ಕೊಹ್ಲಿಗೆ ಹೆಮ್ಮಯ ಗರಿ; ಪೋರ್ಬ್ಸ್ ಬಿಡುಗಡೆ ಮಾಡಿರುವ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್​!

Virat Kohli: 2020ರ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯನ್ನು ಪೋರ್ಬ್ಸ್​​​​​​ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೊಹ್ಲಿ 196 ಕೋಟಿ (26 ಮಿಲಿಯನ್​​ ಯುಎಸ್​ಡಿ ) ಆದಾಯವನ್ನು ಹೊಂದಿದ್ದು, 66ನೇ ಸ್ಥಾನ ಪಡೆದುಕೊಂಡಿದ್ದಾರೆ.

news18-kannada
Updated:May 30, 2020, 5:33 PM IST
ಕೊಹ್ಲಿಗೆ ಹೆಮ್ಮಯ ಗರಿ; ಪೋರ್ಬ್ಸ್ ಬಿಡುಗಡೆ ಮಾಡಿರುವ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್​!
ವಿರಾಟ್ ಕೊಹ್ಲಿ (ಬ್ಯಾಟ್ಸ್‌ಮನ್)
  • Share this:
ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಮತ್ತೊಂದು ಸಾಧನೆಗೆ ಪಾತ್ರರಾಗಿದ್ದಾರೆ. ಪೋರ್ಬ್ಸ್​​​​​​ ಬಿಡುಗಡೆ ಮಾಡಿರುವ 2020 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಮಾತ್ರವಲ್ಲದೆ, ಭಾರತದ ಏಕೈಕ ಕ್ರೀಡಾಪಟುವಿನ ಹೆಸರು ಪೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ಕೊಹ್ಲಿಯ ಮತ್ತೊಂದು ಹೆಮ್ಮೆಯ ವಿಚಾರವಾಗಿದೆ.

2020ರ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯನ್ನು ಪೋರ್ಬ್ಸ್​​​​​​ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೊಹ್ಲಿ 196 ಕೋಟಿ (26 ಮಿಲಿಯನ್​​ ಯುಎಸ್​ಡಿ ) ಆದಾಯವನ್ನು ಹೊಂದಿದ್ದು, 66ನೇ ಸ್ಥಾನ ಪಡೆದುಕೊಂಡಿದ್ದಾರೆ.

ವಿರಾಟ್​ ಕೊಹ್ಲಿ ಕಳೆದ ವರ್ಷ ಕೂಡ ಪೋರ್ಬ್ಸ್​​​​​​ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದರು. ಈ ಬಾರಿ ಅವರ ಆದಾಯದಲ್ಲಿ ಏರಿಕೆ ಕಂಡಿದ್ದು, 30ಕ್ಕಿಂತ ಹೆಚ್ಚಿನ ಸ್ಥಾನದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಜಾಹೀರಾತು ಮತ್ತು ಬಿಸಿಸಿಐ ನೀಡುವ 2 ಮಿಲಿಯನ್​​ ಡಾಲರ್​​ ವೇತನವನ್ನು ಪಡೆಯುತ್ತಿದ್ದಾರೆ.

ಇನ್ನು ಸ್ವಿಜ್ಜರ್​ಲೆಂಡ್​​ನ ರೋಜರ್​​ ಫೆಡರರ್​​​​ 802 ಕೋಟಿ (106.3 ಮಿಲಿಯನ್​ ಯುಎಸ್​ಡಿ) ಆದಾಯವನ್ನು ಹೊಂದಿದ್ದು, ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರೋಜರ್​​ ಫೆಡರರ್​ ನಂತರ ಕ್ರಿಶ್ಚಿಯನ್​​ ರೊನಾಲ್ಡೊ 793 ಕೋಟಿ ರೂ (105 ಮಿಲಿಯನ್ ಯುಎಸ್​ಡಿ​) ಸ್ಥಾನ ಪಡೆದಿದ್ದರೆ, ಅರ್ಜೆಂಟೈನಾದ ಲಿಯೋನಲ್​ ಮೆಸ್ಸಿ 785 ಕೋಟಿ ರೂ (104 ಮಿಲಿಯನ್ ಯುಎಸ್​ಡಿ​) ಆದಾಯ ಹೊಂದಿದ್ದು 3ನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್​ ನೇಮರ್​​​ 721 ಕೋಟಿ ರೂ. (95.5 ಮಿಲಿಯನ್ ಯುಎಸ್​ಡಿ​) ಆದಾಯವನ್ನು ಹೊಂದಿದ್ದು, 4ನೇ ಸ್ಥಾನದಲ್ಲಿದ್ದಾರೆ.

ಕಿಚ್ಚನ ನಾಯಕಿಯನ್ನು ಕಾರಿನಿಂದ ಹೊರದಬ್ಬಿದ್ರಾ ಆ ನಿರ್ದೇಶಕ?
First published: May 30, 2020, 4:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading