ಭಾರತ ಮತ್ತು ದಕ್ಷಿಣ ಆಫ್ರಿಕಾ (South Africa) ನಡುವೆ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಪುತ್ರಿ (Anushka's daughter Vamika) ವಮಿಕಾಳ ಮುಖ ದರ್ಶನವಾಗಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ(Instagram) ವಿರಾಟ್ ಕೊಹ್ಲಿ (Virat Kohli) ಪೋಸ್ಟ್ ಮಾಡಿದ್ದಾರೆ. ಖ್ಯಾತ ಕ್ರಿಕೆಟ್ ಆಟಗಾರ, ಭಾರತ ತಂಡದ ನಾಯಕ ವಿರಾಟ್ ಮತ್ತು ಬಾಲಿವುಡ್ ನಟಿ ಅನುಷ್ಕಾ ಮಗಳನ್ನು ನೋಡಲು ಯಾರಿಗೆ ತಾನೇ ಕೂತೂಹಲವಿಲ್ಲ ಹೇಳಿ. ಮಗಳು ಹುಟ್ಟಿ ಸುಮಾರು ಒಂದು ವರ್ಷದ ಮೇಲಾದರೂ ದಂಪತಿ ತಮ್ಮ ಮಗಳ ಮುಖ ಪರಿಚಯ ಮಾತ್ರ ಇನ್ನೂ ಮಾಡಿಲ್ಲ. ತನ್ನ ಮಗಳ ಹೆಸರು ವಮಿಕಾ ಎಂದು ಘೋಷಿಸಿದ್ದು ಮತ್ತು ಮುಖ ಮರೆಮಾಚಿದ ಕೆಲವು ಫೋಟೋಗಳನ್ನು (Photos) ಮಾತ್ರ ವಿರಾಟ್ ಮತ್ತು ಅನುಷ್ಕಾ ಆಗಾಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಕಿಂಗ್ ಕೊಹ್ಲಿ ಏನೇಳಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಫೋಟೋ ಸದ್ಯ ಸಾಕಷ್ಟು ವೈರಲ್
ಇದನ್ನು ನೋಡಿದ ಅಭಿಮಾನಿಗಳು ವಮಿಕಾ ಹೀಗಿರಬಹುದು, ವಿರಾಟ್ನಂತೆ ಇದಾಳೋ, ಅನುಷ್ಕಾ ಹಾಗೆ ಇದ್ಧಾಳೋ ಎಂಬ ಲೆಕ್ಕಾಚಾರ ಮನಸಲ್ಲೇ ಹಾಕಿಕೊಳ್ಳುತ್ತಿದ್ದರು. ವಿರಾಟ್ ಮತ್ತು ಅನುಷ್ಕಾ ಕೆಲವು ಗೌಪ್ಯತೆ ಕಾಪಾಡುವ ದೃಷ್ಠಿಯಿಂದ ಮಗಳ ಫೋಟೋವನ್ನು ಶೇರ್ ಮಾಡುವುದಿಲ್ಲ ಮತ್ತು ಯಾರು ಪ್ರದರ್ಶಿಸದಂತೆ ಹಲವು ಭಾರಿ ಕೇಳಿಕೊಂಡಿದ್ದಾರೆ. ವಮಿಕಾ ಫೋಟೋವನ್ನುರಿವೀಲ್ಮಾಡಬಾರದು ಎಂದು ಸಾಕಷ್ಟು ಪ್ರಯತ್ನಿಸುತ್ತಿದ್ದರು.
ಅನುಷ್ಕಾ ಮಗಳೊಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೂ ಸಹ ವಮಿಕಾ ಮುಖವನ್ನು ಮುಚ್ಚಿಕೊಂಡೇ ಹೋಗುತ್ತಾರೆ. ಆದರೂ ವಮಿಕಾ ಫೋಟೋವನ್ನು ಸ್ಟಾರ್ಸ್ಪೋರ್ಟ್ಸ್ ವಾಹಿನಿ ರಿ ವೀಲ್ಮಾಡಿದೆ. ವಿರಾಟ್ ಪುತ್ರಿ ನೋಡಬೇಕೆಂಬ ಅಭಿಮಾನಿಗಳ ಕೂತೂಹಲ ತಣಿದಿದೆ. ವಮಿಕಾಳ ಈ ಫೋಟೋ ಸದ್ಯ ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ: Anushka sharma: ಸೌತ್ ಆಫ್ರಿಕಾದಲ್ಲಿ ಪುಡಿ ದೋಸೆ ತಿಂದ ಅನುಷ್ಕಾ ಶರ್ಮಾ!
ಪೋಟೋ ಶೇರ್ ಮಾಡದಂತೆ ಮನವಿ
ಫೋಟೋ ವೈರಲ್ ಆಗ್ತಿದ್ದಂತೆ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯದ ಬಗ್ಗೆ ಪೋಸ್ಟ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ."ಹಾಯ್ ನಿನ್ನೆ ನನ್ನ ಮಗಳು ವಮಿಕಾ ಫೋಟೋವನ್ನು ಕ್ರೀಡಾಂಗಣದಲ್ಲಿ ಸೆರೆ ಹಿಡಿಯಲಾಗಿದ್ದು ಫೋಟೋವನ್ನು ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದೀರಿ. ಕ್ಯಾಮರಾ ನಮ್ಮನ್ನು ಸೆರೆ ಹಿಡಿಯುತ್ತದೆ ಎಂಬುದರ ಬಗ್ಗೆ ತಿಳಿದಿರಲಿಲ್ಲ.
ಈ ಮೂಲಕ ಹೇಳುವುದೇನೆಂದರೆ ನಾವು ಮೊದಲೇ ತಿಳಿಸಿರುವಂತೆ ವಮಿಕಾ ಫೋಟೋವನ್ನು ಯಾರು ಕ್ಲಿಕ್ ಮಾಡಬಾರದು ಮತ್ತು ಅದನ್ನು ಹಂಚಿಕೊಳ್ಳಬಾರದು. ಸದ್ಯ ಸಿಕ್ಕಿರುವ ಫೋಟೋವನ್ನು ಶೇರ್ ಮಾಡದಿದ್ದರೆ ನಿಜಕ್ಕೂ ಪ್ರಶಂಸನೀಯ ಮತ್ತು ಧನ್ಯವಾದಗಳು ಎಂದು ಕೊಹ್ಲಿ ಮತ್ತು ಅನುಷ್ಕಾ ಬರೆದುಕೊಂಡಿದ್ದಾರೆ.
ಈ ಮೊದಲು ತಮ್ಮ ಮಗಳಿಗೆ ಅನಗತ್ಯ ಪ್ರಚಾರ ನೀಡುವುದು ಬೇಡ ಹಾಗೂ ಸೋಶಿಯಲ್ ಮೀಡಿಯಾದಿಂದ ಆಕೆಯನ್ನು ದೂರ ಇಡಬೇಕು ಎಂಬ ನಿರ್ಧಾರದ ಹಿನ್ನೆಲೆಯಲ್ಲಿ ದಂಪತಿ ಆಕೆಯ ಫೋಟೋ ಹಂಚಿಕೊಂಡಿಲ್ಲ. ಇದನ್ನು ಮಾಧ್ಯಮದವರು ಹಾಗೂ ಪಾಪರಾಜಿಗಳು ಬೆಂಬಲಿಸಿದ್ದು ಅವರ ನಿರ್ಧಾರಕ್ಕೆ ಗೌರವ ನೀಡಿ ಅದೇ ರೀತಿ ಬಂದಿದ್ದರು. ಯಾವ ಮಾಧ್ಯಮಗಳು ಕೂಡ ವಮಿಕಾಳ ಫೋಟೋವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ.
ಎಲ್ಲೆಡೆ ಟೀಕೆ
ಭಾರತ ಹಾಗೂ ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕೆ ಅನುಷ್ಕಾ ಶರ್ಮಾ ಅವರು ಮಗಳು ವಮಿಕಾ ಜತೆ ಬಂದಿದ್ದರು. ಪೆವಿಲಿಯನ್ನಲ್ಲಿ ಮಗಳ ಜತೆ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಕೊಹ್ಲಿ ಅರ್ಧ ಶತಕ ಪೂರೈಸಿದ ಸಂದರ್ಭ ಅನುಷ್ಕಾ ಪತಿಗೆ ಚಿಯರ್ ಅಪ್ ಮಾಡುತ್ತಿದ್ದರು, ಈ ವೇಳೆ ಕ್ಯಾಮೆರಾಮೆನ್ ವಮಿಕಾಳನ್ನು ಸೆರೆ ಹಿಡಿದಿದ್ದಾನೆ.
ಇದನ್ನೂ ಓದಿ: Vamika Kohli: ಕೊನೆಗೂ ಅಭಿಮಾನಿಗಳಿಗೆ ಸಿಕ್ತು ಕೊಹ್ಲಿ ಪುತ್ರಿ ದರ್ಶನ.. ಥೇಟ್ ಅಪ್ಪನಂತೆ ಮುದ್ದಾಗಿದ್ದಾಳೆ ವಮಿಕಾ!
ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿದ್ದು ರಿಯಲ್ ಪ್ರಿನ್ಸೆಸ್, ಸ್ಪೆಷಲ್ ಗೆಸ್ಟ್ ಅಂತೆಲ್ಲಾ ಬರೆದುಕೊಂಡಿದ್ದರು. ಇನ್ನು, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಈ ಕ್ರಮಕ್ಕೆ ಎಲ್ಲೆಡೆ ಟೀಕೆಗಳು ಕೇಳಿ ಬರುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ