ವಿರಾಟ್ ಕೊಹ್ಲಿ ಈಗ ಟಿಕ್​ಟಾಕ್ ಸ್ಟಾರ್; ಆದ್ರೆ ಇದು ಟೀಂ ಇಂಡಿಯಾ ನಾಯಕನಲ್ಲ, ಮತ್ಯಾರು?

ಟೀಂ ಇಂಡಿಯಾ ಜೆರ್ಸಿ ಧರಿಸಿ ಇವರು ಟಿಕ್​ಟಾಕ್ ವಿಡಿಯೋ ಮಾಡಿದರೆಂದರೆ ಸೇಮ್ ಕೊಹ್ಲಿ ಮಾದರಿಯಲ್ಲೇ ಕಾಣಿಸುತ್ತಾರೆ. ಇವರ ಒಂದು ವಿಡಿಯೋಕ್ಕೆ 35 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಬರುತ್ತವೆ.

Vinay Bhat | news18-kannada
Updated:November 5, 2019, 10:57 AM IST
ವಿರಾಟ್ ಕೊಹ್ಲಿ ಈಗ ಟಿಕ್​ಟಾಕ್ ಸ್ಟಾರ್; ಆದ್ರೆ ಇದು ಟೀಂ ಇಂಡಿಯಾ ನಾಯಕನಲ್ಲ, ಮತ್ಯಾರು?
ಗೌರವ್ ಅರೋರ ಹಾಗೂ ವಿರಾಟ್ ಕೊಹ್ಲಿ
Vinay Bhat | news18-kannada
Updated: November 5, 2019, 10:57 AM IST
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ರಿಯಾಲಿಟಿ ಶೋ ಅಥವಾ ಇತರ ಟಿವಿ ಕಾರ್ಯಕ್ರಮಗಳಿಂದ ಕೊಂಚ ದೂರವಿರುವ ಕೊಹ್ಲಿ ಸದಾ ಮೈದಾನದಲ್ಲಿ ಬೆವರು ಹರಿಸಿ ದಾಖಲೆಯ ಮೇಲೆ ಕಣ್ಣಿಟ್ಟಿರುತ್ತಾರೆ.

ಆದರೆ, ಕಳೆದ ಕೆಲವು ದಿನಗಳಿಂದ ಇಂಟರ್​ನೆಟ್​ನಲ್ಲಿ ಕೊಹ್ಲಿಯ ಕೆಲವು ವಿಡಿಯೋ ಭಾರೀ ಹರಿದಾಡುತ್ತಿದೆ. ಸಾಮಾಜಿಕ ತಾಣದ ವಿಡಿಯೋ ಆ್ಯಪ್ ಟಿಕ್​ಟಾಕ್​ನಲ್ಲಿ ಕೊಹ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

Virat Kohli: 31ನೇ ವಸಂತಕ್ಕೆ ವಿರಾಟ್; ಇಲ್ಲಿದೆ ಕಿಂಗ್ ಕೊಹ್ಲಿಯ ಅಪರೂಪದ ಫೋಟೋಗಳು

ಅರೆ, ಶಾಕ್ ಆಗಬೇಡಿ! ನಾವು ಈಗ ಹೇಳುತ್ತಿರುವುದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಅಲ್ಲ. ಬದಲಾಗಿ ಥೇಟ್ ಕೊಹ್ಲಿಯಂತೆ ಕಾಣುವ ಗೌರವ್ ಅರೋರ ಬಗ್ಗೆ. ಗೌರವ್ ನೋಡಲು ವಿರಾಟ್ ಕೊಹ್ಲಿ ರೀತಿಯಲ್ಲೇ ಇದ್ದು ಟಿಕ್​ಟಾಕ್​ನ ಸೂಪರ್ ಸ್ಟಾರ್. ಇವರಿಗೆ ಟಿಕ್​ಟಾಕ್​ನಲ್ಲಿ 40 ಲಕ್ಕಕ್ಕೂ ಅಧಿಕ ಫಾಲೋವರ್ಸ್​ ಇದ್ದಾರೆ ಎಂದರೆ ನಂಬಲೇ ಬೇಕು.

ಟೀಂ ಇಂಡಿಯಾ ಜೆರ್ಸಿ ಧರಿಸಿ ಇವರು ಟಿಕ್​ಟಾಕ್ ವಿಡಿಯೋ ಮಾಡಿದರೆಂದರೆ ಸೇಮ್ ಕೊಹ್ಲಿ ಮಾದರಿಯಲ್ಲೇ ಕಾಣಿಸುತ್ತಾರೆ. ಇವರ ಒಂದು ವಿಡಿಯೋಕ್ಕೆ 35 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಬರುತ್ತವೆ. ವಿರಾಟ್ ರೀತಿಯೇ ಕಾಣುವ ಗೌರವ್ ಅವರ ಕೆಲವು ಟಿಕ್​ಟಾಕ್ ವಿಡಿಯೋ ಇಲ್ಲಿದೆ ನೋಡಿ…

IPL: 2020ರ ಐಪಿಎಲ್​ನಲ್ಲಿ ಹಿಂದೆಂದೂ ಕಾಣದ ನೂತನ ನಿಯಮ: ಏನಿದು ಪವರ್ ಪ್ಲೇಯರ್?


Loading...
First published:November 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...