ವ್ಯಕ್ತಿಯನ್ನಾಗಿಯೇ ನೋಡುತ್ತಿರುವಾಗ, ಜನರು ನಿಮ್ಮ ವೃತ್ತಿ ಜೀವನ ಹೇಗೆ ನಡೆಯುತ್ತಿದೆ ಅಂತ ಕೇಳಲು ಸಹ ಮರೆಯುತ್ತಾರೆ" ಎಂದು ಧೋನಿ ಅವರು ಸಂದೇಶ ಕಳುಹಿಸಿದ್ದರು ಅಂತ ಕೊಹ್ಲಿ ಅವರು ಬಹಿರಂಗಪಡಿಸಿದರು.


  ಇದನ್ನೂ ಓದಿ: Ind Vs Eng T20 World Cup 2022: ಸೆಮೀಸ್​ಗೂ ಮುನ್ನ ಇಂಗ್ಲೆಂಡ್​ ಸ್ಟಾರ್​ ಆಟಗಾರನಿಗೆ ಗಾಯ, ಆದ್ರೆ ಇದು ಟೀಂ ಇಂಡಿಯಾಗೆ ಲಾಭವಂತೆ!


  "ಧೋನಿ ಅವರ ಸಂದೇಶ ನನಗೆ ತುಂಬಾನೇ ನಿಜ ಅಂತ ಅನ್ನಿಸಿತು, ನನ್ನನ್ನು ಯಾವಾಗಲೂ ತುಂಬಾ ಆತ್ಮವಿಶ್ವಾಸದ, ತುಂಬಾ ಮಾನಸಿಕವಾಗಿ ಬಲಶಾಲಿಯಾದ, ಯಾವುದೇ ಪರಿಸ್ಥಿತಿ ಮತ್ತು ಸನ್ನಿವೇಶವನ್ನು ಸಹಿಸಿಕೊಳ್ಳಬಲ್ಲ ಮತ್ತು ನಮಗೆ ಮಾರ್ಗವನ್ನು ತೋರಿಸುವ ವ್ಯಕ್ತಿಯಂತೆ ನೋಡಲಾಗುತ್ತದೆ. ಕೆಲವೊಮ್ಮೆ, ನೀವು ಅರಿತುಕೊಳ್ಳುವುದು ಏನೆಂದರೆ, ಯಾವುದೇ ನಿರ್ದಿಷ್ಟ ಸಮಯದಲ್ಲಿ, ನೀವು ನಿಜವಾಗಿಯೂ ನೀವು ಏನನ್ನು ಮಾಡುತ್ತಿದ್ದೀರಿ ಮತ್ತು ಹೇಗೆ ಮಾಡುತ್ತಿದ್ದೀರಿ ಅಂತ ಸ್ವಲ್ಪ ಯೋಚನೆ ಮಾಡಿ ಅರ್ಥಮಾಡಿಕೊಳ್ಳಬೇಕಾಗುತ್ತದೆ" ಎಂದು ವಿರಾಟ್ ಹೇಳಿದರು.


  ಟ್ವೆಂಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ಅನ್ನು ಎದುರಿಸಲಿದೆ.


  ಇದನ್ನೂ ಓದಿ: Ind Vs Eng, T20 World Cup 2022: ಭಾರತ-ಇಂಗ್ಲೆಂಡ್​ ಸೆಮೀಸ್​ ಕದನ, ಹೇಗಿದೆ ಉಭಯ ತಂಡಗಳ ಬಲಾಬಲ?


  ಟ್ವೆಂಟಿ20 ವಿಶ್ವಕಪ್ ನಲ್ಲಿ ಕೊಹ್ಲಿಯ ಪ್ರಭಾವಶಾಲಿಯಾದ ಆಟವು ಭಾರತ ಕ್ರಿಕೆಟ್ ತಂಡವನ್ನು ಸೆಮಿಫೈನಲ್ ಹಂತಕ್ಕೆ ತಲುಪಿಸಿದೆ ಎಂದು ಹೇಳಬಹುದು. ಭಾರತ ತಂಡವು ಸೆಮಿಫೈನಲ್​ನಲ್ಲಿ ಗುರುವಾರ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಅಡಿಲೇಡ್ ಓವಲ್​ನಲ್ಲಿ ನಡೆಯಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

  Published by:ಗುರುಗಣೇಶ ಡಬ್ಗುಳಿ
  First published: