India vs Australia: ವಿರಾಟ್ ಕೊಹ್ಲಿ ಟಾಸ್ ಗೆದ್ದರೆ, ಭಾರತ ಸೋಲಲ್ಲ: ಹೀಗೊಂದು ಲೆಕ್ಕಾಚಾರ

ಕೊಹ್ಲಿ ಬೆನ್ನಲ್ಲೇ ರಹಾನೆ (42) ಯನ್ನು ಎಲ್​ಬಿ ಬಲೆಗೆ ಕೆಡವಿದ ಮಿಚೆಲ್ ಸ್ಟಾರ್ಕ್​ ಆಸ್ಟ್ರೇಲಿಯಾಗೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಅಷ್ಟರಲ್ಲಾಗಲೇ 200ರ ಗಡಿದಾಟುವ ಮುನ್ನವೇ ಟೀಮ್ ಇಂಡಿಯಾದ ಐದು ಪ್ರಮುಖ ವಿಕೆಟ್ ಕಳೆದುಕೊಂಡಿತು.

virat kohli

virat kohli

  • Share this:
    ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿ ಅಡಿಲೇಡ್​ನಲ್ಲಿ ಶುರುವಾಗಿದೆ. ಮೊದಲ ಪಂದ್ಯವು ಅಹರ್ನಿಶಿಯಾಗಿರುವುದರಿಂದ ಟಾಸ್​ ಪ್ರಕ್ರಿಯೆ ಮಹತ್ವ ಪಡೆದುಕೊಂಡಿತ್ತು. ಅದರಂತೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆಲ್ಲುವ ಮೂಲಕ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ನಾಯಕ ನಿರೀಕ್ಷೆಯನ್ನು ಹುಸಿಗೊಳಿಸುವಂತೆ ಮೊದಲ ಓವರ್​ನ 2ನೇ ಎಸೆತದಲ್ಲೇ ಪೃಥ್ವಿ ಶಾ ಗೋಲ್ಡನ್ ಡಕ್​ನೊಂದಿಗೆ ಮರಳಿದ್ದರು. ಇದರ ಬೆನ್ನಲ್ಲೇ 17 ರನ್​ಗಳಿಸಿ ಮಯಾಂಕ್ ಅಗರ್ವಾಲ್ ಕೂಡ ಪೆವಿಲಿಯನ್ ಕಡೆ ಮುಖ ಮಾಡಿದರು. ಈ ಹಂತದಲ್ಲಿ ಜೊತೆಗೂಡಿದ ಚೇತೇಶ್ವರ್ ಪೂಜಾರ ಹಾಗೂ ನಾಯಕ ಕೊಹ್ಲಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ತಂಡದ ಮೊತ್ತ 100 ಆಗಿದ್ದ ವೇಳೆ ಪೂಜಾರ(43) ಲಿಯಾನ್​ಗೆ ವಿಕೆಟ್ ಒಪ್ಪಿಸಿದರು.

    ಬಳಿಕ ಕ್ರೀಸ್​ಗೆ ಇಳಿದ ಉಪನಾಯಕ ಅಜಿಂಕ್ಯ ರಹಾನೆ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ಅಲ್ಲದೆ 4ನೇ ವಿಕೆಟ್​ಗೆ 88 ರನ್​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ರನೌಟ್ ಆಗುವ ಮೂಲಕ ವಿರಾಟ್ ಕೊಹ್ಲಿ ಶತಕ ಬಾರಿಸುವ ಅವಕಾಶವನ್ನು ತಪ್ಪಿಸಿಕೊಂಡರು. 180 ಎಸೆತಗಳನ್ನು ಎದುರಿಸಿದ ಕೊಹ್ಲಿ 8 ಬೌಂಡರಿಗಳೊಂದಿಗೆ 74 ರನ್​ಗಳೊಂದಿಗೆ ಪೆವಿಲಿಯನ್ ಕಡೆ ಮುಖ ಮಾಡಿದರು.

    ಕೊಹ್ಲಿ ಬೆನ್ನಲ್ಲೇ ರಹಾನೆ (42) ಯನ್ನು ಎಲ್​ಬಿ ಬಲೆಗೆ ಕೆಡವಿದ ಮಿಚೆಲ್ ಸ್ಟಾರ್ಕ್​ ಆಸ್ಟ್ರೇಲಿಯಾಗೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಅಷ್ಟರಲ್ಲಾಗಲೇ 200ರ ಗಡಿದಾಟುವ ಮುನ್ನವೇ ಟೀಮ್ ಇಂಡಿಯಾದ ಐದು ಪ್ರಮುಖ ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಈ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲಲಿದೆ ಎಂಬ ಆತ್ಮ ವಿಶ್ವಾಸದಲ್ಲಿದ್ದಾರೆ ಟೀಮ್ ಇಂಡಿಯಾ ಅಭಿಮಾನಿಗಳು. ಇದಕ್ಕೊಂದು ಕಾರಣ ಕೂಡ ಇದೆ.

    ಹೌದು, ವಿರಾಟ್ ಕೊಹ್ಲಿ ನಾಯಕನಾಗಿ ಟಾಸ್ ಗೆದ್ದ ಪಂದ್ಯಗಳಲ್ಲಿ ಭಾರತ ಇದುವರೆಗೂ ಸೋಲು ಕಂಡಿಲ್ಲ. ಅಂದರೆ ಕೊಹ್ಲಿ ಮುಂದಾಳತ್ವದಲ್ಲಿ ಭಾರತ 26 ಟೆಸ್ಟ್​ ಪಂದ್ಯಗಳಲ್ಲಿ ಟಾಸ್ ಗೆದ್ದಿದೆ. ಅದರಲ್ಲಿ 21 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ. ಇನ್ನು ನಾಲ್ಕು ಪಂದ್ಯಗಳನ್ನು ಭಾರತ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

    ಇನ್ನು ವಿದೇಶಗಳಲ್ಲಿ ನಡೆದ 10 ಟೆಸ್ಟ್​ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಟಾಸ್ ಗೆದ್ದಿದ್ದಾರೆ. ಅದರಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹಾಗೆಯೇ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ನಲ್ಲೂ ಕೊಹ್ಲಿ ಟಾಸ್ ಗೆದ್ದಿದ್ದು, ಹೀಗಾಗಿ ಈ ಪಂದ್ಯವನ್ನೂ ಸಹ ಭಾರತ ಗೆಲ್ಲಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಅಭಿಮಾನಿಗಳು.
    Published by:zahir
    First published: