• Home
 • »
 • News
 • »
 • sports
 • »
 • India vs Pakistan: ಪಾಕ್ ವಿರುದ್ಧ ಗೆದ್ದ ಭಾರತ: ಅಶ್ವಿನ್ ಬುದ್ಧಿವಂತಿಕೆಗೆ ಸಲಾಂ ಎಂದ ವಿರಾಟ್ ಕೊಹ್ಲಿ!

India vs Pakistan: ಪಾಕ್ ವಿರುದ್ಧ ಗೆದ್ದ ಭಾರತ: ಅಶ್ವಿನ್ ಬುದ್ಧಿವಂತಿಕೆಗೆ ಸಲಾಂ ಎಂದ ವಿರಾಟ್ ಕೊಹ್ಲಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

team India: ಪಂದ್ಯದ ನಂತರ, ಕೊನೆಯ ಎರಡು ಬಾಲ್‌ಗಳಲ್ಲಿ ಅಶ್ವಿನ್ ಅವರ ಶೌರ್ಯವನ್ನು ವಿರಾಟ್ ಕೊಂಡಾಡಿದ್ದಾರೆ. ಅಶ್ವಿನ್ ಕೊನೆಯ ಎರಡು ಬಾಲ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂದು ಮುಕ್ತಕಂಠದಿಂದ ಕೊಹ್ಲಿ ಹೊಗಳಿದ್ದಾರೆ.

 • Share this:

  ಭಾನುವಾರ ಮೆಲ್ಬೋರ್ನ್ (Malborne) ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಪಾಕಿಸ್ತಾನ (India Vs Pakistan) ಪಂದ್ಯಾಟ ಅತ್ಯಂತ ರೋಮಾಂಚಕಾರಿಯಾಗಿತ್ತು ಹಾಗೂ ಭಾರತ ತಂಡದ ಅತ್ಯದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾತ್ತು. ಇಂಡಿಯಾ ಇಂಡಿಯಾ ಎಂಬ ಧ್ವನಿಯೇ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ಪ್ರತಿಧ್ವನಿಸುತ್ತಿತ್ತು ಹಾಗೂ ಅಭಿಮಾನಿಗಳ ಈ ಹರ್ಷೋದ್ಗಾರ ಭಾರತೀಯ ಕ್ರಿಕೆಟ್ (Team India) ಆಟಗಾರರ ಕಣ್ಣಂಚು ಒದ್ದೆಯಾಗುವಂತೆ ಮಾಡಿದ್ದು ಸುಳ್ಳಲ್ಲ.


  ಭಾರತ ಪಾಕ್ ಗೆಲ್ಲುವುದಕ್ಕೆ ಕಾರಣ ವಿರಾಟ್ ಕೋಹ್ಲಿ


  2022 ರ T20 ವಿಶ್ವ ಕಪ್‌ನಲ್ಲಿ ಪ್ರತಿಸ್ಪರ್ಧಿ ಪಾಕ್‌ ಅನ್ನು 4 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಭಾರತ ಪಾಕ್‌ನ ಸೆಣಸಾಟದಲ್ಲಿ ಭಾರತ ಗೆಲ್ಲುವುದಕ್ಕೆ ಕಾರಣವಾಗಿರುವ ಪ್ರಮುಖ ಆಟಗಾರ ವಿರಾಟ್  ಕೊಹ್ಲಿ. ಆರಂಭದಿಂದಲೇ ಮೈದಾನದಲ್ಲಿ ಹೋರಾಟ ನಡೆಸಿದ್ದ ಕೋಹ್ಲಿ, ಹಾರ್ದಿಕ್ ಪಾಂಡ್ಯ ಅವರ ಜೊತೆಗೂಡಿ ಪಂದ್ಯ-ವಿಜೇತ ಪಾಲುದಾರಿಕೆಯನ್ನು ನಿರ್ಮಿಸಿದರು. ಆದರೆ ಪಂದ್ಯದ ನಂತರ, ಕೊನೆಯ ಎರಡು ಬಾಲ್‌ಗಳಲ್ಲಿ ಅಶ್ವಿನ್ ಅವರ ಶೌರ್ಯವನ್ನು ವಿರಾಟ್ ಕೊಂಡಾಡಿದ್ದಾರೆ. ಅಶ್ವಿನ್ ಕೊನೆಯ ಎರಡು ಬಾಲ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂದು ಮುಕ್ತಕಂಠದಿಂದ ಕೊಹ್ಲಿ ಹೊಗಳಿದ್ದಾರೆ.


  ಇದನ್ನೂ ಓದಿ: ಹಾರ್ದಿಕ್ ಅಬ್ಬರಕ್ಕೆ ಪತರುಗುಟ್ಟಿದ ಪಾಕ್, ಅಪರೂಪದ ದಾಖಲೆ ಮಾಡಿದ ಏಕೈಕ ಭಾರತೀಯ ಪಾಂಡ್ಯ!


  ವಿರಾಟ್ ಅಶ್ವಿನ್ ಅನ್ನು ಹೊಗಳಿದ್ದು ಯಾವ ಕಾರಣಕ್ಕೆ?


  ಒಂದು ಎಸೆತ ಬಾಕಿ ಇರುವಾಗಲೇ ದಿನೇಶ್ ಕಾರ್ತಿಕ್ ಔಟ್‌ ಆಗಿದ್ದು ಪಾಕ್‌ಗೆ ಗೆಲುವಿನ ಹಾದಿ ತೆರೆದುಕೊಂಡಿದೆಯೇ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಮೊಹಮ್ಮದ್ ನವಾಜ್ ಕೊನೆಯ ಓವರ್‌ನಲ್ಲಿ ಕಾರ್ತಿಕ್ ಅವರನ್ನು ಔಟ್ ಮಾಡಲು ಹೆಚ್ಚು ಒತ್ತಡ ಹಾಕಿಯೇ ಚೆಂಡನ್ನು ಛೂ ಬಿಟ್ಟಿದ್ದರು. ಹೆಚ್ಚು ಒತ್ತಡದಲ್ಲಿದ್ದ ಪಂದ್ಯಾಟದಲ್ಲಿ ಹೊಸ ಬ್ಯಾಟರ್‌ಗೆ ಬ್ಯಾಟು ಬೀಸಲು ಹಾಗೂ ಪಂದ್ಯದ ವೇಗ ಅರಿತುಕೊಳ್ಳಲು ಹೆಚ್ಚಿನ ಸಮಯ ಬೇಕಿತ್ತು. ಆದರೆ ದಿನೇಶ್ ಕಾರ್ತಿಕ್ ಔಟ್ ಆದ ನಂತರ ಬ್ಯಾಟಿಂಗ್ ಜವಬ್ದಾರಿ ಹೊಣೆಹೊತ್ತ ಅಶ್ವಿನ್ ತುಂಬಾ ಶಾಂತಚಿತ್ತರಾಗಿದ್ದರು. ನವಾಜ್ ಅವರ ಚೆಂಡನ್ನು ಚುರುಕಾಗಿ ಎದುರಿಸಿದರು. ಗೆರೆ ದಾಟಿದ ಕಾರಣ ನವಾಜ್ ಎಸೆದ ಚೆಂಡು ಭಾರತಕ್ಕೆ ವೈಡ್ ಬಾಲ್‌ನ ಅಂಕವನ್ನು ತಂದುಕೊಟ್ಟಿತು. ಚೆಂಡನ್ನು ಬೌಂಡರಿಗೆ ಅಟ್ಟುವ ಒಂದೇ ಉದ್ದೇಶದಿಂದ ಅಶ್ವಿನ್ ಶಾಂತರಾಗಿ ಬ್ಯಾಟ್ ಬೀಸಿದರು.


  ಅಶ್ವಿನ್ ಪ್ರದರ್ಶನ ಅಸಾಧಾರಣ; ಕೊಹ್ಲಿ ಗುಣಗಾನ


  ಪಂದ್ಯದ ನಂತರ ಕೊಹ್ಲಿ ಅಶ್ವಿನ್ ಕೆಚ್ಚೆದೆಯ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಅಶ್ವಿನ್ ಪಂದ್ಯದಲ್ಲಿ ಮೆರೆದ ಅಸಾಧಾರಣ ಬುದ್ಧಿವಂತಿಕೆಗೆ ಬೆರಗಾಗಿದ್ದೇನೆ ಎಂದು ಕೊಹ್ಲಿ ತಿಳಿಸಿದ್ದಾರೆ. ನಿಮಗೆ 15 ಅಥವಾ 16 ರನ್ ರೇಟ್ ಬೇಕಾದಾಗ ಎರಡು ಬಾಲ್‌ಗಳಲ್ಲಿ ಎರಡು ರನ್ ದೊರೆಯುತ್ತದೆ ಹಾಗಿದ್ದಾಗ ಜನರು ಪಂದ್ಯ ಮುಕ್ತಾಯಗೊಂಡಿತು ಇನ್ನೇನು ಮಾಡುವ ಅಗತ್ಯವಿಲ್ಲ ಎಂದೇ ಭಾವಿಸುತ್ತಾರೆ. ಇದೇ ಸಮಯದಲ್ಲಿ ದಿನೇಶ್ ಕಾರ್ತಿಕ್ ಔಟಾದರು. ಆಗ ನಾನು ಅಶ್ವಿನ್‌ಗೆ ಓವರ್ ನೀಡಲು ಹೇಳಿದ್ದೆ ಆದರೆ ಅವರು ಹೆಚ್ಚಿನ ಬುದ್ಧಿವಂತಿಕೆಯನ್ನು ತೋರಿಸಿದರು. ಲೈನ್‌ನ ಒಳಗೆ ಬಂದು ವೈಡ್ ಬಾಲ್‌ ನೀಡಿದರು. ಇದೇ ಅಂತರದಲ್ಲಿ ಬಾಲ್ ಅನ್ನು ಪಡೆದಾಗ ನಾವು ಪಂದ್ಯವನ್ನು ಗೆಲ್ಲುತ್ತೇವೆ ಎಂಬುದು ಶತಸಿದ್ಧವಾಗಿತ್ತು ಎಂದು ವಿರಾಟ್ ತಿಳಿಸಿದರು.


  ಭಾರತ ಸೆಣಸಾಡಲಿರುವ ಪಂದ್ಯಗಳು


  ಹಾರ್ದಿಕ್ ಹಾಗೂ ಕೊಹ್ಲಿಯವರ ಸಮಯೋಚಿತ ಆಟದಿಂದ ಭಾರತ ಪಾಕ್ ಅನ್ನು ಸೋಲಿಸಿದ್ದು, ಅಶ್ವಿನ್ ಅವರ ಚುರುಕಾದ ಬುದ್ಧಿವಂತಿಕೆಯಿಂದ ನಾವು ಪಂದ್ಯವನ್ನು ನಿರಾಯಾಸವಾಗಿ ಗೆದ್ದೆವು ಎಂಬುದು ವಿರಾಟ್ ಮಾತಾಗಿದೆ. ನಾವು ಗೆದ್ದಿರುವುದು ಬರಿಯ ಪಂದ್ಯವನ್ನಲ್ಲ ಭಾರತದ ಗೌರವ, ಕೀರ್ತಿಯನ್ನಾಗಿದೆ ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: ವಿರಾಟ್​ ವಿಶ್ವರೂಪಕ್ಕೆ ಫ್ಯಾನ್ಸ್​ ಫಿದಾ, ಕೊಹ್ಲಿ ಆಟಕ್ಕೆ ಮನಸೋತ ಜೂನಿಯರ್​ ಎನ್​ಟಿಆರ್!


  ಭಾರತ ತನ್ನ ಎರಡನೇ ಗ್ರೂಪ್ 2 ಪಂದ್ಯದಲ್ಲಿ ಅಕ್ಟೋಬರ್ 27 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದ್ದು ಮೂರು ದಿನಗಳ ನಂತರ ಅಕ್ಟೋಬರ್ 30 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.

  Published by:Precilla Olivia Dias
  First published: