HOME » NEWS » Sports » CRICKET VIRAT KOHLI NAMED ICC MENS ODI CRICKETER OF THE DECADE ZP

Virat Kohli: ಐಸಿಸಿ ದಶಕದ ಏಕದಿನ ಕ್ರಿಕೆಟಿಗ: ಕಿಂಗ್ ಕೊಹ್ಲಿಗೆ ಒಲಿದ ಗೌರವ

ICC Decade Awards: ಸದ್ಯ 242 ಏಕದಿನ ಇನಿಂಗ್ಸ್​ ಆಡಿರುವ 32ರ ಹರೆಯದ ವಿರಾಟ್ ಕೊಹ್ಲಿ 59.31ರ ಸರಾಸರಿಯಲ್ಲಿ 12040 ರನ್ ಕಲೆಹಾಕಿದ್ದಾರೆ. ಇದರಲ್ಲಿ 43 ಶತಕಗಳು ಮತ್ತು 60 ಅರ್ಧ ಶತಕಗಳು ಮೂಡಿಬಂದಿವೆ.

news18-kannada
Updated:December 28, 2020, 3:53 PM IST
Virat Kohli: ಐಸಿಸಿ ದಶಕದ ಏಕದಿನ ಕ್ರಿಕೆಟಿಗ: ಕಿಂಗ್ ಕೊಹ್ಲಿಗೆ ಒಲಿದ ಗೌರವ
Virat Kohli
  • Share this:
ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ದಶಕದ ಏಕದಿನ ಕ್ರಿಕೆಟಿಗನ ಹೆಸರನ್ನು ಪ್ರಕಟಿಸಿದೆ. ಎಲ್ಲಾ ಆಟಗಾರರನ್ನು ಹಿಂದಿಕ್ಕಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಐಸಿಸಿಯ ಶ್ರೇಷ್ಠ ಗೌರವ ಲಭಿಸಿದೆ. ದಶಕದ ಏಕದಿನ ಆಟಗಾರರ ನಾಮನಿರ್ದೇಶೀತ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಲ್ಲದೆ, ರೋಹಿತ್ ಶರ್ಮಾ ಮತ್ತು ಎಂ.ಎಸ್. ಧೋನಿ (ಭಾರತ), ಲಸಿತ್ ಮಾಲಿಂಗ (ಶ್ರೀಲಂಕಾ), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಮತ್ತು ಕುಮಾರ್ ಸಂಗಕ್ಕಾರ (ಶ್ರೀಲಂಕಾ) ಹೆಸರುಗಳಿದ್ದವು.

ಅಂತಿಮವಾಗಿ ಮತದಾನದಲ್ಲಿ ದಶಕದ ಏಕದಿನ ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಏಕದಿನ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಿಂದ ಪಿತೃತ್ವ ರಜೆ ಪಡೆದು ಭಾರತಕ್ಕೆ ಮರಳಿದ್ದಾರೆ. ದಶಕದ ಏಕದಿನ ಕ್ರಿಕೆಟಿಗ ಗೌರವ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿಯ ಖುಷಿಯನ್ನು ಹೆಚ್ಚಿಸಿದೆ.

ಇನ್ನು 10 ವರ್ಷಗಳಲ್ಲಿ (ದಶಕ) ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಕೂಡ ಕೊಹ್ಲಿಗಿದೆ. ಇದರೊಂದಿಗೆ ಒಂದು ದಶಕದಲ್ಲಿ 39 ಶತಕಗಳು, 48 ಅರ್ಧ ಶತಕಗಳು, 112 ಕ್ಯಾಚ್‌ಗಳನ್ನು ಸಹ ಟೀಮ್ ಇಂಡಿಯಾ ಪಡೆದುಕೊಂಡಿದ್ದಾರೆ. ಇವೆಲ್ಲವೂ ವಿರಾಟ್ ಕೊಹ್ಲಿ ದಶಕದ ಕ್ರಿಕೆಟಿಗ ಎಂಬ ಪಟ್ಟಕ್ಕೆ ಅರ್ಹನನ್ನಾಗಿಸಿದೆ.

Youtube Video


ಸದ್ಯ 242 ಏಕದಿನ ಇನಿಂಗ್ಸ್​ ಆಡಿರುವ 32ರ ಹರೆಯದ ವಿರಾಟ್ ಕೊಹ್ಲಿ 59.31ರ ಸರಾಸರಿಯಲ್ಲಿ 12040 ರನ್ ಕಲೆಹಾಕಿದ್ದಾರೆ. ಇದರಲ್ಲಿ 43 ಶತಕಗಳು ಮತ್ತು 60 ಅರ್ಧ ಶತಕಗಳು ಮೂಡಿಬಂದಿವೆ.
Published by: zahir
First published: December 28, 2020, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories