ಯಾರ ಹೇರ್​ ಸ್ಟೈಲ್ ಕೂಲ್?: ಹೊಸ ಲುಕ್​​ನಲ್ಲಿ ಮಿಂಚುತ್ತಿರುವ ಟೀಂ ಇಂಡಿಯಾ ಆಟಗಾರರು

India vs Afghanistan: ಭಾರತ ತಂಡದ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಾರ್ದಿಕ್, ಚಹಾಲ್, ಕೊಹ್ಲಿ ಹಾಗೂ ಧೋನಿ ಅವರ ನೂತನ ಹೇರ್​ ಸ್ಟೈಲ್​ ಫೋಟೋ ಹಾಕಿಕೊಂಡಿದ್ದು ವೈರಲ್ ಆಗುತ್ತಿದೆ.

ಹೊಸ ಲುಕ್​ನಲ್ಲಿ ಟೀಂ ಇಂಡಿಯಾ ಆಟಗಾರರು

ಹೊಸ ಲುಕ್​ನಲ್ಲಿ ಟೀಂ ಇಂಡಿಯಾ ಆಟಗಾರರು

  • News18
  • Last Updated :
  • Share this:
ಬೆಂಗಳೂರು (ಜೂ. 20): ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿದ ಬಳಿಕ ಟೀಂ ಇಂಡಿಯಾಕ್ಕೆ ಮುಂದಿನ ಪಂದ್ಯವನ್ನಾಡಲು ಐದು ದಿನಗಳ ಕಾಲವಕಾಶವಿದೆ. ಈ ಮಧ್ಯೆ ಕೊಹ್ಲಿ ಹುಡುಗರು ಫ್ರೀ ಟೈಮ್​ನಲ್ಲಿ ಚೆನ್ನಾಗಿಯೆ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೆ ವಿಭಿನ್ನ ಹೇರ್ ಸ್ಟೈಲ್ ಮೂಲಕ ಮಿಂಚುತ್ತಿದ್ದಾರೆ.

ನಾಯಕ ವಿರಾಟ್ ಕೊಹ್ಲಿ, ಎಂ ಎಸ್ ಧೋನಿ, ಹಾರ್ದಿಕ್ ಪಾಂಡ್ಯ ಹಾಗೂ ಯಜುವೇಂದ್ರ ಚಹಾಲ್ ಹೊಸ ಲುಕ್​ನಲ್ಲಿ ಕಂಗೊಳಿಸುತ್ತಿದ್ದಾರೆ. ಪ್ರಸಿದ್ಧ ಹೇರ್​ ಸ್ಟೈಲ್ ಸೆಲೆಬ್ರಿಟಿ ಅಲೀಮ್ ಹಖಿಮ್ ಅವರು ಧೋನಿ ಹಾಗೂ ಹಾರ್ದಿಕ್ ಅವರ ಕೂದಲಿಗೆ ಕತ್ತರಿ ಹಾಕಿ ಹೊಸ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಎಲ್ಲಡೆ ವೈರಲ್ ಆಗುತ್ತಿದೆ.

 

ಇದೆ ಜೊತೆಗೆ ಭಾರತ ತಂಡದ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಾರ್ದಿಕ್, ಚಹಾಲ್, ಕೊಹ್ಲಿ ಹಾಗೂ ಧೋನಿ ಅವರ ನೂತನ ಹೇರ್​ ಸ್ಟೈಲ್​ ಫೋಟೋ ಹಾಕಿಕೊಂಡಿದ್ದು, ಯಾರ ಹೇರ್​ ಕಟ್ ಕೂಲ್ ಆಗಿದೆ? ಎಂದು ಕೇಳಿದ್ದಾರೆ. ಸಾಕಷ್ಟು ಅಭಿಮಾನಿಗಳು ಇದಕ್ಕೆ ಕಮೆಂಟ್ ಮಾಡಿದ್ದು ಅನೇಕರು ಧೋನಿ ಅವರದ್ದೇ ಹೇರ್​ ಸ್ಟೈಲ್ ಸಖತ್ ಆಗಿದೆ ಎಂದಿದ್ದಾರೆ.

ಭಾರತ ವಿರುದ್ಧ ಹೀನಾಯ ಸೋಲು; ತನ್ನದೆ ಹೊಸ ತಂಡಕಟ್ಟಲು ಮುಂದಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್?

  
View this post on Instagram
 

Whose haircut 💇‍♂️💇‍♂️is the coolest? #TeamIndia


A post shared by Team India (@indiancricketteam) on


ಭಾರತ ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಜೂ. 22 ಶನಿವಾರ ಆಡಲಿದೆ. ಟೀಂ ಇಂಡಿಯಾ ಪರ ಶಿಖರ್ ಧವನ್ ಇಂಜುರಿಯಿಂದಾಗಿ ವಿಶ್ವಕಪ್​ನಿಂದ ಹೊರಗುಳಿದಿದ್ದು, ರಿಷಭ್ ಪಂತ್​ರನ್ನು ಅವರ ಜಾಗಕ್ಕೆ ಸೇರಿಸಿಕೊಳ್ಳಲಾಗಿದೆ.

 

First published: