ನಾಯಕನಾಗಿ ಕೊಹ್ಲಿ ಸಾಧನೆ ‘0‘; ಭಾರತದ ಮಾಜಿ ಆಟಗಾರನ ಅಚ್ಚರಿ ಹೇಳಿಕೆ!

Gautam Gambhir: ಹಲವು ಐಸಿಸಿ ಟೂರ್ನಿಯಲ್ಲಿ ಕೊಹ್ಲಿ ನಾಯಕತ್ವ ವಿಫಲವಾಗಿದೆ. 2017ರಲ್ಲಿ ಚಾಂಪಿಯನ್ಸ್​ ಟ್ರೋಪಿ, 2019 ವಿಶ್ವಕಪ್​​ ಸೇರಿದಂತೆ ಕೊಹ್ಲಿ ತಂಡಕ್ಕಾಗಿ ಆಡಲಿಲ್ಲ. ಐಪಿಎಲ್​​ ಪಂದ್ಯದಲ್ಲೂ ರಾಯಲ್​​ ಚಾಲೆಂಜರ್ಸ್​​​ ತಂಡದ ನಾಯಕನಾಗಿರುವ ಕೊಹ್ಲಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.

news18-kannada
Updated:June 15, 2020, 6:58 PM IST
ನಾಯಕನಾಗಿ ಕೊಹ್ಲಿ ಸಾಧನೆ ‘0‘; ಭಾರತದ ಮಾಜಿ ಆಟಗಾರನ ಅಚ್ಚರಿ ಹೇಳಿಕೆ!
ಟೀಂ ಇಂಡಿಯಾಧ ನಾಯಕ ವಿರಾಟ್​ ಕೊಹ್ಲಿ
  • Share this:
ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್​​ ಅವರು ವಿರಾಟ್​ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ಹೇಳಿದ್ದಾರೆ. ಕೊಹ್ಲಿ ಅತ್ಯುತ್ತಮ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಾಯಕನಾಗಿ ವಿರಾಟ್​ ಕೊಹ್ಲಿ ಸಾಧನೆ ಶೂನ್ಯ ಎಂದಿದ್ದಾರೆ.

ಗೌತಮ್​ ಗಂಭೀರ್​ ನೇರವಾಗಿ ಮಾತನಾಡುವ ಸ್ವಭಾವದವರು. ಏನೇ ವಿಚಾರವಿದ್ದರು ನೇರವಾಗಿ ಹೇಳಿಬಿಡುತ್ತಾರೆ. ಇದೀಗ ಕೊಹ್ಲಿ ಬಗ್ಗೆ ಮಾತನಾಡಿದ್ದ ಅವರು, ವೈಯ್ಯಕ್ತಿಕ ಸಾಧನೆಗಿಂತ ತಂಡಕ್ಕಾಗಿ ಆಡಬೇಕು. ಸರಣಿ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿಕೊಡುವಾತನೇ ನಿಜವಾದ ನಾಯಕ ಎಂದಿದ್ದಾರೆ.

ಸೌತ್​ ಆಫ್ರಿಕಾದ ಆಲ್​ರೌಂಡರ್​​ ಜಾಕ್​ ಕಾಲಿಸ್​​, ವೆಸ್ಟ್​ ಇಂಡೀಸ್​​​ ದಿಗ್ಗಜ ಬ್ರಿಯಾನ್​ ಲಾರಾ ವೈಯ್ಯಕ್ತಿಕವಾಗಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಆದರೆ ಪಂದ್ಯಕ್ಕಾಗಿ ಆಡಿ ವಿನ್ನರ್​ ಎಂದು ಗುರುತಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಗೌತಮ್​ ಗಂಭೀರ್


ಹಲವು ಐಸಿಸಿ ಟೂರ್ನಿಯಲ್ಲಿ ಕೊಹ್ಲಿ ನಾಯಕತ್ವ ವಿಫಲವಾಗಿದೆ. 2017ರಲ್ಲಿ ಚಾಂಪಿಯನ್ಸ್​ ಟ್ರೋಪಿ, 2019 ವಿಶ್ವಕಪ್​​ ಸೇರಿದಂತೆ ಕೊಹ್ಲಿ ತಂಡಕ್ಕಾಗಿ ಆಡಲಿಲ್ಲ. ಐಪಿಎಲ್​​ ಪಂದ್ಯದಲ್ಲೂ ರಾಯಲ್​​ ಚಾಲೆಂಜರ್ಸ್​​​ ತಂಡದ ನಾಯಕನಾಗಿರುವ ಕೊಹ್ಲಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ ಕೊಹ್ಲಿ ಟೀಂ ಇಂಡಿಯಾದಲ್ಲಿ ಅತ್ಯುತ್ತಮ ಆಟಗಾರನೆಂದು ಹೊರತು ಪಡಿಸಿದರೆ, ನಾಯಕತ್ವದಲ್ಲಿ ವಿಫಲರಾಗಿದ್ದಾರೆ ಎಂದು ಗಂಭೀರ್​ ಹೇಳಿದ್ದಾರೆ.

 

ಗೋಕರ್ಣ ಕಡಲ ತೀರದಲ್ಲಿ ಬ್ಯಾಟ್​​ ಬೀಸುತ್ತಿರುವ ಯುವಕರು; ದೃಶ್ಯಕಂಡು ಮನಸೋತ ಐಸಿಸಿSuresh Raina: ಸುರೇಶ್​ ರೈನಾ ಬಯೋಪಿಕ್​​ನಲ್ಲಿ ಯಾವ ನಟ ನಟಿಸಬೇಕಂತೆ ಗೊತ್ತಾ?
First published: June 15, 2020, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading