ನಿಷೇಧದಿಂದ ತಪ್ಪಿಸಿಕೊಳ್ಳಲು ಕ್ಷಮೆ ಕೋರಿದ ಕ್ಯಾಪ್ಟನ್​ ಕೊಹ್ಲಿ!


Updated:September 6, 2018, 1:00 PM IST
ನಿಷೇಧದಿಂದ ತಪ್ಪಿಸಿಕೊಳ್ಳಲು ಕ್ಷಮೆ ಕೋರಿದ ಕ್ಯಾಪ್ಟನ್​ ಕೊಹ್ಲಿ!

Updated: September 6, 2018, 1:00 PM IST
ಇಂಗ್ಲೆಂಡ್​ ಪ್ರವಾಸದಲ್ಲಿ ಟೀಂ ಇಂಡಿಯಾ ಟೆಸ್ಟ್​ ಸರಣಿಯಲ್ಲಿ ಸೋತಿರಬಹುದು ಆದರೆ ಈ ಸೋಲಿನ ನಡುವೆಯೂ ನಾಯಕ ವಿರಾಟ್​ ಕೊಹ್ಲಿಯ ಅದ್ಭುತ ಬ್ಯಾಟಿಂಗ್​ ಎಲ್ಲರ ಮನಗೆದ್ದಿದೆ. 2014ರಲ್ಲಿ ಇಂಗ್ಲೆಂಡ್​ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್​ ಕೊಹ್ಲಿ ಈ ಬಾರಿ 2 ಶತಕ ಹಾಗೂ 3 ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಈ ಸೀರೀಸ್​ನಲ್ಲಿ ಅತ್ಯಧಿಕ ರನ್​ ಗಳಿಸಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇಂದು ವಿರಾಟ್​ ಕೊಹ್ಲಿ ವಿಶ್ವದ ದಿಗ್ಗಜ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು, ಆದರೆ ಆರು ವರ್ಷಗಳ ಮೊದಲು ಅವರು ಹೀಗಿರಲಿಲ್ಲ. ಸದ್ಯ ಅವರು ಬ್ಯಾಟಿಂಗ್​ ಜೊತೆಗೆ ಫೀಲ್ಡಿಂಗ್​ ಮಾಡುವ ವೇಳೆಯೂ ಆಕ್ರಮಣಕಾರಿಯಾಗಿ ಆಡುತ್ತಾರೆ. ಇವರು ತಮ್ಮ ಚೊಚ್ಚಲ ಆಸ್ಟ್ರೇಲಿಯಾ ಪ್ರವಾಸದ ವೇಳೆ ತನ್ನ ಆಕ್ರಮಣಕಾರಿ ಧೋರಣೆಯಿಂದ ಅವರ ಮೇಲೆ ನಿಷೇಧ ಹೇರುವ ಭೀತಿ ಎದುರಾಗಿತ್ತು.

ವಾಸ್ತವವಾಗಿ 2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸಿಡ್ನಿ ಟೆಸ್ಟ್​ ಸಂದರ್ಭದಲ್ಲಿ ವಿರಾಟ್​ ಕೊಹ್ಲಿ ಪ್ರೇಕ್ಷಕರಿಗೆ ನಡು ಬೆರಳನ್ನು ತೋರಿಸಿದ್ದರು. ಇದಾದ ಬಳಿಕ ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಈ ವಿಚಾರ ಮಾಧ್ಯಮಗಳಲ್ಲೂ ಭಾರೀ ಸುದ್ದಿ ಮಾಡಿತ್ತು. ಇತ್ತೀಚೆಗಷ್ಟೇ ವಿರಾಟ್​ ಕೊಹ್ಲಿ ವಿಜ್ಡನ್​ ಕ್ರಿಕೆಟ್​ ಮಂಡಳಿಗೆ ನೀಡಿದ ಸಂದರ್ಶನದಲ್ಲಿ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾ "ಅಂದು ಮ್ಯಾಚ್​ ರೆಫರಿ ರಂಜನ್​ ಮದುಗಲೆಯವರು ನನ್ನನ್ನು ತಮ್ಮ ಕೋಣೆಗೆ ಕರೆದು ನನ್ನ ಈ ನಡೆ ಕುರಿತಾಗಿ ಪ್ರಶ್ನಿಸಿದ್ದರು. ಇದಾದ ಬಳಿಕ ನಾನು ಅವರು ಬಳಿ 'ನನ್ನನ್ನು ದಯವಿಟ್ಟು ಕ್ಷಮಿಸಿ, ನನ್ನನ್ನು ಬ್ಯಾನ್ ಮಾಡಬೇಡಿ' ಎಂದು ಕೇಳಿಕೊಂಡಿದ್ದೆ" ಎಂದಿದ್ದಾರೆ.



ಅಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ, ಆಸ್ಟ್ರೇಲಿಯಾದ ಕ್ಯಾಪ್ಟನ್​ ಮೈಕಲ್​ ಕ್ಲಾರ್ಕ್​(ಅಜೇಯ 215)ಹಾಗೂ ರಿಕಿ ಪಾಂಟಿಂಗ್​(134) ಇಬ್ಬರ ನಡುವೆ ವ288 ರನ್​ಗಳ ಜೊತೆಯಾಟ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೊಹ್ಲಿ ಪ್ರೇಕ್ಷಕರಿಗೆ ನಡು ಬೆರಳನ್ನು ತೋರಿಸಿದ್ದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿತ್ತು. ಈ ಘಟನೆಯ ಕುರಿತಾಗಿ ವಿರಾಟ್​ ಕೊಹ್ಲಿ ತಮ್ಮ ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡುತ್ತಾ "ಕ್ರಿಕೆಟಿಗರು ಯಾವುದೇ ವಿಚಾರವಾಗಿ ಸ್ಪಷ್ಟನೆ ನೀಡಬಾರದು. ಆದರೆ ಪ್ರೇಕ್ಷಕರು ನಿಮ್ಮ ತಾಯಿ ಅಥವಾ ತಂಗಿಯ ಮೇಲೆ ಕೆಟ್ಟದಾಗಿ ಮಾತನಾಡಿದರೆ ಅದಕ್ಕೂ ಅದರಷ್ಟು ಕೆಟ್ಟ ವರ್ತನೆ ಬೇರೆ ಇಲ್ಲ" ಎಂದಿದ್ದರು.
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ