HOME » NEWS » Sports » CRICKET VIRAT KOHLI HAS MARRIED HIS ABILITY TO HUNGER AND DRIVE SAYS KANE WILLIAMSON VB

Virat Kohli: ವಿರಾಟ್ ಕೊಹ್ಲಿ ಮತ್ತೊಂದು ಮದುವೆಯಾಗಿದ್ದಾರೆ ಎಂದ ಕಿವೀಸ್ ನಾಯಕ ವಿಲಿಯಮ್ಸನ್!

ದಿನದಿಂದ ದಿನಕ್ಕೆ ತಮ್ಮ ಆಟದಲ್ಲಿ ಪ್ರಗತಿ ಕಾಣುತ್ತಲೇ ಇದ್ದಾರೆ. ಕೊಹ್ಲಿ ಓರ್ವ ಕ್ರಿಕೆಟ್​ ಆಟಗಾರನಾಗಿ ಮಾತ್ರವಲ್ಲದೆ, ಒಳ್ಳೆಯ ಸ್ನೇಹಿತ ಕೂಡ ಹೌದು ಎಂಬುದು ವಿಲಿಯಮ್ಸನ್ ಮಾತು.

news18-kannada
Updated:June 9, 2020, 9:10 AM IST
Virat Kohli: ವಿರಾಟ್ ಕೊಹ್ಲಿ ಮತ್ತೊಂದು ಮದುವೆಯಾಗಿದ್ದಾರೆ ಎಂದ ಕಿವೀಸ್ ನಾಯಕ ವಿಲಿಯಮ್ಸನ್!
ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್.
  • Share this:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಮೈದಾನದ ಒಳಗೂ-ಹೊರಗೂ ಅತ್ಯುತ್ತಮ ಸ್ನೇಹಿತರು ಎಂಬುದು ಇಡೀ ವಿಶ್ವಕ್ಕೆ ತಿಳಿದಿದೆ. ಇತ್ತೀಚೆಗಷ್ಟೆ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್‌ ಮಾಡಿ ವಿಲಿಯಮ್ಸನ್‌ ಜೊತೆಗಿನ ಫೋಟೊ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ 'ನಮ್ಮಿಬ್ಬರ ನಡುವಣ ಚರ್ಚೆಯನ್ನು ಪ್ರೀತಿಸುತ್ತೇನೆ. ಕೇನ್‌ ವಿಲಿಯಮ್ಸನ್ ಉತ್ತಮ ಮನುಷ್ಯ," ಎಂದು ವಿರಾಟ್‌ ಬರೆದುಕೊಂಡಿದ್ದರು.

ಕೇವಲ ಕೊಹ್ಲಿ ಮಾತ್ರವಲ್ಲಿ ವಿಲಿಯಮ್ಸನ್ ಕೂಡ ವಿರಾಟ್ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಇದಕ್ಕೆ ವಿಲಿಯಮ್ಸನ್ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಯೇ ಸಾಕ್ಷಿ. ಕಿಂಗ್ ಕೊಹ್ಲಿ ಅನುಷ್ಕಾರನ್ನು ಮಾತ್ರವಲ್ಲ ಮತ್ತೊಂದು ಮದುವೆ ಆಗಿದ್ದಾರೆ ಎಂದು ವಿಲಿಯಮ್ಸನ್ ಹೇಳಿದ್ದಾರೆ.

IPL 2020: ಈ ಬಾರಿ ವಿದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆ?

ಹೌದು, ವಿರಾಟ್‌ ಕೊಹ್ಲಿ, ಸಾಧಿಸುವ ತುಡಿತ ಮತ್ತು ಮುನ್ನುಗ್ಗುವ ಛಲದೊಂದಿಗೆ ತಮ್ಮ ಸಾಮರ್ಥ್ಯವನ್ನೇ ಮದುವೆಯಾಗಿದ್ದಾರೆ ಎಂಬ ಅಚ್ಚರಿಯ ಹೇಳಿಕೆಯೊಂದನ್ನು ನ್ಯೂಜಿಲೆಂಡ್‌ ಕಪ್ತಾನ ನೀಡಿದ್ದಾರೆ.

'ಕೊಹ್ಲಿ ಪ್ರಸ್ತುತ ಅತ್ಯುತ್ತಮ ಬ್ಯಾಟ್ಸ್‌ಮನ್‌. ಕೊಹ್ಲಿಯ ಆಟದಲ್ಲಿ ಪರಿಪಕ್ವತೆ ಇದೆ. ಮೈದಾನಕ್ಕೆ ಬ್ಯಾಟ್​​ ಹಿಡಿದು ಇಳಿದ್ರೆ ರನ್​ಗಳ ಮಳೆಯನ್ನೇ ಸುರಿಸಬೇಕು ಎಂಬ ಛಲ ಆತನಲ್ಲಿದೆ. ಆದ್ದರಿಂದಲೇ ಕೊಹ್ಲಿ ಭಾರತದ ರನ್​ ಮಷಿನ್​ ಆಗಿ, ಬೌಲರ್​ಗಳಿಗೆ ದುಸ್ವಪ್ನವಾಗಿದ್ದಾರೆ' ಎಂದು ಕೊಹ್ಲಿ ಆಟದ ವೈಖರಿಯನ್ನ ಬಣ್ಣಿಸಿದ್ದಾರೆ ಕೇನ್.

ಆಸ್ಟ್ರೇಲಿಯಾದಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಹೇಳಿದ ಮಾತುಗಳನ್ನು ನೆನಪಿಸಿಕೊಂಡ ವಿಲಿಯಮ್ಸನ್​​, 'ಫಲಿತಾಂಶಗಳಿಂದ ನಾಯಕತ್ವವನ್ನು ನಿರ್ಧರಿಸಬಹುದು ಎಂದು ನಾನು ಭಾವಿಸುವುದಿಲ್ಲ. ನೀವು ತಂಡವನ್ನು ಹೇಗೆ ಒಗ್ಗೂಡಿಸುತ್ತೀರಿ ಹಾಗೂ ನಿಮ್ಮ ಸಹ ಆಟಗಾರರು ತಂಡದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಮುಖ್ಯ ಎಂಬ ಕೊಹ್ಲಿಯ ಮಾತು ಸತ್ಯ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.

ಮಾರಕ ವೇಗಿ ಎದುರು ಬ್ಯಾಟ್ ಬೀಸಲಿ ನೋಡೋಣ: ರೋಹಿತ್ ಶರ್ಮಾಗೆ ಸವಾಲು..!'ಅವರಿಗೆ ಕ್ರಿಕೆಟ್‌ ತಂತ್ರಗಾರಿಕೆ ಉಡುಗೊರೆ ರೀತಿಯಲ್ಲಿ ಲಭ್ಯವಾಗಿದೆ. ಸ್ಥಿರ ಪ್ರದರ್ಶನ ನೀಡುವ ಮತ್ತು ಸಾಧಿಸುವ ಛಲದೊಂದಿಗೆ ಅವರು ತಮ್ಮ ಸಾಮರ್ಥ್ಯಗಳನ್ನೇ ಮದುವೆಯಾಗಿದ್ದಾರೆ. ಈ ಮೂಲಕ ದಿನದಿಂದ ದಿನಕ್ಕೆ ತಮ್ಮ ಆಟದಲ್ಲಿ ಪ್ರಗತಿ ಕಾಣುತ್ತಲೇ ಇದ್ದಾರೆ. ಕೊಹ್ಲಿ ಓರ್ವ ಕ್ರಿಕೆಟ್​ ಆಟಗಾರನಾಗಿ ಮಾತ್ರವಲ್ಲದೆ, ಒಳ್ಳೆಯ ಸ್ನೇಹಿತ ಕೂಡ ಹೌದು' ಎಂಬುದು ವಿಲಿಯಮ್ಸನ್ ಮಾತು.

First published: June 9, 2020, 9:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories