ಕೊಹ್ಲಿ ಸ್ಫೋಟಕ: ಕೆ. ಎಲ್ ರಾಹುಲ್ ತಂಡದ ವಿರುದ್ಧ ವಿರಾಟ್ ಬಳಗಕ್ಕೆ ಭರ್ಜರಿ ಜಯ: ಇಲ್ಲಿದೆ ಸ್ಕೋರ್

ಟಾರ್ಗೆಟ್ ಬೆನ್ನಟ್ಟಿದ ಕೊಹ್ಲಿ ತಂಡದ ಪರ ಪೃಥ್ವಿ ಶಾ ಹಾಗೂ ಶುಭ್ಮನ್ ಗಿಲ್ ಇನ್ನಿಂಗ್ಸ್​ ಆರಂಭಿಸಿದರು. ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 58 ಎಸೆತಗಳಲ್ಲಿ 91 ರನ್ ಚಚ್ಚಿದರು.

Virat Kohli - KL Rahul

Virat Kohli - KL Rahul

 • Share this:
  ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡ ಭರ್ಜರಿ ಅಭ್ಯಾಸ ನಡೆಸುತ್ತಿದೆ. ನವೆಂಬರ್ 27 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಮೊದಲ ಏಕದಿನ ಪಂದ್ಯ ನಡೆಯುವ ಮೂಲಕ ಚಾಲನೆ ಸಿಗಲಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾವನ್ನು ಎರಡು ತಂಡವಾಗಿ ವಿಭಾಗಿಸಿ ವಿರಾಟ್ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್ ನಾಯಕತ್ವದಡಿಯಲ್ಲಿ ಅಭ್ಯಾಸ ಪಂದ್ಯವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಕೊಹ್ಲಿ ಸಾರಥ್ಯದ ಸಿಕೆ ನಾಯ್ಡು ಇಲೆವೆನ್ ತಂಡ ಕನ್ನಡಿಗ ರಾಹುಲ್ ನೇತೃತ್ವದ ರಣಜಿತ್‌ಸಿನ್ಹಾಜಿ ಇಲೆವೆನ್ ತಂಡದ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

  ಮಳೆ ಭಾದಿತ ಪಂದ್ಯದಲ್ಲಿ ಉಭಯ ತಂಡಗಳಿಗೆ ತಲಾ 40 ಓವರ್​ಗಳ ಆಟವನ್ನು ನಿಗದಿ ಪಡಿಸಲಾಯಿತು. ಇಂಡಿಯನ್ ಕ್ರಿಕೆಟ್ ಟೀಂ ಇನ್​ಸ್ಟಾಗ್ರಾಂ ಖಾತೆ ಭಾರತೀಯರ ಅಭ್ಯಾಸ ಪಂದ್ಯದ ಫೋಟೋವನ್ನು ಹಂಚಿಕೊಂಡಿದೆ.

  Rohit Sharma: ಟೀಂ ಇಂಡಿಯಾ ಪರ ಯಾವುದೇ ಕ್ರಮಾಂಕದಲ್ಲಿ ಅಬ್ಬರಿಸಲು ನಾನು ರೆಡಿ ಎಂದ ಹಿಟ್​ಮ್ಯಾನ್

  ಮೊದಲು ಬ್ಯಾಟ್ ಮಾಡಿದ ರಾಹುಲ್ ತಂಡ ನಿಗದಿತ 40 ಓವರ್​ಗಳಲ್ಲಿ 235 ರನ್ ಬಾರಿಸಿತು. ಓಪನರ್​ಗಳಾಗಿ ಶಿಖರ್ ಧವನ್ ಹಾಗೂ ಮಯಾಂಕ್ ಅಗರ್ವಾಲ್ ಕಣಕ್ಕಿಳಿದರು. ಐಪಿಎಲ್ ಫಾರ್ಮ್​ ಅನ್ನೇ ಮುಂದುವರೆಸಿದ ರಾಹುಲ್ ಕೇವಲ 66 ಎಸೆತಗಳಲ್ಲಿ 83 ರನ್ ಸಿಡಿಸಿದರು.

  ಫೋಟೋ ಕೃಪೆ: ಇನ್​ಸ್ಟಾಗ್ರಾಂ


  ಟಾರ್ಗೆಟ್ ಬೆನ್ನಟ್ಟಿದ ಕೊಹ್ಲಿ ತಂಡದ ಪರ ಪೃಥ್ವಿ ಶಾ ಹಾಗೂ ಶುಭ್ಮನ್ ಗಿಲ್ ಇನ್ನಿಂಗ್ಸ್​ ಆರಂಭಿಸಿದರು. ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 58 ಎಸೆತಗಳಲ್ಲಿ 91 ರನ್ ಚಚ್ಚಿದರು. ಇನ್ನೂ 26 ಎಸೆತ ಬಾಕಿ ಇರುವಂತೆ ಸಿಕೆ ನಾಯ್ಡು ಇಲೆವೆನ್ ತಂಡ ಭರ್ಜರಿ ಜಯ ಸಾಧಿಸಿತು.

  ಫೋಟೋ ಕೃಪೆ: ಇನ್​ಸ್ಟಾಗ್ರಾಂ


  ಭಾರತ ತಂಡ ಸದ್ಯ ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್‌ನಲ್ಲಿದ್ದು, ನವೆಂಬರ್ 27ರಿಂದ ಏಕದಿನ ಸರಣಿ ಆರಂಭವಾಗಲಿದೆ. ಕೋವಿಡ್ -19 ನಡುವೆ ಇದು ಭಾರತದ ಮೊದಲ ಅಂತರಾಷ್ಟ್ರೀಯ ಸರಣಿಯಾಗಿದ್ದು, ಸಂಪೂರ್ಣ ಸುರಕ್ಷತಾ ನಿಯಮದೊಂದಿಗೆ ಉಭಯ ತಂಡಗಳು ಮಹತ್ವದ ಸರಣಿ ಆಡಲಿದೆ. ಒಟ್ಟು 3 ಏಕದಿನ, 3 ಟಿ-20 ಮತ್ತು 4 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿವೆ.

  Virat Kohli: ಆರ್​ಸಿಬಿ ಸ್ಪಿನ್ನರ್ ಆ್ಯಡಂ ಝಂಪಾರಿಂದ ವಿರಾಟ್ ಕೊಹ್ಲಿ ಬಗ್ಗೆ ಶಾಕಿಂಗ್ ಹೇಳಿಕೆ: ಏನು ಹೇಳಿದ್ರು?

  ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನವೆಂಬರ್ 27 ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. 2ನೇ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದ್ದು ನ. 29ಕ್ಕೆ ಏರ್ಪಡಿಸಲಾಗಿದೆ. ಡಿ. 2 ರಂದು ಅಂತಿಮ ಮೂರನೇ ಏಕದಿನ ಪಂದ್ಯ ಕ್ಯಾನ್​ಬೆರಾದಲ್ಲಿ ನಡೆಯಲಿದೆ. ಎಲ್ಲಾ ಏಕದಿನ ಪಂದ್ಯ ಭಾರತದ ಕಾಲಮಾನದ ಪ್ರಕಾರ ಬೆಳಗ್ಗೆ 9:10ಕ್ಕೆ ಆರಂಭವಾಗಲಿದೆ.

  ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭ್​ಮನ್ ಗಿಲ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್, ಉಪ ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್).
  Published by:Vinay Bhat
  First published: