ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿ ದಶಕ: ಟೀಮ್ ಇಂಡಿಯಾ ನಾಯಕನ ವೃತ್ತಿಜೀವನದ 10 ಪ್ರಮುಖ ವಿಷಯಗಳು

2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅವರು ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಅರ್ಧಶತಕವನ್ನು ಗಳಿಸಿದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಅವರಿದ್ದ ತಂಡದಲ್ಲಿ ಕೊಹ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 52 ರನ್ ಗಳಿಸಿದರು.

Virat Kohli

Virat Kohli

 • Share this:
  ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ಟೆಸ್ಟ್ ಕ್ರಿಕೆಟ್‌ನಲ್ಲಿ 10 ವರ್ಷಗಳನ್ನು ಪೂರೈಸಿದ್ದಾರೆ. ಜೂನ್ 20, 2011 ರಂದು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಚೊಚ್ಚಲ ಪಂದ್ಯವಾಡುವ ಮೂಲಕ ಕೊಹ್ಲಿ ಟೆಸ್ಟ್​ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ್ದರು. ದಶಕಗಳ ಕಾಲ ಟೀಮ್ ಇಂಡಿಯಾ ಟೆಸ್ಟ್​ ತಂಡದ ಖಾಯಂ ಸದಸ್ಯರಾಗಿರುವ ಕೊಹ್ಲಿಯ 10 ಸಾಧನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  ಭಾರತದ ಪರ 91 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 7490 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಅತ್ಯುತ್ತಮ ಪ್ರದರ್ಶನದ ಅಜೇಯ 254 ರನ್ ಸೇರಿದೆ. ಹಾಗೆಯೇ ಈ ವೇಳೆ 27 ಶತಕಗಳು ಮತ್ತು 25 ಅರ್ಧಶತಕಗಳನ್ನು ಬಾರಿಸಿದ್ದಾರೆ.

  ಐಸಿಸಿ ಈವೆಂಟ್‌ಗಳಾದ ಟಿ 20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಆಡಿದ ಆಟಗಾರ ವಿರಾಟ್ ಕೊಹ್ಲಿ.

  2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅವರು ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಅರ್ಧಶತಕವನ್ನು ಗಳಿಸಿದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಅವರಿದ್ದ ತಂಡದಲ್ಲಿ ಕೊಹ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 52 ರನ್ ಗಳಿಸಿದರು.

  ಸತತ ಎರಡು ಅರ್ಧಶತಕಗಳನ್ನು ಗಳಿಸುವ ಮೂಲಕ ಪಂದ್ಯವನ್ನು ಸೆಳೆಯುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದರು.

  ಮೊದಲ ಟೆಸ್ಟ್ ಶತಕಕ್ಕಾಗಿ ಕೊಹ್ಲಿ ಹೆಚ್ಚು ಹೊತ್ತು ಕಾಯಬೇಕಾಗಿ ಬರಲಿಲ್ಲ. ತಮ್ಮ 8 ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಬಾರಿಸಿ ಮಿಂಚಿದರು.

  ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಭಾರತದ ಆರನೇ ಆಟಗಾರ ಕೊಹ್ಲಿ. ಅಲ್ಲದೆ ನಾಯಕನಾಗಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಕ್ಯಾಪ್ಟನ್ ಆಗಿ 61 ಟೆಸ್ಟ್ ಪಂದ್ಯಗಳಲ್ಲಿ 5 ಸಾವಿರ 392 ರನ್ ಗಳಿಸಿದ್ದಾರೆ. ಇದರಲ್ಲಿ 20 ಶತಕಗಳು ಸೇರಿವೆ.

  ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ನಾಲ್ಕನೇ ಭಾರತೀಯ. ಕೊಹ್ಲಿ ಹೆಸರಿನಲ್ಲಿ 27 ಟೆಸ್ಟ್ ಶತಕಗಳಿವೆ. ಸಚಿನ್ ತೆಂಡೂಲ್ಕರ್ 51, ರಾಹುಲ್ ದ್ರಾವಿಡ್ 36 ಮತ್ತು ಸುನಿಲ್ ಗವಾಸ್ಕರ್ 34 ಶತಕಗಳೊಂದಿಗೆ ಮುಂದಿದ್ದಾರೆ. ಹಾಗೆಯೇ ಟೆಸ್ಟ್​ ಕ್ರಿಕೆಟ್​ನಲ್ಲಿ ಕೊಹ್ಲಿ ಈವರೆಗೆ 7 ಡಬಲ್ ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ.

  ಕ್ಯಾಲೆಂಡರ್ ವರ್ಷದಲ್ಲಿ ಎರಡು ಬಾರಿ ಹೆಚ್ಚು ಟೆಸ್ಟ್ ರನ್ ಗಳಿಸಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ. ಅವರು 2018 ರಲ್ಲಿ 1322 ರನ್ ಮತ್ತು 2016 ರಲ್ಲಿ 1215 ರನ್ ಗಳಿಸಿದ್ದಾರೆ.

  ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ. 61 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ಕೊಹ್ಲಿ 34 ಪಂದ್ಯಗಳನ್ನು ಗೆಲ್ಲಿಸಿದ್ದಾರೆ.

  ಟಾಸ್ ವಿಷಯದಲ್ಲಿ ದುರಾದೃಷ್ಟ ಹೊಂದಿರುವ ಕೊಹ್ಲಿ ನಾಲ್ಕು ಸರಣಿಗಳಲ್ಲಿ ಟಾಸ್ ಗೆದ್ದಿದ್ದಾರೆ. ದಕ್ಷಿಣ ಆಫ್ರಿಕಾ (2016-17 ಮತ್ತು 2019-20), ಶ್ರೀಲಂಕಾ (2017), ಮತ್ತು ನ್ಯೂಜಿಲೆಂಡ್ (2016-17) ವಿರುದ್ಧದ ಸರಣಿಯಲ್ಲಿ ಎರಡು ಬಾರಿ ಎಲ್ಲಾ ಟಾಸ್ ಗೆದ್ದಿದ್ದಾರೆ.
  Published by:zahir
  First published: