Virat Kohli: ಅನುಷ್ಕಾ ರೀತಿಯೇ ವಿರಾಟ್ ಕೊಹ್ಲಿಯನ್ನೂ ಟ್ರೋಲ್ ಮಾಡಿದ ನೆಟ್ಟಿಗರು!

India vs West Indies T20: 2017ರ ಟಿ20 ಪಂದ್ಯದಲ್ಲಿ ವಿರಾಟ್​ ಕೊಹ್ಲಿ ವಿಕೆಟ್​ ಕೀಳುವಲ್ಲಿ ವಿಲಿಯಮ್ಸ್​ ಯಶಸ್ವಿಯಾಗಿದ್ದರು. ಈ ವೇಳೆ ವಿಲಿಯಮ್ಸ್ ತಮ್ಮ ಸಿಗ್ನೇಚರ್​ ಸ್ಟೈಲ್​ನಲ್ಲಿ ಕೊಹ್ಲಿಯನ್ನು ಅಣುಕಿಸಿದ್ದರು. ಇದಕ್ಕೆ ವಿರಾಟ್​ ಈಗ ಉತ್ತರಿಸಿದ್ದಾರೆ.

ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ

  • Share this:
‘ಸುಯಿ ಧಾಗಾ; ಮೇಡ್​ ಇನ್​ ಇಂಡಿಯಾ’ ಸಿನಿಮಾ ತೆರೆಕಂಡಾಗ ಅನುಷ್ಕಾ ಶರ್ಮಾ ಅವರನ್ನು ವಿಪರೀತ ಟ್ರೋಲ್​ ಮಾಡಲಾಗಿತ್ತು. ಈ ಬಗ್ಗೆ ಅನುಷ್ಕಾ ಶರ್ಮಾ ಓಪನ್​ ಆಗಿ ಅಸಮಾಧಾನ ಹೊರ ಹಾಕಿದ್ದರು. ಈಗ ವಿರಾಟ್​ ಕೊಹ್ಲಿ ಸರದಿ. ಭಾರತ ತಂಡದ ನಾಯಕನನ್ನು ಈಗ ನೆಟ್ಟಿಗರು ಭಾರೀ ಟ್ರೋಲ್​ ಮಾಡಿದ್ದಾರೆ.

ಹೌದು, ಭಾರತ-ವೆಸ್ಟ್​ ಇಂಡೀಸ್​ ನಡುವಣ ಮೊದಲ ಟಿ-20 ಪಂದ್ಯದಲ್ಲಿ ಕೆ ವಿಲಿಯಮ್ಸ್​ ಬೌಲಿಂಗ್​ನಲ್ಲಿ ವಿರಾಟ್​ ಕೊಹ್ಲಿ ಸರಿಯಾಗಿ ಬ್ಯಾಟ್​ ಬೀಸಿದ್ದರು. ಈ ವೇಳೆ ಅವರು ಭಿನ್ನವಾಗಿ ಅಣುಕು ಪ್ರದರ್ಶನ ಮಾಡುವ ಮೂಲಕ ವಿಲಿಯಮ್ಸ್​ ಅವರ ಸಿಗ್ನೆಚರ್​ ಸ್ಟೈಲ್​ಅನ್ನು ಅಣಕಿಸಿದ್ದರು.

2017ರ ಟಿ20 ಪಂದ್ಯದಲ್ಲಿ ವಿರಾಟ್​ ಕೊಹ್ಲಿ ವಿಕೆಟ್​ ಕೀಳುವಲ್ಲಿ ವಿಲಿಯಮ್ಸ್​ ಯಶಸ್ವಿಯಾಗಿದ್ದರು. ಈ ವೇಳೆ ವಿಲಿಯಮ್ಸ್ ತಮ್ಮ ಸಿಗ್ನೇಚರ್​ ಸ್ಟೈಲ್​ನಲ್ಲಿ ಕೊಹ್ಲಿಯನ್ನು ಅಣುಕಿಸಿದ್ದರು. ಇದಕ್ಕೆ ಉತ್ತರವಾಗಿ ವಿಲಿಯಮ್ಸ್​ರನ್ನು ವಿರಾಟ್​ ಬೆಂಡೆತ್ತಿ, ಅಣುಕಿಸಿದ್ದರು.






 




View this post on Instagram





 

A post shared by INDIAN CRICKET TEAM (@indiancricketsteam18) on























First published: