ಜಸ್ಪ್ರೀತ್​ಗೆ ಸ್ಪರ್ಧೆ ಕೊಡಲು ಟೀಂ ಇಂಡಿಯಾದಲ್ಲಿ ಹುಟ್ಟಿಕೊಂಡ ಹೊಸ ಬೌಲರ್; ಬುಮ್ರಾ ಸ್ಥಾನಕ್ಕೆ ಕುತ್ತು?

ಈ ಬಾರಿಯ ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎನ್ನುವ ಖ್ಯಾತಿಗೆ ಬುಮ್ರಾ ಪಾತ್ರರಾಗಿದ್ದಾರೆ. ಅವರ ಸ್ಥಾನಕ್ಕೆ ಈಗ ಕುತ್ತು ಎದುರಾಗವ ಸಾಧ್ಯತೆ ಇದೆ!

ಬುಮ್ರಾ

ಬುಮ್ರಾ

  • News18
  • Last Updated :
  • Share this:
ಜಸ್ಪ್ರೀತ್​ ಬುಮ್ರಾ ಬೌಲಿಂಗ್​ಗೆ ಇಳಿದರೆ ಸಾಕು, ಎದುರಾಳಿ ತಂಡದವರು ನಡುಗುತ್ತಾರೆ. ರನ್​ ಗಳಿಸುವುದು ಹಾಗಿರಲಿ, ಔಟ್​ ಆಗದೆ ಉಳಿದುಕೊಂಡರೆ ಸಾಕು ಎನ್ನುವ ಆಲೋಚನೆಯಲ್ಲಿರುತ್ತಾರೆ ಬ್ಯಾಟ್ಸಮನ್​ಗಳು. ಆದರೆ, ಈಗ ಬುಮ್ರಾಗೆ ಸ್ಪರ್ಧೆ ನೀಡಲು ಟೀಂ ಇಂಡಿಯಾದಲ್ಲಿ ಹೊಸ ಬೌಲರ್​ನ ಉದಯವಾಗಿದೆ.

ಅಷ್ಟಕ್ಕೂ ಬುಮ್ರಾಗೆ ಸ್ಪರ್ಧೆ ನೀಡುತ್ತಿರುವ ಆಟಗಾರ ಯಾರು? ವಿರಾಟ್​ ಕೊಹ್ಲಿ! ಹೌದು, ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಈಗ ಬೌಲಿಂಗ್​ನಲ್ಲಿ ಬುಮ್ರಾ ಜೊತೆ ಸ್ಪರ್ಧೆಗೆ ನಿಂತಿದ್ದಾರೆ. ಬುಮ್ರಾ ಮಾದರಿಯಲ್ಲಿ ವಿರಾಟ್​ ಬೌಲಿಂಗ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದನ್ನು ನೋಡಿದವರು ಹೀಗೆ ಹೇಳಿಕೊಂಡಿದ್ದಾರೆ ಅಷ್ಟೇ. .

ಭಾರತ ಕ್ರಿಕೆಟ್​ ತಂಡ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿತ್ತು. ಈ ವೇಳೆ ವಿರಾಟ್​ ಕೈಯಲ್ಲಿ ಬಾಲ್​ ಹಿಡಿದಿದ್ದಾರೆ. ನಂತರ ಬುಮ್ರಾ ಬೌಲಿಂಗ್ ಶೈಲಿಯನ್ನು ಅನುಕರಣೆ ಮಾಡಿದ್ದಾರೆ. ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ನೋಡಿದ ಅನೇಕರು, ಬುಮ್ರಾಗೆ ಸ್ಪರ್ಧೆ ನೀಡಲು ಹೊಸ ಬೌಲರ್​ ಹುಟ್ಟಿಯಾಗಿದೆ. ಹಾಗಾಗಿ ಬುಮ್ರಾ ಸ್ಥಾನಕ್ಕೆ ಕುತ್ತು ಗ್ಯಾರಂಟಿ ಎಂದು ನಗೆಚಟಾಕಿ ಹಾರಿಸಿದ್ದಾರೆ.ಇದನ್ನೂ ಓದಿ: ನ್ಯೂಜಿಲೆಂಡ್ ನಾಯಕನಿಗೆ ಟೆನ್ಶನ್: ಕ್ಯಾಪ್ಟನ್ ಕೊಹ್ಲಿ ಮೈದಾನದಲ್ಲೇ ಡ್ಯಾನ್ಸ್​..! ವಿಡಿಯೋ ವೈರಲ್

ಮಂಗಳವಾರ ನಡೆದ ನ್ಯೂಜಿಲೆಂಡ್​ ವಿರುದ್ಧ ಪಂದ್ಯದಲ್ಲಿ ಭಾರತದ ಬೌಲರ್​ಗಳು ಕಮಾಲ್​ ಮಾಡಿದ್ದರು. 46 ಓವರ್​ಗಳಲ್ಲಿ ಕೇವಲ 211ರನ್​ ಕೆಲ ಹಾಕಲು ಮಾತ್ರ ನ್ಯೂಜಿಲೆಂಡ್​ ಶಕ್ಯವಾಗಿತ್ತು.

First published: