Virat Kohli: ವಿರಾಟ್ ಕೊಹ್ಲಿ ಸೂಪರ್​ಮ್ಯಾನ್​ನಂತೆ ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ಇಲ್ಲಿದೆ

ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದರು. ಇದಾಗಿ ಕೆಲ ಹೊತ್ತಿನಲ್ಲೇ 4 ಸಿಕ್ಸರ್​ ಹಾಗೂ 5 ಬೌಂಡರಿಗಳೊಂದಿಗೆ 64 ರನ್ ಬಾರಿಸಿದ್ದ ಪಾಂಡ್ಯ, ಸ್ಟೋಕ್ಸ್ ಎಸೆತದಲ್ಲಿ ಬೌಲ್ಡ್ ಆದರು.

Virat Kohli catch

Virat Kohli catch

 • Share this:
  ಪುಣೆಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಈ ಪಂದ್ಯದ ವೇಳೆ ನಡೆದ ಘಟನೆಯೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ಒದಗಿಸಿದ್ದರು.

  ಮೊದಲ ವಿಕೆಟ್​ಗೆ 103 ರನ್​ಗಳ ಜೊತೆಯಾಟವಾಡಿದರು. 56 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 67 ರನ್​ ಬಾರಿಸಿ ಶಿಖರ್ ಧವನ್​ ಮಿಂಚಿದರು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಜೊತೆಗೂಡಿದ ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ 6ನೇ ವಿಕೆಟ್​ಗೆ 99 ರನ್​ಗಳನ್ನು ಪೇರಿಸಿದರು. 62 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 78 ರನ್​ಗಳಿಸಿದ್ದ ಪಂತ್, ಸ್ಯಾಮ್ ಕರ್ರನ್ ಎಸೆತದಲ್ಲಿ ವಿಕೆಟ್ ಕೀಪರ್ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಮುಖ ಮಾಡಿದರು.

  ಮತ್ತೊಂದು ಬದಿಯಲ್ಲಿದ್ದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತಿದರು. ಇದಾಗಿ ಕೆಲ ಹೊತ್ತಿನಲ್ಲೇ 4 ಸಿಕ್ಸರ್​ ಹಾಗೂ 5 ಬೌಂಡರಿಗಳೊಂದಿಗೆ 64 ರನ್ ಬಾರಿಸಿದ್ದ ಪಾಂಡ್ಯ, ಸ್ಟೋಕ್ಸ್ ಎಸೆತದಲ್ಲಿ ಬೌಲ್ಡ್ ಆದರು. ಕೃನಾಲ್ ಪಾಂಡ್ಯ ಜೊತೆಗೂಡಿ 8ನೇ ವಿಕೆಟ್​ಗೆ 45 ರನ್​ಗಳ ಜೊತೆಯಾಟವಾಡಿದ ಶಾರ್ದುಲ್ ಠಾಕೂರ್ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಅಲ್ಲದೆ ಟೀಮ್ ಇಂಡಿಯಾ 48.2 ಓವರ್​ನಲ್ಲಿ 329 ರನ್​ಗೆ ಪೇರಿಸಿತು.

  330 ರನ್​ಗಳ ಗುರಿ ಪಡೆದ ಇಂಗ್ಲೆಂಡ್​ಗೆ ಆರಂಭಿಕ ಆಘಾತ ನೀಡುವಲ್ಲಿ ಭುವನೇಶ್ವರ್ ಕುಮಾರ್ ಯಶಸ್ವಿಯಾಗಿದ್ದರು. ತಂಡದ ಮೊತ್ತ 30 ಆಗುವಷ್ಟರಲ್ಲಿ ಜೇಸನ್ ರಾಯ್ ಹಾಗೂ ಜಾನಿ ಬೈರ್​ಸ್ಟೋವ್​ಗೆ ಭುವಿ ಪೆವಿಲಿಯನ್ ಹಾದಿ ತೋರಿಸಿದ್ದರು. ಟೀಮ್ ಇಂಡಿಯಾ ಬೌಲರುಗಳ ಕರಾರುವಾಕ್ ದಾಳಿ ಮುಂದೆ ನೆಲೆಯೂರಲು ಒದ್ದಾಡಿದ ಆಂಗ್ಲ ಬ್ಯಾಟ್ಸ್​ಮನ್​ಗಳು ಒಬ್ಬರಾಗಿ ವಿಕೆಟ್ ಒಪ್ಪಿಸಿದರು.



  ಅದರಲ್ಲೂ ಪಂದ್ಯದ 40ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ ಹಿಡಿದ ಕ್ಯಾಚ್ ಪ್ರೇಕ್ಷಕರನ್ನು ದಂಗಾಗಿಸಿತ್ತು. ಶಾರ್ದುಲ್ ಠಾಕೂರ್ ಎಸೆತದಲ್ಲಿ ಆದಿಲ್ ರಶೀದ್ ಆಫ್​ ಸೈಡ್​ನತ್ತ ಬಾರಿಸಿದ್ದರು. ಅಲ್ಲೇ ಶಾರ್ಟ್​ ಕವರ್​ ಫೀಲ್ಡಿಂಗ್​ನಲ್ಲಿದ್ದ ವಿರಾಟ್ ಕೊಹ್ಲಿ ಚಕ್ಕನೆ ಚಿಮ್ಮಿದರು. ಇನ್ನೇನು ಚೆಂಡು ನೆಲಕ್ಕೆ ತಾಗಲಿದೆ ಅನ್ನುವಷ್ಟರಲ್ಲಿ ಎಡಗೈಯಲ್ಲಿ ಚೆಂಡನ್ನು ಬಂಧಿಸಿದರು. ತಾನು ಹಿಡಿದ ಈ ಅದ್ಭುತ ಕ್ಯಾಚ್​​ಗೆ ಖುದ್ದು ಕೊಹ್ಲಿಯೇ ಆಶ್ಚರ್ಯಗೊಂಡರು. ಈ ಅತ್ಯಾಧ್ಬುತ ಕ್ಯಾಚ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
  Published by:zahir
  First published: