ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 12 ರನ್ಗಳಿಂದ ಪರಾಜಯಗೊಂಡಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ 2ನೇ ಓವರ್ನಲ್ಲೇ ಆರೋನ್ ಫಿಂಚ್ ವಿಕೆಟ್ ಪಡೆದು ವಾಷಿಂಗ್ಟನ್ ಸುಂದರ್ ಮೊದಲ ಯಶಸ್ಸು ತಂದುಕೊಟ್ಟರು. ಆ ಬಳಿಕ ಜೊತೆಯಾದ ಸ್ಟೀವ್ ಸ್ಮಿತ್ ಹಾಗೂ ಮ್ಯಾಥ್ಯೂ ವೇಡ್ ತಂಡಕ್ಕೆ ಆಸರೆಯಾದರು.
ಇದಾಗ್ಯೂ ಮೊದಲ 10 ಓವರ್ ವೇಳೆ ಆಸ್ಟ್ರೇಲಿಯಾ ಮೊತ್ತ 80 ರನ್ ದಾಟಿರಲಿಲ್ಲ. ಆದರೆ ಎರಡನೇ ಹತ್ತು ಓವರ್ಗಳಲ್ಲಿ 100ಕ್ಕಿಂತ ಹೆಚ್ಚು ಕಲೆಹಾಕುವ ಮೂಲಕ ಬೃಹತ್ ಮೊತ್ತ ಪೇರಿಸಿತು. ಇತ್ತ ಆರಂಭಿಕರಾಗಿ ಕಣಕ್ಕಿಳಿದ ಮ್ಯಾಥ್ಯೂ ವೇಡ್ 53 ಎಸೆತಗಳಲ್ಲಿ 7 ಫೋರ್ ಹಾಗೂ 2 ಸಿಕ್ಸರ್ ಸಹಿತ ಸ್ಪೋಟಕ 80 ರನ್ ಸಿಡಿಸಿದ್ದರು.
ಆದರೆ 11ನೇ ಓವರ್ನಲ್ಲೇ ವೇಡ್ ಪೆವಿಲಿಯನ್ ಕಡೆ ಮುಖ ಮಾಡಬೇಕಿತ್ತು. ಟಿ ನಟರಾಜನ್ ಅವರ ಎಸೆತದಲ್ಲಿ ವೇಡ್ ಎಲ್ಬಿ ಬಲೆಗೆ ಬಿದ್ದಿದ್ದರು. ಇತ್ತ ಬಲವಾದ ಮನವಿ ಸಲ್ಲಿಸಿದರೂ, ಅಂಪೈರ್ ನಾಟೌಟ್ ತೀರ್ಪು ನೀಡಿದ್ದರು. ಬಳಿಕ ಡಿಆರ್ಎಸ್ ತೆಗೆದುಕೊಳ್ಳುವ ಅವಕಾಶವಿತ್ತು. ಆದರೆ ನಟರಾಜನ್ ಹಾಗೂ ವಿಕೆಟ್ ಕೀಪರ್ ಕೆಎಲ್ ರಾಹುಲ್ ಅವರ ಸೂಚನೆಯಂತೆ ಡಿಆರ್ಎಸ್ ಪಡೆಯುವಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಡ ಮಾಡಿಬಿಟ್ಟರು.
ಆನ್ಫೀಲ್ಡ್ ಅಂಪೈರ್ ಮೂರನೇ ಅಂಪೈರ್ಗೆ ಡಿಆರ್ಎಸ್ ಸೂಚನೆ ನೀಡಿದ್ದರು. ಅತ್ತ ಮೂರನೇ ಅಂಪೈರ್ ಪರಿಶೀಲಿಸಿದಾಗ ವೇಡ್ ಎಲ್ಬಿಡಬ್ಲ್ಯೂ ಆಗಿರುವುದು ಕಂಡು ಬಂತು. ಆದರೆ ವಿರಾಟ್ ಕೊಹ್ಲಿ 15 ಸೆಕೆಂಡ್ಗಳ ಸಮಯವಕಾಶದಲ್ಲಿ ಡಿಆರ್ಎಸ್ ತೆಗೆದುಕೊಳ್ಳದ ಕಾರಣ ಔಟ್ ನೀಡಲು ಅಂಪೈರ್ ನಿರಾಕರಿಸಿದರು.
ವಿರಾಟ್ ಕೊಹ್ಲಿ ಮಾಡಿದ ಸಣ್ಣ ವಿಳಂಬದಿಂದ ವೇಡ್ಗೆ ಜೀವದಾನ ಲಭಿಸಿತು. ಈ ಹಂತದಲ್ಲಿ35 ಎಸೆತಗಳಲ್ಲಿ 50 ರನ್ ಗಳಿಸಿದ್ದ ವೇಡ್ ಸಿಕ್ಕ ಅವಕಾಶವನ್ನು ಬಳಸಿಕೊಂಡರು. 19ನೇ ಓವರ್ವರೆಗೂ ತಮ್ಮ ಇನಿಂಗ್ಸ್ ಮುಂದುವರೆಸಿ 80 ರನ್ ಬಾರಿಸಿದ್ದರು. ವೇಡ್ ಅವರ ಬಿರುಸಿನ ಆಟದ ಪರಿಣಾಮ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 186 ರನ್ಗಳಿಸುವಂತಾಯಿತು. ಇತ್ತ ಕಠಿಣ ಗುರಿ ಬೆನ್ನಟ್ಟಿದ ಭಾರತ ಅಂತಿಮವಾಗಿ 174 ರನ್ಗಳಿಸಿ 12 ರನ್ಗಳ ಸೋಲನುಭವಿಸಿತು.
ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್ಮನ್ ಮೇಲೆ ಕಣ್ಣಿಟ್ಟಿದೆ RCB..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ