Virat Kohli: ತನ್ನ ಹೆಂಡತಿಯ ಸ್ಫೂರ್ತಿದಾಯಕ ಕಥೆಯನ್ನು ಹೇಗೆ ಹೇಳಿದ್ದಾರೆ ನೋಡಿ ವಿರಾಟ್ ಕೊಹ್ಲಿ..

virushka: ಇತ್ತೀಚೆಗೆ ನೀಡಿದ ಜಾಹೀರಾತಿನ ವಿಡಿಯೋ ತುಣುಕುಗಳನ್ನು ಅನುಷ್ಕಾ ಮತ್ತು ವಿರಾಟ್ ಇಬ್ಬರೂ ಸಾಮಾಜಿಕ ಮಾಧ್ಯಮಗಳಲ್ಲಿರುವ ತಮ್ಮ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Anushka Sharma- Virat Kohli

Anushka Sharma- Virat Kohli

 • Share this:
  Virat Kohli-Anushka Sharma: ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಬ್ಬರೂ ತುಂಬಾ ಸುದ್ದಿಯಲ್ಲಿರುವ ಸ್ಟಾರ್ ದಂಪತಿ ಎಂದು ಹೇಳಬಹುದು. ಸಾಮಾಜಿಕ ಮಾಧ್ಯಮಗಳಿಂದ ಹಿಡಿದು ಟಿವಿಯಲ್ಲಿ ಬರುವ ಜಾಹೀರಾತಿನವರೆಗೂ ಇಬ್ಬರು ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ.

  ಇತ್ತೀಚೆಗೆ ವಿರಾಟ್ ಕೊಹ್ಲಿ ತಮ್ಮ ಹೆಂಡತಿ ಅನುಷ್ಕಾ ಅವರ ಸ್ಪೂರ್ತಿದಾಯಕ ಕಥೆಯನ್ನು ಸೊಗಸಾಗಿ ಹೇಳಿದ್ದಾರೆ ಎಂದರೆ ನೀವು ಅದನ್ನು ನೋಡಲು ಖಂಡಿತ ಕಾತುರರಾಗಿರುತ್ತಿರಿ. ಹೌದು.. ಪ್ರಮುಖ ಮೊಬೈಲ್ ಬ್ರ್ಯಾಂಡ್‌ಗಾಗಿ ಜಾಹೀರಾತೊಂದರಲ್ಲಿ ಈ ದಂಪತಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ.

  ಇತ್ತೀಚೆಗೆ ನೀಡಿದ ಜಾಹೀರಾತಿನ ವಿಡಿಯೋ ತುಣುಕುಗಳನ್ನು ಅನುಷ್ಕಾ ಮತ್ತು ವಿರಾಟ್ ಇಬ್ಬರೂ ಸಾಮಾಜಿಕ ಮಾಧ್ಯಮಗಳಲ್ಲಿರುವ ತಮ್ಮ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ವಿರಾಟ್ ಹಂಚಿಕೊಂಡ ವಿಡಿಯೋ ತುಣುಕಿನಲ್ಲಿ ತನ್ನ ಪ್ರೀತಿಯ ಹೆಂಡತಿಯ ಅನೇಕ ಮನಸ್ಥಿತಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು, ಭಾವಚಿತ್ರಗಳನ್ನು ಒಂದು ಸರಣಿಯಲ್ಲಿ ಜೋಡಿಸಿ ತನ್ನ ಅರ್ಧಾಂಗಿಯ ಸ್ಪೂರ್ತಿದಾಯಕ ಕಥೆ ಹೇಳುವುದನ್ನು ನಾವು ಇದರಲ್ಲಿ ನೋಡಬಹುದು. ತನ್ನ ಪತಿಗಾಗಿ ಪ್ರೇರಣೆಯಾಗಿ ಬದಲಾದ ಅನುಷ್ಕಾ ತುಂಬಾ ಸಂತೋಷವಾಗಿದ್ದು, ವಿರಾಟ್ ತನ್ನ ಛಾಯಾಚಿತ್ರಗಳನ್ನು ಕ್ಲಿಕ್ಕಿಸುವಾಗ ಸ್ಪಷ್ಟವಾಗಿ ತನ್ನ ಭಾವನೆಯನ್ನು ಮುಖದಲ್ಲಿ ತೋರಿಸಿರುವುದನ್ನು ಕಾಣಬಹುದಾಗಿದೆ. ವಿಡಿಯೋ ತುಣುಕಿನಲ್ಲಿ ಅನುಷ್ಕಾ ಶ್ರೇಷ್ಠ ತಾಯಿ ಮತ್ತು ಹೆಂಡತಿ ಎಂದು ವಿರಾಟ್ ಹೇಳಿರುವುದನ್ನು ಕೇಳಬಹುದಾಗಿದೆ.

  "ತುಂಬಾನೇ ನಿಸ್ವಾರ್ಥವಾಗಿ, ಇತರರಿಗೆ ಒಳ್ಳೆಯದನ್ನು ಮಾಡುವ ಮತ್ತು ಯೋಚಿಸುವ ಈ ಸ್ಟಾರ್ ನಟಿ ಇಷ್ಟೊಂದು ಯಶಸ್ಸು ಕಂಡ ನಂತರವೂ ತುಂಬಾನೇ ವಿನಮ್ರಳಾಗಿದ್ದಾಳೆ. ಅವಳು ನನಗೆ ಸ್ಫೂರ್ತಿ ಮತ್ತು ನಾನು ಹಲವು ವರ್ಷಗಳ ಹಿಂದೆ ಭೇಟಿಯಾದಾಗಿನಿಂದ ಇಲ್ಲಿಯವರೆಗೂ ಅನುಷ್ಕಾರಲ್ಲಿ ಯಾವುದೇ ವ್ಯತ್ಯಾಸ ನನಗೆ ಕಾಣಿಸಿಲ್ಲ" ಎಂದು ವಿರಾಟ್ ವಿಡಿಯೋದಲ್ಲಿ ಹೇಳಿದ್ದಾರೆ. ವಿರಾಟ್ ಹಂಚಿಕೊಂಡ ಈ ವಿಡಿಯೋವನ್ನು ಸುಮಾರು 8 ಲಕ್ಷ ಜನ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಇಷ್ಟಪಟ್ಟಿದ್ದಾರೆ.

  ತನ್ನ ಪತಿಗಾಗಿ ಛಾಯಾಗ್ರಾಹಕರಾಗಿ ಅದೇ ಮೊಬೈಲ್ ಬ್ರ್ಯಾಂಡ್ ಜಾಹೀರಾತಿನಲ್ಲಿ ನಟಿ ನಿಜವಾದ ವಿರಾಟ್ ಮತ್ತು ಅವರ ಕಠಿಣ ಪರಿಶ್ರಮದ ಬಗ್ಗೆ ಮಾತನಾಡಿದರು.


  View this post on Instagram


  A post shared by Virat Kohli (@virat.kohli)


  ಸಣ್ಣ ಜಾಹೀರಾತಿನಲ್ಲಿ ಮಾತನಾಡಿದ ಅವರು, "ಜನರು ಯಾವಾಗಲೂ ಕ್ರಿಕೆಟ್ ಆಟದ ಮೈದಾನದಲ್ಲಿರುವ ವಿರಾಟ್ ಕೊಹ್ಲಿಯನ್ನು ನೋಡುತ್ತಾರೆ. ನಾನು ಪ್ರತಿದಿನ ನೋಡುವ ವಿರಾಟ್ ತುಂಬಾ ವಿಭಿನ್ನವಾಗಿದ್ದಾರೆ. ನನಗೆ ಮಾತ್ರ ತಿಳಿದಿರುವ ಆ ವಿರಾಟ್ ಉತ್ಸಾಹ ಮತ್ತು ಶಾಂತತೆಯ ಪರಿಪೂರ್ಣ ಸಮತೋಲನವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ. ಅವನು ತಮಾಷೆ ಮಾಡುತ್ತಾನೆ, ಕಾಳಜಿ ವಹಿಸುತ್ತಾನೆ. ಅವನ ಕಥೆಯಂತೆಯೇ ಅವನ ಉತ್ಸಾಹಕ್ಕೆ ಅನೇಕ ಪದರಗಳಿವೆ" ಎಂದು ಅನುಷ್ಕಾ ತನ್ನ ಪತಿಯ ಬಗ್ಗೆ ಹೇಳಿದ್ದಾರೆ. ಈ ವಿಡಿಯೋವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟ ಪಟ್ಟಿದ್ದಾರೆ.


  Read Also: Viral Story: ಗಂಡ ಅತ್ತೆಯೊಂದಿಗೆ ಓಡಿ ಹೋದರೆ ದಿಕ್ಕು ಕಾಣದೆ ಹೆಂಡತಿ ಮಾವನನ್ನೇ ಮದುವೆಯಾದಳು!

  ಈ ಇಬ್ಬರೂ ಮೊದಲ ಬಾರಿಗೆ ಪರಸ್ಪರ ಭೇಟಿಯಾದದ್ದು 2013ರಲ್ಲಿ ನಡೆದ ಒಂದು ಜಾಹೀರಾತು ಚಿತ್ರೀಕರಣದ ಸೆಟ್‌ನಲ್ಲಿ. ನಾಲ್ಕು ವರ್ಷಗಳ ನಂತರ, ಅನುಷ್ಕಾ ಮತ್ತು ವಿರಾಟ್ ಡಿಸೆಂಬರ್ 2017ರಲ್ಲಿ ಮದುವೆಯಾದರು.
  First published: