ICC T20 Ranking: ಐಸಿಸಿ T-20 ರ‍್ಯಾಂಕಿಂಗ್​​ನಲ್ಲಿ ಟಾಪ್ 10ನಿಂದ ಹೊರ ಬಿದ್ದ ಕೊಹ್ಲಿ & ರೋಹಿತ್

Virat Kohli: ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಪ್ರಕಟಿರುವ ಟಿ20 ರ‍್ಯಾಂಕಿಂಗ್‌ನಲ್ಲಿ ಭಾರಿ ಪ್ರಗತಿ ಸಾಧಿಸಿದ್ದಾರೆ. ಸದ್ಯ ಅವರು 27 ಸ್ಥಾನಗಳ ಏರಿಕೆ ದಾಖಿಸಿದ್ದು, 18ನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ರೋಹಿತ್

ಕೊಹ್ಲಿ ರೋಹಿತ್

 • Share this:
  ಹಲವು ತಿಂಗಳಿನಿಂದ ಟಿ-ಟ್ವೆಂಟಿ(T-20) ಪಂದ್ಯದಲ್ಲಿ(Match) ಬ್ಯಾಟಿಂಗ್(Batting) ವೈಫಲ್ಯ ಅನುಭವಿಸುತ್ತಿರುವ ಭಾರತ (India)ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ಹಾಗೂ ಹಾಲಿ ನಾಯಕ ರೋಹಿತ್ ಶರ್ಮಾಗೆ (Rohit Sharma)ಭಾರಿ ಹಿನ್ನಡೆ ಉಂಟಾಗಿದೆ. ಭಾರತ ಹಾಗೂ ಶ್ರೀಲಂಕಾ(Sri Lanka) ನಡುವಿನ ಟಿ20 ಪಂದ್ಯದ ಬಳಿಕ ಐಸಿಸಿ(ICC) ನೂತನ ರ್ಯಾಂಕಿಂಗ್‌(Ranking) ಪಟ್ಟಿ ಬಿಡುಗಡೆಯಾಗಿದ್ದು, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾರೀ ಕುಸಿತ ಕಂಡಿದ್ದಾರೆ..ಅಲ್ಲದೆ ಈ ಇಬ್ಬರು ದಿಗ್ಗಜ ಆಟಗಾರರು ರ್ಯಾಂಕಿಂಗ್‌  ಟಾಪ್ 10 ನಿಂದ ಹೊರಬಿದ್ದಿದ್ದಾರೆ

  10ನೇ ಸ್ಥಾನದಿಂದ 15ನೇ ಸ್ಥಾನಕ್ಕೆ ಕುಸಿದ ಕಿಂಗ್ ಕೊಹ್ಲಿ

  ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ20 ಅಂತರಾಷ್ಟ್ರೀಯ ಸರಣಿಯ ಮುಕ್ತಾಯದ ನಂತರ 10 ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ, ಸರಣಿಯ ಅಂತಿಮ ಪಂದ್ಯ ಮತ್ತು ಶ್ರೀಲಂಕಾ ವಿರುದ್ಧದ ಸಂಪೂರ್ಣ ಟಿ20 ಸರಣಿಯಲ್ಲಿ ವಿಶ್ರಾಂತಿ ಪಡೆದರು. ಗಮನಾರ್ಹವೆಂದರೆ, ವೆಸ್ಟ್ ಇಂಡೀಸ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಫಿಫ್ಟಿ ಬಾರಿಸಿದಾಗ ಕೊಹ್ಲಿ ಫಾರ್ಮ್‌ಗೆ ಮರಳುವ ಲಕ್ಷಣಗಳನ್ನು ತೋರಿಸಿದ್ದರು. ಆದ್ರೆ ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದಷ್ಟೇ ಅಲ್ಲದೆ ಲಂಕಾ ವಿರುದ್ಧವೂ ವಿಶ್ರಾಂತಿ ಪಡೆದಿದ್ರು. ಹೀಗಾಗಿ ವಿರಾಟ್ ಕೊಹ್ಲಿ ಹತ್ತನೇ ಸ್ಥಾನದಿಂದ 15ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

  ಇದನ್ನೂ ಓದಿ: ವಿರಾಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಅಭಿಮಾನಿಗಳ ಸಮ್ಮುಖದಲ್ಲಿ 100ನೇ ಟೆಸ್ಟ್ ಪಂದ್ಯ

  13ನೇ ಸ್ಥಾನದಲ್ಲಿ ರೋಹಿತ್ ಶರ್ಮಾ

  ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಲಕ್ನೋ ಮತ್ತು ಧರ್ಮಶಾಲಾದಲ್ಲಿ ಪ್ರವಾಸಿ ಲಂಕಾದ ವಿರುದ್ಧ ಹೇಳಿಕೊಳ್ಳುವಂತಹ ಆಟವನ್ನು ಏನು ಆಡಲಿಲ್ಲ. ಹೀಗಾಗಿ 2 ಸ್ಥಾನಗಳನ್ನು ಕಳೆದುಕೊಂಡು 13 ನೇ ಸ್ಥಾನಕ್ಕೆ ಕುಸಿದಿದ್ದಾರೆ.

  ಟಾಪ್ 10ನಲ್ಲಿ ಕೆಎಲ್ ರಾಹುಲ್

  ಟಾಪ್ 10ನಲ್ಲಿರುವ ಏಕೈಕ ಭಾರತೀಯ ಕೆ.ಎಲ್ ರಾಹುಲ್ಗಾಯಗೊಂಡು ಶ್ರೀಲಂಕಾ ಸರಣಿಯನ್ನು ಸಹ ಕಳೆದುಕೊಂಡಿರುವ ಕೆ.ಎಲ್ ರಾಹುಲ್ ಅವರು ಅಗ್ರ 10 ರಲ್ಲಿ ಏಕೈಕ ಭಾರತೀಯ ಆಟಗಾರರಾಗಿದ್ದಾರೆ. ಶ್ರೀಲಂಕಾದ ಪಾಥುಮ್ ನಿಸ್ಸಾಂಕಾ ಸರಣಿಯ ಎರಡನೇ ಪಂದ್ಯದಲ್ಲಿ 75 ರನ್ ಗಳಿಸಿದರು ಮತ್ತು ಅವರು ಆರು ಸ್ಥಾನಗಳ ಏರಿಕೆಯೊಂದಿಗೆ ಒಂಬತ್ತನೇ ಸ್ಥಾನಕ್ಕೆ ತಲುಪಿದ್ದಾರೆ.

  ಬಡ್ತಿ ಪಡೆದ ಶ್ರೇಯಸ್‌ ಅಯ್ಯರ್..

  ಶ್ರೀಲಂಕಾ ಎದುರು ತವರಿನಲ್ಲಿ ನಡೆದ ಸರಣಿಯಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ಶ್ರೇಯಸ್‌ ಪ್ರಗತಿ ಸಾಧಿಸಿದ್ದಾರೆ. 27 ವರ್ಷದ ಆಟಗಾರ ಮೂರು ಪಂದ್ಯಗಳಲ್ಲಿ 174ರ ಸರಾಸರಿಯಲ್ಲಿ 204 ರನ್‌ ಕಲೆಹಾಕಿದ್ದರು. ಅದರಲ್ಲಿ ಮೂರು ಅಜೇಯ ಅರ್ಧಶತಕಗಳಿದ್ದವು. ಹೀಗಾಗಿ ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಪ್ರಕಟಿರುವ ಟಿ20 ರ‍್ಯಾಂಕಿಂಗ್‌ನಲ್ಲಿ ಭಾರಿ ಪ್ರಗತಿ ಸಾಧಿಸಿದ್ದಾರೆ. ಸದ್ಯ ಅವರು 27 ಸ್ಥಾನಗಳ ಏರಿಕೆ ದಾಖಿಸಿದ್ದು, 18ನೇ ಸ್ಥಾನದಲ್ಲಿದ್ದಾರೆ.

  ಇದನ್ನೂ ಓದಿ:: ಐಪಿಎಲ್ ಆರಂಭಕ್ಕೂ ಮುನ್ನವೇ ಗುಜರಾತ್ ಗೆ ಬಿಗ್ ಶಾಕ್ : ಕೈ ಕೊಟ್ಟ ಇಂಗ್ಲೆಂಡ್ ಆಟಗಾರ

  ಜಿಗಿತ ಕಂಡ ಭುವನೇಶ್ವರ್ ಕುಮಾರ್

  ಭುವನೇಶ್ವರ್ ಕುಮಾರ್ ಬೌಲರ್‌ಗಳಲ್ಲಿ ಮೂರು ಸ್ಥಾನ ಮೇಲಕ್ಕೆ ಜಿಗಿದಿದ್ದಾರೆ. ಇದೀಗ ಅವರು 17ನೇ ಸ್ಥಾನದಲ್ಲಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ಶ್ರೀಲಂಕಾದ ಪಾತುಮ್ ನಿಸಂಕಾ 75 ರನ್ ಗಳಿಸಿದ್ದರು. ಇದರಿಂದಾಗಿ ಆರು ಸ್ಥಾನ ಮೇಲೇರಿ ಒಂಬತ್ತನೇ ಸ್ಥಾನಕ್ಕೆ ಬಂದಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಮೊಹಮ್ಮದ್ ವಾಸಿಮ್ ಕೂಡ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೇಯಾಂಕ ಹೆಚ್ಚಿಸಿಕೊಂಡಿದ್ದಾರೆ. ಅವರಿಗೆ ಐಸಿಸಿ ಪುರುಷರ T20 ವಿಶ್ವಕಪ್ ಕ್ವಾಲಿಫೈಯರ್ A ನ ಫೈನಲ್‌ನಲ್ಲಿ ಐರ್ಲೆಂಡ್ ವಿರುದ್ಧ ಅಜೇಯ ಶತಕವು 12 ನೇ ಸ್ಥಾನವನ್ನು ತಲುಪಲು ಸಹಾಯ ಮಾಡಿತು. ಇದು ಯಾವುದೇ ಯುಎಇ ಬ್ಯಾಟ್ಸ್‌ಮನ್‌ನ ಅತ್ಯುತ್ತಮ ಶ್ರೇಯಾಂಕವಾಗಿದೆ, ಇದಕ್ಕೂ ಮೊದಲು ಶೈಮನ್ ಅನ್ವರ್ 2017 ರಲ್ಲಿ 13 ನೇ ಸ್ಥಾನ ಗಳಿಸಿದ್ದರು.
  Published by:ranjumbkgowda1 ranjumbkgowda1
  First published: