HOME » NEWS » Sports » CRICKET VIRAT KOHLI RCB CAPTAIN LAST GOOGLE SEARCH HAS A CRISTIANO RONALDO CONNECTION STG HG

Virat Kohli ಕೊನೆಯ ಬಾರಿಗೆ ಗೂಗಲ್ ಮಾಡಿದ ವಿಚಾರ ಯಾವುದು? ಬಹಿರಂಗಪಡಿಸಿದ RCB‌ ತಂಡದ ನಾಯಕ 

Virat Kohli: ವಿರಾಟ್ ಕೊಹ್ಲಿ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಅಪಾರ ಅಭಿಮಾನಿ ಮತ್ತು ಇತ್ತೀಚಿನ ವರ್ಷಗಳಲ್ಲಿ, ಪೋರ್ಚುಗೀಸ್‌ ಮೂಲದ ಆಟಗಾರನು ತಮ್ಮ ಕೆಲಸದ ನೀತಿ ಮತ್ತು ಉತ್ಸಾಹದ ಮೂಲಕ ತನಗೆ ಎಷ್ಟು ಸ್ಫೂರ್ತಿ ನೀಡುತ್ತಾರೆ ಎಂಬುದನ್ನು ಕ್ರಿಕೆಟ್‌ ತಂಡದ ನಾಯಕ ಪುನರುಚ್ಚರಿಸಿದ್ದಾರೆ.

news18-kannada
Updated:May 31, 2021, 12:18 PM IST
Virat Kohli ಕೊನೆಯ ಬಾರಿಗೆ ಗೂಗಲ್ ಮಾಡಿದ ವಿಚಾರ ಯಾವುದು? ಬಹಿರಂಗಪಡಿಸಿದ RCB‌ ತಂಡದ ನಾಯಕ 
Virat kohli
  • Share this:

ಭಾರತ ಕ್ರಿಕೆಟ್‌ ತಂಡದ ಹಾಗೂ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್‌ಗಳು, ಅವರ ಕ್ರಿಕೆಟ್‌ನ ಸಾಧನೆಗಳು, ಜಾಹೀರಾತುಗಳನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಜತೆಗೆ ಅವರ ಖಾಸಗಿ ವಿಚಾರಗಳನ್ನು ತಿಳಿದುಕೊಳ್ಳಲೂ ಸಹ ಹುಡುಕುತ್ತಿರುತ್ತಾರೆ. ಇದೇ ರೀತಿ, ವಿರಾಟ್‌ ಕೊಹ್ಲಿ ಈವರೆಗೆ ಗೂಗಲ್‌ ಮಾಡಿದ ವಿಚಾರಗಳಲ್ಲಿ ಕೊನೆಯ ಬಾರಿಗೆ ಮಾಡಿರುವುದು ಯಾವುದು? ಎಂದು ಅವರ ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದು, ಅದಕ್ಕೆ ಕೊಹ್ಲಿ ಉತ್ತರ ನೀಡಿದ್ದಾರೆ.


ವಿರಾಟ್ ಕೊಹ್ಲಿ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಅಪಾರ ಅಭಿಮಾನಿ ಮತ್ತು ಇತ್ತೀಚಿನ ವರ್ಷಗಳಲ್ಲಿ, ಪೋರ್ಚುಗೀಸ್‌ ಮೂಲದ ಆಟಗಾರನು ತಮ್ಮ ಕೆಲಸದ ನೀತಿ ಮತ್ತು ಉತ್ಸಾಹದ ಮೂಲಕ ತನಗೆ ಎಷ್ಟು ಸ್ಫೂರ್ತಿ ನೀಡುತ್ತಾರೆ ಎಂಬುದನ್ನು ಕ್ರಿಕೆಟ್‌ ತಂಡದ ನಾಯಕ ಪುನರುಚ್ಚರಿಸಿದ್ದಾರೆ.ಅಲ್ಲದೆ, ಕ್ರಿಸ್ಚಿಯಾನೋ ರೊನಾಲ್ಡೋ ಪರವಾಗಿ ಕೊಹ್ಲಿಯ ಮೆಚ್ಚುಗೆ ಅಲ್ಲಿಗೇ ಮುಗಿಯುವುದಿಲ್ಲ. ಅವರು ಯುವೆಂಟಸ್‌ ತಂಡದ ಫಾರ್ವರ್ಡ್‌ ಆಟಗಾರನ ನಿಕಟ ಅನುಯಾಯಿಯೂ ಕೂಡ. ಕ್ರಿಸ್ಚಿಯಾನೋ ರೊನಾಲ್ಡೋ ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು.

ಕ್ರಿಶ್ಚಿಯಾನೋ ರೊನಾಲ್ಡೋ ಬಗ್ಗೆ ಪೀಠಿಕೆ ಹಾಕಿದ್ದು ಏಕೆಂದರೆ, ಭಾರತ ಕ್ರಿಕೆಟ್‌ ತಂಡದ ಹಾಗೂ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಅವರು ಗೂಗಲ್‌ನಲ್ಲಿ ಹುಡುಕಿದ ಕೊನೆಯ ವಿಷಯ ಯಾವುದು ಎಂದು ಕೊಹ್ಲಿಯ ಅಭಿಮಾನಿಗಳೊಂದಿಗಿನ ಇನ್​ಸ್ಟಾಗ್ರಾಂ‌ ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾಯಿತು. ಅದಕ್ಕೆ ಕೊಹ್ಲಿ ನೀಡಿದ ಉತ್ತರ - ಕ್ರಿಸ್ಟಿಯಾನೊ ರೊನಾಲ್ಡೋ ಟ್ರಾನ್ಸ್‌ಫರ್‌.


ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿಯ ಜೊತೆಗೆ, Cristiano Ronaldo ಪ್ರಸ್ತುತ ಪೀಳಿಗೆಯ ಶ್ರೇಷ್ಠ ಫುಟ್ಬಾಲ್ ಆಟಗಾರನಾಗಿದ್ದು, ಇವರಿಬ್ಬರನ್ನು ಇತಿಹಾಸದಲ್ಲಿಯೇ ಅತ್ಯುತ್ತಮ ಎಂದು ಕೆಲವರು ಹೇಳುತ್ತಾರೆ. ಮೆಸ್ಸಿ ಬಾಯ್‌ಹುಡ್‌ ಕ್ಲಬ್ ಬಾರ್ಸಿಲೋನಾವನ್ನು ಪ್ರತಿನಿಧಿಸುತ್ತಿದ್ದರೆ, ರೊನಾಲ್ಡೋ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಮತ್ತು ಈಗ ಯುವೆಂಟಸ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ.


ಕಳೆದ ವರ್ಷ ಭಾರತದ ಫುಟ್ಬಾಲ್ ಆಟಗಾರ ಸುನೀಲ್‌ ಛೆಟ್ರಿ ಅವರೊಂದಿಗೆ ಚಾಟ್‌ ಮಾಡುವ ವೇಳೆ, ಕೊಹ್ಲಿ ಅವರು ಕ್ರಿಕೆಟ್‌ ಬಿಟ್ಟು ಉಳಿದ ಆಟಗಳಿಂದ ಸ್ಫೂರ್ತಿ ಪಡೆದ ಕ್ರೀಡಾಪಟುಗಳ ಬಗ್ಗೆ ಹೇಳಿಕೊಂಡಿದ್ದರು.


“ಅನೇಕ ಶ್ರೇಷ್ಠ ಕ್ರೀಡಾಪಟುಗಳಿದ್ದಾರೆ. ನಾವು ನೋಡುವ ಹಲವಾರು ಜನರು ಅದ್ಭುತವಾಗಿದ್ದಾರೆ, ಆದರೆ ಒಬ್ಬ ವ್ಯಕ್ತಿ ನಿಯಮಿತವಾಗಿ ದೊಡ್ಡ ಆಟಗಳನ್ನು ಹುಡುಕುತ್ತಾರೆ.. ಎದ್ದು ಕಾಣುವ ವಿಷಯವೆಂದರೆ, ಅವರು (ಕ್ರಿಸ್ಟಿಯಾನೋ ರೊನಾಲ್ಡೋ) ಯುವೆಂಟಸ್‌ ತಂಡಕ್ಕೆ ಸೇರಿಕೊಂಡರು. (ಮತ್ತು) ಇದು ಯುಇಎಫ್‌ಎ ಚಾಂಪಿಯನ್ಸ್ ಎಂದು ನನಗೆ ನೆನಪಿದೆ. ಯುವೆಂಟಸ್‌ ಮತ್ತು ಅಟ್ಲೆಟಿಕೋ ಮ್ಯಾಡ್ರಿಡ್ ನಡುವಿನ ಲೀಗ್ ಪಂದ್ಯ. ಮೊದಲ ಪಂದ್ಯದಲ್ಲಿ ಅಥವಾ ಹಂತದಲ್ಲಿ ಯುವೆಂಟಸ್‌ 2-0 ಗೋಲುಗಳಿಂದ ಸೋತರು. ನಂತರ, ಅವರು ಮನೆಯಲ್ಲಿ ಆಡುತ್ತಿದ್ದ ಎರಡನೇ ಪಂದ್ಯಕ್ಕೆ ಒಬ್ಬ ವ್ಯಕ್ತಿ ಆಟಕ್ಕೆ ಎರಡು ದಿನಗಳ ಮೊದಲು, ತನ್ನ ಸ್ನೇಹಿತರಿಗೆ, ಪಂದ್ಯ ನೋಡಲು ಬನ್ನಿ. ಏಕೆಂದರೆ ಇದು ವಿಶೇಷ ರಾತ್ರಿ ಆಗಲಿದೆ ಎಂದಿದ್ದರು” ಎಂದು ಕೊಹ್ಲಿ ಹೇಳಿದ್ದಾರೆ.

"ನಾವು ಈ ಪಂದ್ಯದಲ್ಲಿ ಗೆಲ್ಲಲಿದ್ದೇವೆ ಮತ್ತು ಹ್ಯಾಟ್ರಿಕ್ ಗಳಿಸಲಿದ್ದೇವೆ ಎಂದು ಒಬ್ಬ ವ್ಯಕ್ತಿ ಹೇಳುವುದು ಅವರ ದೃಢ ನಿಶ್ಚಯ. ಅದು ನನಗೆ ಬೀಸ್ಟ್‌ ಮನಸ್ಥಿತಿ. ಆ ರೀತಿಯ ಮನಸ್ಥಿತಿ ಇದೆ ಎಂದು ಹೇಳಿಕೊಳ್ಳುವವರು ಬಹಳ ಕಡಿಮೆ. ನನಗೆ ಆ ಮಾನಸಿಕ ಶಕ್ತಿ ಪ್ರತಿ ಬಾರಿಯೂ ಸ್ಪೂರ್ತಿದಾಯಕವಾಗಿದೆ,” ಎಂದು ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಸುನೀಲ್‌ ಛೆಟ್ರಿಗೆ ಕಳೆದ ವರ್ಷ ಹೇಳಿದ್ದರು.


First published: May 31, 2021, 12:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories