ಭಾರತ-ಇಂಗ್ಲೆಂಡ್ ನಡುವಣ ಟಿ20 ಸರಣಿಯು ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿತ್ತು. ಅದರಲ್ಲೂ ಫೈನಲ್ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಗಿತ್ತು. ಟಿ20 ಕ್ರಿಕೆಟ್ ಅಂಗಳದ ಅಗ್ರ ಎರಡು ತಂಡಗಳ ನಡುವಿನ ಕಾದಾಟದಲ್ಲಿ ಅಂತಿಮವಾಗಿ ಟೀಮ್ ಇಂಡಿಯಾ ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತು.
ಈ ರೋಚಕ ಕಾದಾಟವು ಆಟಗಾರರ ನಡುವಣ ವಾಕ್ಸಮರಕ್ಕೂ ಸಾಕ್ಷಿಯಾಗಿತ್ತು. ಅದು ಕೂಡ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ನಡುವೆ.
ಹೌದು, ಫೈನಲ್ ಪಂದ್ಯದಲ್ಲಿ ಜೋಸ್ ಬಟ್ಲರ್ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ್ದರು. ಆದರೆ ಬೌಂಡರಿ ಲೈನ್ನಲ್ಲಿದ್ದ ಹಾರ್ದಿಕ್ ಪಾಂಡ್ಯ ಕ್ಯಾಚ್ ಹಿಡಿಯುವ ಮೂಲಕ ಬಟ್ಲರ್ ಆರ್ಭಟವನ್ನು ಅಂತ್ಯಗೊಳಿಸಿದ್ದರು.
ವಿಕೆಟ್ ಒಪ್ಪಿಸಿ ಹೊರ ನಡೆಯುತ್ತಿದ್ದ ಜೋಸ್ ಬಟ್ಲರ್ ಇತ್ತ ಅದೇನೋ ಗುನುಗಿದರು. ಇದನ್ನು ಗಮನಿಸಿದ ವಿರಾಟ್ ಕೊಹ್ಲಿ ಸಂಭ್ರಮವನ್ನು ಬಿಟ್ಟು ಇಂಗ್ಲೆಂಡ್ ಆಟಗಾರನನ್ನು ಪ್ರಶ್ನಿಸಲು ಬಂದರು. ಈ ವೇಳೆ ಬಟ್ಲರ್ ಸಹ ಪ್ರತ್ಯುತ್ತರ ನೀಡಲು ಮುಂದಾದರು. ಇದರಿಂದ ಕೆಲ ಹೊತ್ತು ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.
— Aditya Das (@lodulalit001) March 20, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ