Virat Kohli: 2008ರ IPL ಹರಾಜಿನ ಕಥೆ ಬಿಚ್ಚಿಟ್ಟ ವಿರಾಟ್ ಕೊಹ್ಲಿ

Royal Challengers Bangalore: ಇನ್ನು ಹರಾಜಿನಲ್ಲಿ ಬೆಂಗಳೂರು ತಂಡ ಸುಮಾರು 25ಲಕ್ಷ ಕೊಟ್ಟು ನನ್ನನ್ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಮತ್ತು RCB ತನಗೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುತ್ತದೆ ಎಂದು ತಾನು ಊಹಿಸಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
    ವಿರಾಟ್ ಕೊಹ್ಲಿ (Virat Kohli) ಟೀಂ ಇಂಡಿಯಾ (Team India) ಕಂಡ ಅಗ್ರೆಸ್ಸಿವ್ ಆಟಗಾರರಲ್ಲಿ ಒಬ್ಬರು.. ಇತ್ತೀಚಿಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್ (Cricket) ನಾಯಕತ್ವಕ್ಕೆ (Captaincy) ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಕೇವಲ ಆಟಗಾರನಾಗಿ (Player) ಮಾತ್ರ ಕಾಣಿಸಿಕೊಳ್ಳುವುದಾಗಿ ಹೇಳಿದ್ದಾರೆ.. ಆದರೆ ಓರ್ವ ಆಟಗಾರನಾಗಿ ಭಾರತೀಯ ತಂಡದಲ್ಲಿ ಇರುವ ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challenger Bangalore) ತಂಡದ ಅಭಿಮಾನಿಗಳ ಪಾಲಿಗೆ ಇಂದಿಗೂ ನಾಯಕನೇ.. RCB ಅಂದ್ರೆ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಅಂದ್ರೆ ಆರ್ಸಿಬಿ ಎನ್ನುವಷ್ಟರ ಮಟ್ಟಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ಆರಾಧನೆ ಮಾಡುತ್ತಾರೆ..

    ವಿರಾಟ್ ಕೊಹ್ಲಿಗೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಅಭಿಮಾನಿಗಳು ಅಂದರೆ ಅಷ್ಟೇ ಪ್ರೀತಿ.. ಹೀಗಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಹೇಳಿದಾಗ ನಾನು ಐಪಿಎಲ್ ನಲ್ಲಿ ಆಡುವುದಾದರೆ ಆರ್ಸಿಬಿ ಆಟಗಾರನಾಗಿ ಮಾತ್ರ ಆಡುತ್ತೇನೆ. ಇನ್ಯಾವ ತಂಡದ ಆಟಗಾರನಾಗಿ ನಾನು ಆಡುವುದಿಲ್ಲ ಎಂದು ಹೇಳಿದ್ರು. ಈ ಮಾತುಗಳು ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಮೇಲೆ ಎಷ್ಟು ಅಭಿಮಾನ ಇಟ್ಟಿದ್ದಾರೆ ಎನ್ನುವುದನ್ನು ಸಾಬೀತು ಮಾಡಿತ್ತು. ಈಗ ವಿರಾಟ್ ಕೊಹ್ಲಿ ಆರ್ಸಿಬಿ ತಂಡಕ್ಕೆ ನಾನು ಹೇಗೆ ಸೇರ್ಪಡೆಯಾದೆ ಎಂಬುದರ ಬಗ್ಗೆ ಹೇಳಿ ಮತ್ತೆ ತಂಡದ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ..

    RCBಗೆ ಆಯ್ಕೆಯಾದ ಹಿಂದಿನಕಥೆ ಬಿಚ್ಚಿಟ್ಟ ವಿರಾಟ್ ಕೊಹ್ಲಿ

    ಎಲ್ಲಾ ಆವೃತ್ತಿಯ ಐಪಿಎಲ್ ನಲ್ಲಿ ಒಂದೇ ತಂಡವನ್ನು ಪ್ರತಿನಿಧಿಸಿದ ಏಕೈಕ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿರುವ ವಿರಾಟ್ ಕೊಹ್ಲಿ 2008ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿ ಆಡುತ್ತಾ ಬಂದಿದ್ದಾರೆ.. ಮತ್ತು ಆಡುತ್ತಿದ್ದಾರೆ.. ಈಗ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೇಗೆ ಆಯ್ಕೆಯಾದರೂ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ.. RCB ಯ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಕೊಹ್ಲಿ ಐಪಿಎಲ್ ವೃತ್ತಿಜೀವನದ ಕುರಿತು ಮಾತುಗಳನ್ನು ಆಡಿದ್ದಾರೆ. ಮತ್ತು ಡೆಲ್ಲಿ ತಂಡಕ್ಕೆ ಸೇರಬೇಕಿದ್ದ ವಿರಾಟ್ ಕೊಹ್ಲಿ ಬೆಂಗಳೂರು ಸೇರಿದ್ದು ಹೇಗೆ ಎನ್ನುವುದರ ಕುರಿತು ಕೂಡ ತಿಳಿಸಿದ್ದಾರೆ..

    ಇದನ್ನೂ ಓದಿ: ಮಗಳ ಫೋಟೊ ಶೇರ್ ಮಾಡಬೇಡಿ ಎಂದು ರಿಕ್ವೆಸ್ಟ್ ಮಾಡ್ಕೊಳ್ತಿದ್ದಾರೆ Virat-Anushka

    2008 ರ ಐಪಿಎಲ್ ಹರಾಜಿನ ಕಥೆ ಬಿಚ್ಚಿಟ್ಟ ಕೊಹ್ಲಿ..

    2008ರಲ್ಲಿ ವಿರಾಟ್ ಕೊಹಿಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾದಗ ಅವರು ಅಂಡರ್ -19 ತಂಡದ ನಾಯಕರಾಗಿದ್ದರು. ಅಲ್ಲದೆ ಅಂಡರ್ -19 ವಿಶ್ವಕಪ್‌ಗಾಗಿ ಮಲೇಷ್ಯಾದಲ್ಲಿದ್ದರು.ಈ ವೇಳೆ ಐಪಿಎಲ್ ಹರಾಜಿಗಾಗಿ ಅವರು ಅವರ ಹೆಸರನ್ನು ನೊಂದಾವಣೆ ಮಾಡಿಕೊಂಡಿದ್ದರು.. ಐಪಿಎಲ್ ಹರಾಜಿನ ಸಂದರ್ಭದಲ್ಲಿ ದೆಹಲಿ ತಂಡ ವಿರಾಟ್ ಕೊಹ್ಲಿ ಅವರನ್ನು ಖರೀದಿ ಮಾಡಲು ಹೊರಟಿತ್ತು. ಆದರೆ ಇದ್ದಕ್ಕಿದ್ದಂತೆ ವಿರಾಟ್ ಕೊಹ್ಲಿ ಅವರನ್ನು ಕೈ ಬಿಟ್ಟು, ವಿರಾಟ್ ಬದಲಿಗೆ ಅಂದಿನ ಡೆಲ್ಲಿ ಡೇರ್ ಡೆವಿಲ್ಸ್, ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ಪ್ರದೀಪ್ ಸಾಂಗ್ವಾನ್ ಅವರನ್ನು ಖರೀದಿ ಮಾಡಿತು.. ಇದರಿಂದಾಗಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡೆ ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ ನಾನು ಆರ್ಸಿಬಿಗೆ ಸೇರಿದಾಕ್ಷಣ ನನ್ನ ಜೀವನದಲ್ಲಿ ಅತ್ಯಂತ ಪ್ರಭಾವಿ ಕ್ಷಣ ಆಗುತ್ತದೆ ಎಂದು ನನಗೆ ಆ ಸಮಯದಲ್ಲಿ ತಿಳಿದಿರಲಿಲ್ಲ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

    25 ಲಕ್ಷಕ್ಕೆ ವಿರಾಟ್ ಖರೀದಿ ಮಾಡಿದ್ದ RCB

    ಇನ್ನು ಹರಾಜಿನಲ್ಲಿ ಬೆಂಗಳೂರು ತಂಡ ಸುಮಾರು ರೂ. 25ಲಕ್ಷ ($ 30,000) ಕೊಟ್ಟು ನನ್ನನ್ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಮತ್ತು RCB ತನಗೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುತ್ತದೆ ಎಂದು ತಾನು ಊಹಿಸಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ನಾನು ಕೈ ತುಂಬಾ ಹಣವನ್ನು ಕಂಡು ಕ್ರೇಝಿಯಾಗಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಅಥರ್ವನಾಗಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡ ಕೂಲ್ ಕ್ಯಾಪ್ಟನ್ ಧೋನಿ

    ಇನ್ನು ಕೊಹ್ಲಿ 2008 ರಿಂದ ಆರ್‌ಸಿಬಿ ತಂಡದಲ್ಲಿ ಆಡುತ್ತಿದ್ದಾರೆ, ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಐಪಿಎಲ್ ಆರಂಭದಿಂದಲೂ ಒಂದೇ ತಂಡದಲ್ಲಿ ಆಡುತ್ತಿರುವ ಏಕೈಕ ಆಟಗಾರ, ವಿರಾಟ್ ಐಪಿಎಲ್‌ನಲ್ಲಿ ಒಂದೇ ತಂಡಕ್ಕಾಗಿ 200 ಪಂದ್ಯಗಳನ್ನು ಆಡಿದ್ದಾರೆ. ಏಕಾಂಗಿ ಆಟಗಾರ. RCB ಐಪಿಎಲ್ 2022 ಕ್ಕೆ 17 ಕೋಟಿ ಕೊಟ್ಟು ವಿರಾಟ್ ಕೊಹ್ಲಿಯನ್ನು ಸಹ ಉಳಿಸಿಕೊಂಡಿದೆ.
    Published by:ranjumbkgowda1 ranjumbkgowda1
    First published: