ಕೊಹ್ಲಿಯನ್ನು ಖ್ಯಾತ ಫುಟ್​ಬಾಲ್ ಆಟಗಾರನಿಗೆ ಹೋಲಿಸಿದ ಕ್ರಿಕೆಟ್​ ದಂತಕಥೆ

Virat Kohli: ಪಂದ್ಯಕ್ಕಾಗಿ ಕೊಹ್ಲಿಯ ಸಿದ್ಧತೆ ಮತ್ತು ಅದಕ್ಕಾಗಿರುವ ಬದ್ಧತೆ ನಿಜಕ್ಕೂ ವಿಶೇಷವಾಗಿ ಕಾಣುತ್ತದೆ. ಹೀಗಾಗಿ ಕೊಹ್ಲಿ ಅವರನ್ನು ಕ್ರಿಕೆಟ್​ನ ಕ್ರಿಸ್ಟಿಯಾನೊ ರೊನಾಲ್ಡೊ ಎಂದೇಳಬಹುದು ಎಂದು ಕ್ರಿಕೆಟ್ ದಂತಕಥೆ ಲಾರಾ ಗುಣಗಾನ ಮಾಡಿದರು.

zahir | news18-kannada
Updated:December 17, 2019, 11:20 AM IST
ಕೊಹ್ಲಿಯನ್ನು ಖ್ಯಾತ ಫುಟ್​ಬಾಲ್ ಆಟಗಾರನಿಗೆ ಹೋಲಿಸಿದ ಕ್ರಿಕೆಟ್​ ದಂತಕಥೆ
Ronaldo-kohli
  • Share this:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಹಾಡಿ ಹೊಗಳಿದ್ದಾರೆ. ಆಟದ ಬದ್ಧತೆ ವಿಷಯದಲ್ಲಿ ಕೊಹ್ಲಿ ಹಾಗೂ ವಿಶ್ವದ ಶ್ರೇಷ್ಠ ಫುಟ್​ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸರಿಸಮಾನರಾಗಿ ನಿಲ್ಲುತ್ತಾರೆ ಎಂದು ಲಾರಾ ಹೇಳಿದ್ದಾರೆ.

ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಲಾರಾ, ಪ್ರತಿಭೆಯಲ್ಲಿ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್​ಗೆ ಕೊಹ್ಲಿ ಸರಿ ಸಮಾನರು ಎನ್ನಬಹುದು. ಆದರೆ ಟೀಂ ಇಂಡಿಯಾ ನಾಯಕನಿಗೆ ಇರುವ ಆಟದ  ಬದ್ಧತೆ ಮತ್ತು ಪರಿಶ್ರಮ ಮಾತ್ರ ನಂಬಲಸಾಧ್ಯ. ಇದುವೇ ಕೊಹ್ಲಿ ಅವರನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಎಂದು ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ನೆಟ್​ವರ್ಕ್ ಇಲ್ಲದಿದ್ರೂ ಕರೆ ಮಾಡಬಹುದು: ಜಿಯೋದಿಂದ ಹೊಸ ಸೇವೆ

ಪಂದ್ಯಕ್ಕಾಗಿ ಕೊಹ್ಲಿಯ ಸಿದ್ಧತೆ ಮತ್ತು ಅದಕ್ಕಾಗಿರುವ ಬದ್ಧತೆ ನಿಜಕ್ಕೂ ವಿಶೇಷವಾಗಿ ಕಾಣುತ್ತದೆ. ಹೀಗಾಗಿ ಕೊಹ್ಲಿ ಅವರನ್ನು ಕ್ರಿಕೆಟ್​ನ ಕ್ರಿಸ್ಟಿಯಾನೊ ರೊನಾಲ್ಡೊ ಎಂದೇಳಬಹುದು ಎಂದು ಕ್ರಿಕೆಟ್ ದಂತಕಥೆ ಲಾರಾ ಗುಣಗಾನ ಮಾಡಿದರು.

ಇದನ್ನೂ ಓದಿ:- Bigg Boss Kannada 7: ಹೆಣ್ಮಕ್ಕಳ ಒಳ ಉಡುಪನ್ನು ಚಂದನ್ ಆಚಾರ್ ಬಾವುಟ ಮಾಡ್ಕೊಂಡ್ರಾ?

ಇನ್ನು ಕ್ರಿಕೆಟ್ ದಿಗ್ಗಜ ಗ್ಯಾರಿ ಸೋಬರ್ಸ್​ಗೆ ಕೊಹ್ಲಿಯನ್ನು ಹೋಲಿಕೆ ಮಾಡಿದ ಲಾರಾ, 'ಇವರಿಬ್ಬರು ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರು. ಬ್ಯಾಟಿಂಗ್​ನಲ್ಲಿ ಈ ಮಟ್ಟಕ್ಕೆ ಸಾಮರ್ಥ್ಯವನ್ನು ತೋರಿಸಿರುವ ವಿರಾಟ್​ ಆಟವನ್ನು ನೋಡಿದಾಗ ಆಶ್ಚರ್ಯವಾಗುತ್ತದೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಎಲ್ಲ ಆವೃತ್ತಿಗಳಲ್ಲಿ ಶೇ. 50 ರನ್​ ಸರಾಸರಿ ಹೊಂದುವುದು ಅದ್ಭುತವೇ ಸರಿ ಎಂದು ಲಾರಾ ಟೀಂ ಇಂಡಿಯಾ ನಾಯಕನ ಬ್ಯಾಟಿಂಗ್ ಅನ್ನು ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ
First published:December 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ