Virat Kohli: ಇದೆಲ್ಲಾ ರೌಡಿ ವರ್ತನೆ: ಜನಾಂಗೀಯ ನಿಂದನೆ ವಿರುದ್ಧ ಕಿಡಿಕಾರಿದ ಕೊಹ್ಲಿ

3ನೇ ಟೆಸ್ಟ್​ನ ನಾಲ್ಕನೇ ದಿನವೂ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರ ಅನುಚಿತ ವರ್ತನೆ ಮುಂದುವರೆದಿದ್ದು, ಬೌಂಡರಿ ಲೈನ್​ನಲ್ಲಿದ್ದ ಸಿರಾಜ್ ಅವರನ್ನು ಜನಾಂಗೀಯ ನಿಂದನೆ ಮಾಡಲಾಗಿದೆ. ಈ ಬಗ್ಗೆ ಸಿರಾಜ್ ನಾಯಕ ಅಜಿಂಕ್ಯ ರಹಾನೆ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೆ ಅಂಪೈರ್ ಮೂಲಕ ಅಧಿಕಾರಿಗಳಿಗೆ ದೂರು ದಾಖಲಿಸಿದ್ದಾರೆ. ಇದೇ ವೇಳೆ ಕಾರ್ಯಪ್ರವೃತರಾದ ಸಿಡ್ನಿ ಕ್ರಿಕೆಟ್ ಮೈದಾನದ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದ 6 ಮಂದಿಯನ್ನು ಮೈದಾನದಿಂದ ಹೊರ ಹೋಗುವಂತೆ ತಿಳಿಸಿದ್ದಾರೆ.

Virat Kohli

Virat Kohli

 • Share this:
  ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಆಟಗಾರರ ಮೇಲಿನ ಜನಾಂಗೀಯ ನಿಂದನೆಯ ವಿರುದ್ಧ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಿಡಿಕಾರಿದ್ದಾರೆ. ಆಟಗಾರರ ವಿರುದ್ಧದ ನಿಂದನೆಯ ವಿಚಾರವಾಗಿ ಟ್ವೀಟರ್​ನಲ್ಲಿ ಕೊಹ್ಲಿ ಅಸಮಾಧಾನ ಹೊರಹಾಕಿದ್ದಾರೆ. ಸಿಡ್ನಿ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ 3ನೇ ದಿನ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಕೆಲ ಪ್ರೇಕ್ಷಕರು ನಿಂದಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಲಾಗಿತ್ತು. ಇದಾಗ್ಯೂ 4ನೇ ದಿನ ಕೂಡ ಬೌಂಡರಿ ಲೈನ್​ನಲ್ಲಿದ್ದ ಸಿರಾಜ್ ಅವರನ್ನು ಕೆಟ್ಟದಾಗಿ ನಿಂದಿಸಿದ್ದರು.

  ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ಜನಾಂಗೀಯ ನಿಂದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಬೌಂಡರಿ ಲೈನ್​ ಬಳಿ ಇಂತಹ ವರ್ತನೆ ಹಲವು ಬಾರಿ ನನ್ನ ಅನುಭವಕ್ಕೂ ಬಂದಿವೆ. ಜನಾಂಗೀಯ ನಿಂದನೆ ಮಾಡುವವರ ವಿರುದ್ಧ ಕಠಿಣ ಕ್ರಮಗೊಳ್ಳಬೇಕೆಂದು ಕೊಹ್ಲಿ ಆಗ್ರಹಿಸಿದ್ದಾರೆ.

  ನಾನು ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್​ ಮಾಡುವಾಗ ಸಹ ಇಂತಹ ಕೆಟ್ಟ ಸನ್ನಿವೇಶಗಳನ್ನು ಎದುರಿಸಿದ್ದೇನೆ. ಇಂತಹ ವರ್ತನೆ ಇದು ರೌಡಿಸಂನ ಪರಾಕಾಷ್ಠೆ. ಮೈದಾನದಲ್ಲಿ ಇದೆಲ್ಲ ನಡೆಯುತ್ತಿರುವುದನ್ನು ನೋಡಿ ನಿಜವಾಗಲೂ ನೋವಾಗಿ ಎಂದು ಕೊಹ್ಲಿ ತಿಳಿಸಿದ್ದಾರೆ.

  ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿರುವ ಕೊಹ್ಲಿ, ಅಪರಾಧಿಗಳ ವಿರುದ್ಧ ತೆಗೆದುಕೊಳ್ಳುವ ಕಠಿಣ ಕ್ರಮಗಳು ಮುಂದೆ ಇಂತಹ ತಪ್ಪುಗಳನ್ನು ತಡೆಯುತ್ತವೆ ಎಂದಿದ್ದಾರೆ. ಇನ್ನು ಭಾರತೀಯ ಆಟಗಾರರ ಮೇಲಿನ ಜನಾಂಗೀಯ ನಿಂದನೆ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ವಿಷಾದ ವ್ಯಕ್ತಪಡಿಸಿದ್ದು, ಅನುಚಿತ ವರ್ತನೆ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
  Published by:zahir
  First published: