news18-kannada Updated:December 1, 2020, 6:59 PM IST
Virat Kohli
ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿ ನಾಲ್ಕೈದು ತಿಂಗಳಲ್ಲೇ ಶುರುವಾಗಲಿದೆ. ಈಗಾಗಲೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಬಿಸಿಸಿಐ ಆರಂಭಿಸಿದೆ. ಅದರೊಂದಿಗೆ ಈ ಬಾರಿ ಮೆಗಾ ಹರಾಜು ನಡೆಸಲು ಸಹ ಯೋಜನೆ ರೂಪಿಸಲಾಗಿದೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಎಲ್ಲಾ ತಂಡಗಳಲ್ಲೂ ದೊಡ್ಡ ಬದಲಾವಣೆಯಾಗುವುದು ನಿಶ್ಚಿತ. ಇತ್ತ ಈ ಸಲ ಕೂಡ ಕಪ್ ಗೆಲ್ಲಲು ವಿಫಲರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳಲು ಚಿಂತಿಸಿದೆ. ಅದರಲ್ಲೂ ಹಿರಿಯ ಆಟಗಾರರನ್ನು ಕೈ ಬಿಟ್ಟು ಯುವ ಕ್ರಿಕೆಟಿಗರಿಗೆ ಮಣೆ ಹಾಕಲು ಆರ್ಸಿಬಿ ತಂಡ ಯೋಜನೆ ರೂಪಿಸಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇಂಗ್ಲೆಂಡ್ ಆಟಗಾರರೊಬ್ಬರು ಆರ್ಸಿಬಿ ತಂಡದಲ್ಲಿ ಚಾನ್ಸ್ ಸಿಗಲಿದೆಯಾ? ಎಂದು ಕೇಳಿ ಗಮನ ಸೆಳೆದಿದ್ದಾರೆ.
ಆದರೆ ಆತ ಕ್ರಿಕೆಟಿಗನಲ್ಲ ಎಂಬುದು ವಿಶೇಷ. ಹೌದು, ಇಂಗ್ಲೆಂಡ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಹ್ಯಾರಿ ಕೇನ್ ಕ್ರಿಕೆಟ್ ಆಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಕೇನ್ ಭರ್ಜರಿ ಹೊಡೆತಗಳ ಮೂಲಕ ಗಮನ ಸೆಳೆದಿದ್ದಾರೆ. ಈ ದೃಶ್ಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ಕೇನ್, ಟಿ20 ಪಂದ್ಯವನ್ನು ಗೆಲ್ಲಿಸುವಂತಹ ಬ್ಯಾಟಿಂಗ್ ನಡೆಸಿದ್ದೇನೆ. ಮುಂದಿನ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವ ಅವಕಾಶ ಸಿಗಲಿದೆಯಾ? ಕೊಹ್ಲಿ ಎಂದು ಕೇಳಿದ್ದಾರೆ.
ಹ್ಯಾರಿ ಕೇನ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ಕೌಂಟರ್ ಅಟ್ಯಾಕಿಂಗ್ ಬ್ಯಾಟ್ಸ್ಮನ್ ಆಗಿ ನಿಮ್ಮನ್ನು ಆರ್ಸಿಬಿ ಆಯ್ಕೆ ಮಾಡಬಹುದು ಎಂದಿದ್ದಾರೆ.
ಕೊಹ್ಲಿ ಹಾಗೂ ಕೇನ್ ಉತ್ತಮ ಸ್ನೇಹಿತರಾಗಿದ್ದು, ಈ ಹಿಂದೆ ಟೀಮ್ ಇಂಡಿಯಾದ ಇಂಗ್ಲೆಂಡ್ ಟೂರ್ ವೇಳೆ ಇಬ್ಬರು ಭೇಟಿಯಾಗಿದ್ದರು. ಅಲ್ಲದೆ ಉತ್ತಮ ಪ್ರದರ್ಶನ ತೋರಿದಾಗೆಲ್ಲಾ ಪರಸ್ಪರ ಹಾರೈಸುತ್ತಾ ಕ್ರೀಡಾ ಪ್ರೇಮಿಗಳ ಮನಗೆದ್ದಿದ್ದರು.
ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್ಮನ್ ಮೇಲೆ ಕಣ್ಣಿಟ್ಟಿದೆ RCB..!
Published by:
zahir
First published:
December 1, 2020, 6:59 PM IST