HOME » NEWS » Sports » CRICKET VIRAT KOHLI LOST HIS PATIENCE IN A PRESS MEET AND WARNED NEW ZEALAND JOURNALIST REPORTERS VB

Virat Kohli Video: ಸುದ್ದಿಗೋಷ್ಠಿಯಲ್ಲಿ ವಿರಾಟ್​ ಕೊಹ್ಲಿ ಮತ್ತು ನ್ಯೂಜಿಲೆಂಡ್ ಪತ್ರಕರ್ತರ ನಡುವೆ ಗಲಾಟೆ

Virat Kohli In A Pressmeet: ನ್ಯೂಜಿಲೆಂಡ್ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಕೊಹ್ಲಿ ಅವರ ವಿರುದ್ಧವೇ ಹರಿಹಾಯ್ದರು. ವರದಿಗಾರ ಕೇಳಿದ ಪ್ರಶ್ನೆಗೆ ಕೊಹ್ಲಿ ನೀಡಿದ ಉತ್ತರ ಇಲ್ಲಿದೆ.

Vinay Bhat | news18-kannada
Updated:March 2, 2020, 12:52 PM IST
Virat Kohli Video: ಸುದ್ದಿಗೋಷ್ಠಿಯಲ್ಲಿ ವಿರಾಟ್​ ಕೊಹ್ಲಿ ಮತ್ತು ನ್ಯೂಜಿಲೆಂಡ್ ಪತ್ರಕರ್ತರ ನಡುವೆ ಗಲಾಟೆ
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ
  • Share this:
ಕ್ರೈಸ್ಟ್​ ಚರ್ಚ್​ (ಮಾ 02): ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಎರಡೂ ಟೆಸ್ಟ್​ ಪಂದ್ಯದಲ್ಲಿ ಸೋಲನುಭವಿಸುವ ಜೊತೆಗೆ, ತನ್ನ ಆಕ್ರಮಣಕಾರಿ ನಡವಳಿಕೆಯಿಂದ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ​ಅದರಲ್ಲೂ ನಾಯಕ ವಿರಾಟ್ ಕೊಹ್ಲಿ ವರ್ತನೆ ಇದೀಗ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಪಂದ್ಯ ಮುಗಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲೂ ನ್ಯೂಜಿಲೆಂಡ್ ಪತ್ರಕರ್ತರ ವಿರುದ್ಧ ಕಿಂಗ್ ಕೊಹ್ಲಿ ಗರಂ ಆದ ಘಟನೆ ನಡೆದಿದೆ.

ಹೀನಾಯ ಸೋಲಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಲು ಆರಂಭಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟೆಸ್ಟ್​ ಸರಣಿ ಸೋಲಿಗೆ ಯಾವುದೇ ನೆಪ ಹೇಳಲು ಬಯಸುವುದಿಲ್ಲ ಎಂದರು.

Virat Kohli lost his patience in a press meet and warned New Zealand journalist reporters
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ


"ಈ ಸೋಲನ್ನು ಒಪ್ಪಿಕೊಂಡು ತಪ್ಪನ್ನು ತಿದ್ದಿಕೊಳ್ಳುತ್ತೇವೆ. ನ್ಯೂಜಿಲೆಂಡ್ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿದರು. ದೀರ್ಘಾವಧಿಯ ವರೆಗೆ ನಿಖರವಾಗಿ ದಾಳಿ ನಡೆಸಿದರು. ನಾವು ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಎಡವಿದೆವು" ಎಂಬುವುದು ಕೊಹ್ಲಿ ಮಾತಾಗಿತ್ತು.

ಇನ್ನು ಇದೇವೇಳೆ ನ್ಯೂಜಿಲೆಂಡ್ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಕೊಹ್ಲಿ ಅವರ ವಿರುದ್ಧವೇ ಹರಿಹಾಯ್ದರು. ನ್ಯೂಜಿಲೆಂಡ್​ ಬ್ಯಾಟ್ಸ್​ಮನ್​ಗಳ ವಿಕೆಟ್ ಪಡೆದ ವೇಳೆ ಫೀಲ್ಡ್​ನಲ್ಲಿ ಕೊಹ್ಲಿ ಅಕ್ರಮಣಕಾರಿಯಾಗಿ ಸಂಭ್ರಮಾಚರಣೆ ಮಾಡಿದ ಬಗ್ಗೆ ವರದಿಗಾರ ಕೇಳಿದ ಪ್ರಶ್ನೆಗೆ ಕೊಹ್ಲಿ ಅಷ್ಟೇ ಗರಂ ಆಗಿ ಉತ್ತರ ನೀಡಿದ್ದಾರೆ.

 ಆ ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತು ನ್ಯೂಜಿಲೆಂಡ್ ಪತ್ರಕರ್ತರ ನಡುವಿನ ಸಂಭಾಷಣೆಯ ವಿಡಿಯೋ ತುಣುಕು ಇಲ್ಲಿದೆ.Untitled from Cricket Fan on Vimeo.

ವರದಿಗಾರ: ವಿಲಿಯಮ್ಸನ್ ಔಟ್ ಆದಾಗ ನೀವು ಪ್ರೇಕ್ಷಕರತ್ತ ತಿರುಗಿ ಕೂಗಿದಿರಿ. ಆ ಬಗ್ಗೆ ನಿಮ್ಮ ಅಭಿಪ್ರಾಯವೇನು? ನೀವು ಭಾರತ ತಂಡದ ನಾಯಕರಾಗಿ ಮೈದಾನದಲ್ಲಿ ಮಾದರಿಯಾಗಬೇಕಲ್ಲವೆ?

ವಿರಾಟ್ ಕೊಹ್ಲಿ: ಆ ಬಗ್ಗೆ ನಿಮ್ಮ ಅಭಿಪ್ರಾಯವೇನು?

ವರದಿಗಾರ: ನಾನು ನಿಮಗೆ ಪ್ರಶ್ನೆ ಕೇಳುತ್ತಿದ್ದೇನೆ.

ವಿರಾಟ್ ಕೊಹ್ಲಿ: ನಾನು ನಿಮ್ಮ ಬಳಿ ಉತ್ತರವನ್ನು ಕೇಳುತ್ತಿದ್ದೇನೆ.

ವರದಿಗಾರ: ನೀವು ಇನ್ನೂ ಉತ್ತಮ ಮಾದರಿಯಾಗಬಹುದು.

ವಿರಾಟ್ ಕೊಹ್ಲಿ: ಮೈದಾನದಲ್ಲಿ ಏನಾಗಿದೆ ಎನ್ನುವ ಬಗ್ಗೆ ನೀವು ಸರಿಯಾಗಿ ತಿಳಿದುಕೊಳ್ಳಿ ಆನಂತ ಪತ್ರಿಕಾಗೋಷ್ಠಿಗೆ ಆಗಮಿಸಿ ಇನ್ನೂ ಉತ್ತಮ ಪ್ರಶ್ನೆಯನ್ನು ಕೇಳಿ. ಅರ್ಧ ಮಾಹಿತಿ ಪಡೆದು, ಅರ್ಧ ಪ್ರಶ್ನೆಗಳ ಜೊತೆ ನೀವು ಇಲ್ಲಿ ಬಂದು ಮಾತನಾಡುವುದು ಸರಿಯಲ್ಲ. ನಿಮಗೆ ವಿವಾದ ಸೃಷ್ಟಿಸಬೇಕು ಎನ್ನುವ ಉದ್ದೇಶವಿದ್ದರೆ ಇದು ಸರಿಯಾದ ಜಾಗವಲ್ಲ. ನಾನು ಈ ಬಗ್ಗೆ ಪಂದ್ಯದ ರೆಫ್ರಿ ಜೊತೆ ಮಾತನಾಡಿದ್ದೇನೆ. ಅವರು ಈ ಬಗ್ಗೆ ಯಾವುದೇ ಅಪಸ್ವರ ಎತ್ತಿಲ್ಲ. ಧನ್ಯವಾದಗಳು!.

 

First published: March 2, 2020, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories