ನೂತನ ಟೆಸ್ಟ್​ ರ‍್ಯಾಂಕಿಂಗ್‌ ಪಟ್ಟಿ ಪ್ರಕಟ: ಸ್ಮಿತ್ ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರಿದ ಕಿಂಗ್ ಕೊಹ್ಲಿ!

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿರುವ ಕೊಹ್ಲಿ 928 ಅಂಕ ಸಂಪಾದಿಸಿದ್ದಾರೆ. ಸ್ಮಿತ್ 923 ಪಾಯಿಂಟ್​ನೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇನ್ನೊಬ್ಬ ಆಟಗಾರ ವಿರಾಟ್ ಕೊಹ್ಲಿ. ಜೊತೆಗೆ ಕೊಹ್ಲಯನ್ನು ಐಸಿಸಿ ನಾಯಕನನ್ನಾಗಿ ಮಾಡಿದೆ.

ಇನ್ನೊಬ್ಬ ಆಟಗಾರ ವಿರಾಟ್ ಕೊಹ್ಲಿ. ಜೊತೆಗೆ ಕೊಹ್ಲಯನ್ನು ಐಸಿಸಿ ನಾಯಕನನ್ನಾಗಿ ಮಾಡಿದೆ.

 • Share this:
  ಬೆಂಗಳೂರು (ಡಿ. 04): ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೂತನ ಟೆಸ್ಟ್​ ರ‍್ಯಾಂಕಿಂಗ್‌ ಪಟ್ಟಿಯನ್ನು ಪ್ರಕಟಗೊಳಿಸಿದೆ. ಕೆಲವು ತಿಂಗಳ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ.

  ಇತ್ತೀಚೆಗೆ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೊದಲ ಟೆಸ್ಟ್​ನಲ್ಲಿ ಸೊನ್ನೆ ಸುತ್ತಿದ್ದರಾದರು, ಎರಡನೇ ಡೇ ನೈಟ್ ಟೆಸ್ಟ್​ನಲ್ಲಿ 136 ರನ್ ಬಾರಿಸಿ ಮತ್ತೆ ಫಾರ್ಮ್​ಗೆ ಮರಳಿದ್ದರು. ಈ ಶತಕದ ಫಲವಾಗಿ ಕೊಹ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.

     Manish Pandey Marriage: ಕನ್ನಡಿಗನ ರಿಸೆಪ್ಷನ್​ನಲ್ಲಿ ಯುವಿ ಭರ್ಜರಿ ಸ್ಟೆಪ್; ವೈರಲ್ ಆಗುತ್ತಿದೆ ವಿಡಿಯೋ

  ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿರುವ ಕೊಹ್ಲಿ 928 ಅಂಕ ಸಂಪಾದಿಸಿದ್ದಾರೆ. ಸ್ಮಿತ್ 923 ಪಾಯಿಂಟ್​ನೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದಕ್ಕೂ ಮುನ್ನ ಕೊಹ್ಲಿ 928 ಅಂಕವನ್ನೇ ಸಂಪಾದಿಸಿದ್ದರಾದರು ಸ್ಮಿತ್ 931 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರು. ಸದ್ಯ ಸ್ಮಿತ್ ಪಾಕಿಸ್ತಾನ ವಿರುದ್ಧದ ಟೆಸ್ಟ್​ನಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದ ಪರಿಣಾಮ ಅಂಕದಲ್ಲಿ ಇಳಿಕೆ ಕಂಡಿದೆ.

  ಇನ್ನು ಪಾಕ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಶತಕ ಹಾಗೂ ತ್ರಿಶತಕ ಸಿಡಿಸಿ ಮಿಂಚಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಟೆಸ್ಟ್​​ ರ‍್ಯಾಂಕಿಂಗ್‌​ನಲ್ಲಿ ಏರಿಕೆ ಕಂಡಿದ್ದಾರೆ. 764 ಅಂಕದೊಂದಿಗೆ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮೂರನೇ ಸ್ಥಾನದಲ್ಲಿ(877) ಕೇನ್ ವಿಲಿಯಮ್ಸನ್ ಹಾಗೂ 4ನೇ ಸ್ಥಾನದಲ್ಲಿ ಚೇತೇಶ್ವರ್ ಪೂಜಾರ(791) ಇದ್ದಾರೆ.

  ಬೌಲಿಂಗ್ ವಿಭಾಗದಲ್ಲಿ ಭಾರತ ಪರ ಮೊಹಮ್ಮದ್ ಶಮಿ 771 ಅಂಕದೊಂದಿಗೆ 10ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಜಸ್​ಪ್ರೀತ್ ಬುಮ್ರಾ(794) 5ನೇ ಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್(772) 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್​(900) ಇದ್ದಾರೆ.

     IPL 2020: ಇಬ್ಬರು ಸ್ಟಾರ್ ಆಟಗಾರರು ಔಟ್; 2 ಸ್ಫೋಟಕ ಬ್ಯಾಟ್ಸ್​ಮನ್ಸ್​ ಇನ್; ಯಾರು ಗೊತ್ತಾ?

  ಆಲ್ರೌಂಡರ್ ಪೈಕಿ ವೆಸ್ಟ್​ ಇಂಡೀಸ್​ನ ಜೇಸನ್ ಹೋಲ್ಡರ್(473) ಮೊದಲ ಸ್ಥಾನದಲ್ಲೇ ಇದ್ದರೆ, ರವೀಂದ್ರ ಜಡೇಜಾ(406) ಎರಡನೇ ಸ್ಥಾನದಲ್ಲಿದ್ದಾರೆ. ಆಸೀಸ್​ನ ಮಿಚೆಲ್ ಸ್ಟಾರ್ಕ್​​ ಆಲ್ರೌಂಡರ್ ಪಟ್ಟಿಯಲ್ಲಿ ಏರಿಕೆ ಕಂಡಿದ್ದು 284 ಅಂಕಹೊಂದಿ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ.

     First published: