HOME » NEWS » Sports » CRICKET VIRAT KOHLI RAVICHANDRAN ASHWIN UNHAPPY WITH SG BALL ZP

India vs England: ಇಂಗ್ಲೆಂಡ್ ವಿರುದ್ದದ ಸೋಲಿಗೆ ಬಾಲ್ ಕಾರಣ? ಈ ಬಗ್ಗೆ ಕೊಹ್ಲಿ, ಅಶ್ವಿನ್ ಹೇಳಿದ್ದೇನು?

ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಎಸ್​ಜಿ ಚೆಂಡಿನ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

news18-kannada
Updated:February 11, 2021, 5:30 PM IST
India vs England: ಇಂಗ್ಲೆಂಡ್ ವಿರುದ್ದದ ಸೋಲಿಗೆ ಬಾಲ್ ಕಾರಣ? ಈ ಬಗ್ಗೆ ಕೊಹ್ಲಿ, ಅಶ್ವಿನ್ ಹೇಳಿದ್ದೇನು?
Ashwin-Kohli
  • Share this:
ಭಾರತದ ವಿರುದ್ಧ ಇಂಗ್ಲೆಂಡ್ ಮೊದಲ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಡ್ರಾನಲ್ಲಿ ಅಂತ್ಯವಾಗಲಿದೆ ಎಂದು ನಿರೀಕ್ಷಿಸಿದ್ದ ಪಂದ್ಯವು ಕೊನೆಯ ದಿನ ರೋಚಕ ತಿರುವು ಪಡೆಯಿತು. ಅದರಲ್ಲೂ 5ನೇ ದಿನ ಟೀಮ್ ಇಂಡಿಯಾವನ್ನು 192 ರನ್​ಗಳಿಗೆ ಆಲೌಟ್ ಮಾಡುವ ಮೂಲಕ ಇಂಗ್ಲೆಂಡ್ 227 ರನ್​ಗಳ ಭರ್ಜರಿ ಜಯ ಸಾಧಿಸಿತು. ಇದರ ಬೆನ್ನಲ್ಲೇ ಈ ಪಂದ್ಯದಲ್ಲಿ ಬಳಸಲಾದ ಚೆಂಡಿನ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಮೊದಲ ಟೆಸ್ಟ್​ನಲ್ಲಿ ಬಳಸಿರುವ ಎಸ್​ಜಿ ಬಾಲ್ ಗುಣಮಟ್ಟದಾಗಿರಲಿಲ್ಲ. 60 ಓವರ್​ ವೇಳೆಗೆ ಚೆಂಡು ಸೀಮ್ ಕಳೆದುಕೊಂಡು ಕಳಪೆಯಾಗಿರುತ್ತಿತ್ತು. ಈ ಸಮಸ್ಯೆಯು ಈ ಹಿಂದೆಯೂ ತಲೆದೂರಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಟೀಮ್ ಇಂಡಿಯಾ ನಾಯಕನ ಈ ಹೇಳಿಕೆಗೆ ರವಿಚಂದ್ರನ್ ಅಶ್ವಿನ್ ಕೂಡ ಬೆಂಬಲ ಸೂಚಿಸಿದ್ದು, ನಾನು ಕೂಡ ಇದೇ ದೂರನ್ನು ನೀಡಿದ್ದೆ. ಚೆಂಡು ಬೇಗನೇ ಹರಿದು ಹೋಗುತ್ತಿತ್ತು. ಇಂಥ ಕಳಪೆ ಚೆಂಡಿನಿಂದ ನಮಗೆ ಕೆಟ್ಟ ಅನುಭವವಾಗಿದೆ ಎಂದಿದ್ದಾರೆ.

ಅಶ್ವಿನ್ ಹಾಗೂ ಕೊಹ್ಲಿಯ ಈ ಆರೋಪದ ಬೆನ್ನಲ್ಲೇ, ಚೆನ್ನೈನಲ್ಲಿ ನಡೆದ ಪಂದ್ಯದ ಅಂಕಿ ಅಂಶಗಳ ಚರ್ಚೆಗಳು ಕೂಡ ನಡೆಯುತ್ತಿದೆ. ಏಕೆಂದರೆ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಬಿದ್ದಂತಹ 40 ವಿಕೆಟ್‌ಗಳಲ್ಲಿ 26 ಬ್ಯಾಟ್ಸ್‌ಮನ್‌ಗಳು ಹೊಸ ಚೆಂಡಿನಲ್ಲೇ ಔಟಾಗಿದ್ದರು. ಅಂದರೆ 30 ಓವರ್​ಗಿಂತ ಕಡಿಮೆ ಹಳೆಯದಾಗಿದ್ದ ಬಾಲ್​ ವೇಳೆ ಹೆಚ್ಚಿನ್ ಬ್ಯಾಟ್ಸ್​ಮನ್​ಗಳು ಔಟ್ ಆಗಿದ್ದರು. ಇನ್ನು ಈ ಪಂದ್ಯದಲ್ಲಿ ಅಶ್ವಿನ್ 9 ವಿಕೆಟ್ ಕಬಳಿಸಿ ಮಿಂಚಿದ್ದರು. ಇದಾಗ್ಯೂ ಚೆಂಡು ಕಳಪೆ ಮಟ್ಟದಿಂದ ಕೂಡಿತ್ತು ಎಂದು ದೂರಿರುವುದರಿಂದ ಈ ವಿಷಯ ಚರ್ಚೆಗೆ ಕಾರಣವಾಗಿದೆ.

ಇನ್ನು ಎಸ್‌ಜಿ ಚೆಂಡಿನ ಗುಣಮಟ್ಟದ ಬಗ್ಗೆ ದೂರು ಕೇಳಿ ಬರುತ್ತಿರುವುದು ಹೊಸದಲ್ಲ. ಏಕೆಂದರೆ 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ, ಅಶ್ವಿನ್ ಮತ್ತು ಕುಲದೀಪ್ ಯಾದವ್ ಅವರು ಎಸ್‌ಜಿ ಚೆಂಡಿನಲ್ಲಿ ಬೌಲಿಂಗ್ ಮಾಡುವುದು ಕಷ್ಟಕರವಾಗಿದೆ ಎಂದಿದ್ದರು. ಅಲ್ಲದೆ ರಣಜಿ ಟ್ರೋಫಿ ವೇಳೆ ಕೂಡ ಹಲವಾರು ಬೌಲರುಗಳು ಈ ಬಗ್ಗೆ ದೂರು ನೀಡಿದ್ದರು. ಅಲ್ಲದೆ ಈ ವೇಳೆ ಅನೇಕ ಬಾರಿ ಚೆಂಡನ್ನು ಬದಲಿಸಲಾಗಿತ್ತು.

ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಎಸ್​ಜಿ ಚೆಂಡಿನ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ಈ ಬಗ್ಗೆ ಬಿಸಿಸಿಐ ಕಡೆಯಿಂದ ಯಾವುದೇ ದೂರು ಬಂದಿಲ್ಲ ಎಂದು ಎಸ್‌ಜಿಯ ಮಾರ್ಕೆಟಿಂಗ್ ಡೈರೆಕ್ಟರ್ ಪರಾಸ್ ಆನಂದ್ ತಿಳಿಸಿದ್ದಾರೆ.
Published by: zahir
First published: February 11, 2021, 5:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories