Virat Kohli: ನೀರುದೋಸೆ ಸವಿದ ವಿರಾಟ್ ಕೊಹ್ಲಿ: ಇದರ ಹಿಂದಿದೆ ಕುಡ್ಲದ ನಂಟು

Virat Kohli: ಇದೀಗ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಕೂಡ ನೀರ್​ದೋಸೆ ಸವಿದು ಅದರ ರುಚಿಗೆ ಮಾರುಹೋಗಿದಿದ್ದಾರೆ. ಅಷ್ಟಕ್ಕೂ ಮುಂಬೈನಲ್ಲಿರುವ ವಿರಾಟ್​ ಕೊಹ್ಲಿ ಮಂಗಳೂರಿಗೆ ಯಾವಾಗ ಬಂದ್ರು? ಅವರಿಗೆ ನೀರು ದೋಸೆ ಮಾಡಿಕೊಟ್ಟವರ್ಯಾರು? ಇಲ್ಲಿದೆ ಮಾಹಿತಿ.

news18-kannada
Updated:July 8, 2020, 4:48 PM IST
Virat Kohli: ನೀರುದೋಸೆ ಸವಿದ ವಿರಾಟ್ ಕೊಹ್ಲಿ: ಇದರ ಹಿಂದಿದೆ ಕುಡ್ಲದ ನಂಟು
ವಿರಾಟ್​ ಕೊಹ್ಲಿ
  • Share this:ಮಂಗಳೂರು ಎಂದ ಮೇಲೆ ಕೋರಿ ರೊಟ್ಟಿ, ನೀರುದೋಸೆ, ಮೀನು ಸಾರು ಎಲ್ಲದಕ್ಕೂ ಫೇಮಸ್​​. ದೇಶ- ವಿದೇಶದಿಂದ ಯಾರೇ ಮಂಗಳೂರಿಗೆ ಬಂದರು  ನೀರು ದೋಸೆ ಮತ್ತು ಮೀನು ಸವಿಯದೆ ಹೋಗಲಾರರು. ಇದೀಗ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಕೂಡ ನೀರು​ದೋಸೆ ಸವಿದು ಅದರ ರುಚಿಗೆ ಮಾರುಹೋಗಿದಿದ್ದಾರೆ. ಅಷ್ಟಕ್ಕೂ ಮುಂಬೈನಲ್ಲಿರುವ ವಿರಾಟ್​ ಕೊಹ್ಲಿ ಮಂಗಳೂರಿಗೆ ಯಾವಾಗ ಬಂದ್ರು? ಅವರಿಗೆ ನೀರು ದೋಸೆ ಮಾಡಿಕೊಟ್ಟಿದ್ಯಾರು? ಇಲ್ಲಿದೆ ಮಾಹಿತಿ.

ಕೊರೋನಾ ಸಮಯದಲ್ಲಿ ವಿರಾಟ್​ ಕೊಹ್ಲಿ ತಮ್ಮ ಮುಂಬೈನಲ್ಲಿರುವ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ವಿರಾಟ್​​ ಕೊಹ್ಲಿ ಅವರ ಮನೆಯಿಂದ ಕೆಲವೇ ದೂರದಲ್ಲಿ ಮಂಗಳೂರು ಮೂಲದ ಟೀಂ ಇಂಡಿಯಾದ ಮತ್ತೊಬ್ಬ ಬ್ಯಾಟ್ಸ್​ಮನ್​ ಶ್ರೇಯಸ್ಸ್​ ಅಯ್ಯರ್​ ಅವರ ಮನೆಯಿದೆ. ಹಾಗಾಗಿ ಶ್ರೇಯಸ್​ ಅಯ್ಯರ್​ ತನ್ನ ತಾಯಿ ರೋಹಿಣಿ ಅಯ್ಯರ್​ ಮಾಡಿಕೊಟ್ಟ ನೀರು ದೋಸೆಯನ್ನು ವಿರಾಟ್​​ ಕೊಹ್ಲಿಗೆ ಹೋಗಿ ಕೊಟ್ಟಿದ್ದಾರೆ. ವಿರಾಟ್​ ಕೊಹ್ಲಿಯ ನೀರುದೋಸೆ ಸವಿದು ಕ್ಲೀನ್​ ಬೋಲ್ಡ್​​ ಆಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ನೀರ್​ದೋಸೆ ತಿಂದ ವಿರಾಟ್​ ತಮ್ಮ ಟ್ಬಿಟ್ಟರ್​ನಲ್ಲಿ, ‘ನಮ್ಮ ಮನೆಯಿಂದ 500 ಕಿ.ಮೀ ದೂರದಲ್ಲಿರುವ ನಮ್ಮ ನೆರೆಮನೆಯವರು ಇಂದು ಮನೆಯಲ್ಲೇ ಮಾಡಿದ ನೀರುದೋಸೆ ತಂದುಕೊಟ್ಟರು. ನನ್ನ ಮುಖದಲ್ಲಿ ನಗು ಮೂಡಿಸಿದರು. ಇಂತಹ ರುಚಿಯಾದ ದೋಸೆಯನ್ನು ಬಹಳ ಸಮಯದಿಂದ ತಿಂದಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

 ಮಂಗಳೂರು ನೀರುದೋಸೆ


ಅನೇಕರು ವಿರಾಟ್​ ಕೊಹ್ಲಿ ಟ್ವೀಟ್​ಗೆ ಕಾಮೆಂಟ್​ ಬರೆದಿದ್ದಾರೆ. ಇನ್ನು ಕೆಲವರು ನಮಗೂ ಮಾಡಿಕೊಡಿ ಎಂದು ಶ್ರೇಯಸ್​ ಅಯ್ಯರ್​​​ ಬಳಿ ಬೇಡಿಕೆ ಇಟ್ಟಿದ್ದಾರೆ.

ಶ್ರೇಯಸ್​ ಅಯ್ಯರ್​ ಅವರ ತಂದೆ ಸುರೇಶ್​ ಅಯ್ಯರ್​​ ಕೇರಳ ಮೂಲದವರಾಗಿದ್ದು, ಮುಂಬೈನಲ್ಲಿ ಉದ್ಯಮಿಯಾಗಿದ್ದಾರೆ. ಅವರ ತಾಯಿ ರೋಹಿಣಿ ಅಯ್ಯರ್​​ ಮಂಗಳೂರು ತುಳುವರಾಗಿದ್ದಾರೆ. ಶ್ರೇಯಸ್​ ಅಯ್ಯರ್​ ಮುಂಬೈನಲ್ಲಿ ಹುಟ್ಟಿ ಅಲ್ಲಿಯೇ ಕ್ರಿಕೆಟ್​ ಅಭ್ಯಾಸ ಮಾಡಿ ಇಂದು ಟೀಂ ಇಂಡಿಯಾದಲ್ಲಿ ಒಂದು ಭಾಗವಾಗಿದ್ದಾರೆ.Published by: Harshith AS
First published: July 8, 2020, 4:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading