Virat Kohli: ಪಾಕಿಸ್ತಾನದಲ್ಲೂ ಇದ್ದಾರೆ 'ವಿರಾಟ್' ಫ್ಯಾನ್ಸ್! ಫೋಟೋ ಹಿಡಿದು ಅಭಿಮಾನಿಯ 'ಶಾಂತಿ ಸಂದೇಶ'

ಪಾಕಿಸ್ತಾನದ ಕ್ರೀಡಾಂಗಣದಲ್ಲಿ ಪಾಕ್ ಕ್ರಿಕೆಟ್ ಅಭಿಮಾನಿಯೊಬ್ಬನ ಕೈಯಲ್ಲಿ ವಿರಾಟ್ ಕೊಹ್ಲಿಯ ಪೋಸ್ಟರ್ ರಾರಾಜಿಸುತ್ತಿತ್ತು. ಅಲ್ಲದೆ ಪಾಕ್ ನೆಲದಲ್ಲಿ ವಿರಾಟ್ ಕೊಹ್ಲಿ ಶತಕ ದಾಖಲಿಸುವುದನ್ನು ನಾನು ನೋಡಬೇಕು ಅಂತ ಅಭಿಮಾನಿ ಹೇಳುತ್ತಿದ್ದಾನೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
    ವಿಶ್ವ ಕ್ರಿಕೆಟ್ (Cricket) ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ (Virat Kohli). ಭಾರತ (India) ಮಾತ್ರವಲ್ಲದೆ ವಿದೇಶಗಳಲ್ಲೂ ಸಾವಿರಾರು ಸಂಖ್ಯೆಯ ಅಭಿಮಾನಿಗಳನ್ನು (Fans) ಹೊಂದಿರುವ ವಿರಾಟ್ ಕೊಹ್ಲಿ ಆಟಕ್ಕೆ ಸದಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ.. ಕೊಹ್ಲಿ ಯಾವಾಗ ಶತಕ (Century) ಸಿಡಿಸುತ್ತಾರೆ ಅಂದೆ ಅಭಿಮಾನಿಗಳಿಗೆ ಹಬ್ಬ.. ವಿರಾಟ್ ಕೊಹ್ಲಿಯ ಪ್ರತಿಯೊಂದು ದಾಖಲೆಗಳನ್ನು ಹಬ್ಬದಂತೆ (Festival) ಅಭಿಮಾನಿಗಳು ಸಂಭ್ರಮ ಪಡುತ್ತಾರೆ.. ಹೀಗಾಗಿಯೇ ವಿರಾಟ್ ಎಲ್ಲೆ ಹೋದರು.. ಹೋಗದೇ ಇದ್ದರೂ ವಿರಾಟ್ ಅಭಿಮಾನಿಗಳು ಅವರನ್ನು ಆರಾಧನೆ ಮಾಡುವುದು ಮಾತ್ರ ಬಿಡುವುದಿಲ್ಲ.. ಕ್ರಿಕೆಟ್ ಹೆಚ್ಚು ಜನಪ್ರಿಯವಾಗಿರುವ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ ಈಗಷ್ಟೇ ಕ್ರಿಕೆಟ್ ಕಲಿತು ಆಡುತ್ತಿರುವ ಆಟಗಾರರಿಗೂ ವಿರಾಟ್ ಕೊಹ್ಲಿ ಅಂದರೆ ಹಚ್ಚು ಮೆಚ್ಚು ಹಾಗೂ ಸ್ಫೂರ್ತಿ.. ಇದಕ್ಕೆ ಪಾಕಿಸ್ತಾನ ಸಹ ಹೊರತಾಗಿಲ್ಲ.. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕ್ ನಲ್ಲೂ ಕೂಡ ವಿರಾಟ್ ಕೊಹ್ಲಿ ಅಂದ್ರೆ ಪ್ರಾಣ ಬಿಡುವ ಅಭಿಮಾನಿಗಳು ಇದ್ದಾರೆ. ಹೀಗಾಗಿಯೇ ವಿರಾಟ್ ಕೊಹ್ಲಿ ಪ್ರತಿಯೊಂದು ದಾಖಲೆಗಳಿಗೂ ಇಲ್ಲಿನ ಅಭಿಮಾನಿಗಳು ಸಹ ಕಾಯುತ್ತಿದ್ದಾರೆ.

    ಪಾಕಿಸ್ತಾನದಲ್ಲೂ ವಿರಾಟ್ ಮೇಲಿನ ಪ್ರೇಮ

    ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ವಿರಾಟ್ ಕೊಹ್ಲಿ ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ.. ಅವಕಾಶ ಸಿಕ್ಕಾಗಲೆಲ್ಲ ಪಾಕಿಸ್ತಾನದ ಆಟಗಾರರ ಮೇಲೆ ಸವಾರಿ ಮಾಡುವ ವಿರಾಟ್ ಕೊಹ್ಲಿ ಅಂದರೆ ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳಿಗೂ ಅಚ್ಚುಮೆಚ್ಚು..

    ಪಾಕಿಸ್ತಾನದ ಮೇಲೆ ವಿರಾಟ್ ಕ್ರಿಕೆಟ್ ಆಡದೇ ಇದ್ರು, ಸಮಯ ಸಿಕ್ಕಾಗಲೆಲ್ಲಾ ವಿರಾಟ್ ಕೊಹ್ಲಿ ಅಂದ್ರೆ ನಮಗೆ ಎಷ್ಟು ಅಚ್ಚುಮೆಚ್ಚು ಅಂತ ಅಂತ ಅಭಿಮಾನಿಗಳು ತಿಳಿಸುತ್ತಾರೆ.. ಈಗ ಅದೇ ರೀತಿ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ ಆಡದೇ ಇದ್ರೂ ಅಭಿಮಾನಿಗಳು ಮಾತ್ರ ವಿರಾಟ್ ಕೊಹ್ಲಿ ಪೋಸ್ಟರ್ ಹಿಡಿದು ಸಂಭ್ರಮಿಸಿದ್ದಾರೆ.

    ಅಭಿಮಾನಿ ಹಿಡಿದ ವಿರಾಟ್ ಫೋಟೋ ವೈರಲ್

    ಅಷ್ಟೇ ಅಲ್ಲದೆ ನೀವು ಕೂಡ ಪಿಎಸ್​​ಎಲ್ ಆಡಬೇಕೆಂದು ಮನವಿ ಮಾಡುತ್ತಿದ್ದಾರೆ. ಇದೀಗ ಪಾಕಿಸ್ತಾನದ ಸ್ಟೇಡಿಯಂನಲ್ಲಿ ಕಂಡು ಬಂದಿರುವ ಕಿಂಗ್ ಕೊಹ್ಲಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಇದನ್ನೂ ಓದಿ: ವಿರಾಟ್ ಕೊಹ್ಲಿ ನೀಡಿದ್ದ ಉಡುಗೊರೆ ನೋಡಿ ಕಣ್ಣೀರಿಟ್ಟಿದ್ದ ಸಚಿನ್ ತೆಂಡೂಲ್ಕರ್

    ಪಾಕ್ ನೆಲದಲ್ಲಿ ಶತಕ ಸಿಡಿಸಬೇಕು ಎಂದು ಅಭಿಮಾನಿಯ ಬಯಕೆ

    ವಿರಾಟ್ ಕೊಹ್ಲಿ ಮೇಲೆ ಅಪಾರ ಪ್ರಮಾಣದ ಪ್ರೀತಿ ಇಟ್ಟುಕೊಂಡಿರುವ ಅಭಿಮಾನಿಯೊಬ್ಬ ಶುಕ್ರವಾರ ಪಾಕಿಸ್ತಾನದ ಗಡ್ಡಾಫಿ ಕ್ರೀಡಾಂಗಣದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವೆ ಪಂದ್ಯದಲ್ಲಿ ಭಾಗಿಯಾಗಿದ್ದ.

    ಆಗ ಪಾಕ್ ಕ್ರಿಕೆಟ್ ಅಭಿಮಾನಿಯೊಬ್ಬನ ಕೈಯಲ್ಲಿ ವಿರಾಟ್ ಕೊಹ್ಲಿಯ ಪೋಸ್ಟರ್ ರಾರಾಜಿಸುತ್ತಿತ್ತು. ಅಲ್ಲದೆ ಪಾಕ್ ನೆಲದಲ್ಲಿ ವಿರಾಟ್ ಕೊಹ್ಲಿ ಶತಕ ದಾಖಲಿಸುವುದನ್ನು ನಾನು ನೋಡಬೇಕು. ಶಾಂತಿ ಅಂತ ಸಂದೇಶವನ್ನು ರವಾನಿಸಿದ್ದಾನೆ.



    ಕೊಹ್ಲಿಯ 71ನೇ ಶತಕಕ್ಕೆ ಅಭಿಮಾನಿಗಳ ಕಾತರ

    ಕ್ರಿಕೆಟ್ ಲೋಕದಲ್ಲಿ ಹತ್ತು ಹಲವಾರು ಸಾರ್ವಕಾಲಿಕ ದಾಖಲೆಗಳನ್ನು ಮಾಡಿ, ದಿಗ್ಗಜ ಕ್ರಿಕೆಟಿಗರಾದ ದಾಖಲೆಗಳನ್ನು ಪುಡಿಪುಡಿ ಮಾಡುತ್ತಿರುವ ವಿರಾಟ್ ಕೊಹ್ಲಿ ಶತಕವೀರನಾಗಲು ಕೆಲವೇ ಕೆಲವು ಪಂದ್ಯಗಳು ಬಾಕಿ ಇವೆ.. ಅದ್ರಲ್ಲೂ ವಿರಾಟ್ ಕೊಹ್ಲಿ 70 ಶತಕಗಳನ್ನು ಈವರೆಗೆ ಎಲ್ಲ ಮಾದರಿಯ ಕ್ರಿಕೆಟ್ ನಿಂದ ಸಿಡಿಸಿದ್ದಾರೆ.
    ಆದರೆ ಯಾಕೋ ಏನೋ ಕೊಹ್ಲಿಯ 71ನೇ ಶತಕ ಸಿಡಿಸಲು ಇದುವರೆಗೂ ಸಮಯ ಕೂಡಿ ಬಂದಿಲ್ಲ..

    ಕಳೆದ ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ಹಾಗೂ ಅಭಿಮಾನಿಗಳು ಅವಾಗ ವಿರಾಟ್ 71ನೇ ಶತಕ ತಸಿಡಿಸುತ್ತಾರೆ ಎಂದು ಕಾಯುತ್ತಿದ್ದಾರೆ. ಹೀಗಾಗಿಯೇ ಪ್ರತಿಯೊಬ್ಬ ವಿರಾಟ್ ಕೊಹ್ಲಿ ಅಭಿಮಾನಿಗಳು ಪ್ರತಿಯೊಂದು ಪಂದ್ಯದಲ್ಲಿ ವಿರಾಟ್ ಶತಕ ಸಿಡಿಸಲು ಎಂದು ಹಾರೈಸುತ್ತಾರೆ..

    ಇದನ್ನೂ ಓದಿ: ಕೊಹ್ಲಿ ತಮ್ಮ ಮನೆಗೆ ಬಂದಾಗ ಘಟನೆ ನೆನಪಿಸಿಕೊಂಡು ಭಾವುಕರಾದ ಸಿರಾಜ್

    ಇನ್ನು 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಅವರು ಕೊನೆಯ ಶತಕ ಬಾರಿಸಿದ್ದರು. ಮತ್ತೊಂದೆಡೆ ಭಾರತ ತಂಡವು 2008 ರಿಂದ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ಹಲವು ವರ್ಷಗಳಿಂದ ಇಬ್ಬರ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಎರಡೂ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
    Published by:ranjumbkgowda1 ranjumbkgowda1
    First published: