IND vs WI Test Match: ಧೋನಿ ದಾಖಲೆ ಮುರಿದು ನೂತನ ಸಾಧನೆಯ ಹೊಸ್ತಿಲಲ್ಲಿ ಕೊಹ್ಲಿ

ವಿಂಡೀಸ್ ವಿರುದ್ಧದ ಟೆಸ್ಟ್​ ಪಂದ್ಯಗಳಲ್ಲಿ ಕೊಹ್ಲಿ 6 ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಎರಡೂ ಟೆಸ್ಟ್​ ಗೆದ್ದರೆ ಕೆರಿಬಿಯನ್ನರ ವಿರುದ್ಧ ಗರಿಷ್ಠ ಟೆಸ್ಟ್​ ಪಂದ್ಯ ಗೆದ್ದ ಭಾರತದ ನಾಯಕ ಕೊಹ್ಲಿ ಆಗಲಿದ್ದಾರೆ.

Vinay Bhat | news18
Updated:August 21, 2019, 9:45 AM IST
IND vs WI Test Match: ಧೋನಿ ದಾಖಲೆ ಮುರಿದು ನೂತನ ಸಾಧನೆಯ ಹೊಸ್ತಿಲಲ್ಲಿ ಕೊಹ್ಲಿ
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
Vinay Bhat | news18
Updated: August 21, 2019, 9:45 AM IST
ಬೆಂಗಳೂರು (ಆ. 21): ನಾಳೆಯಿಂದ ಭಾರತ ಹಾಗೂ ವೆಸ್ಟ್​ ಇಂಡೀಸ್ ನಡುವೆ ಮೊದಲ ಟೆಸ್ಟ್​ ಪಂದ್ಯ ಪ್ರಾರಂಭವಾಗಲಿದೆ. ಈಗಾಗಲೇ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಟೀಂ ಇಂಡಿಯಾ ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ್ದರು. ಇದೇ ಪ್ರದರ್ಶನವನ್ನು ಮೊದಲ ಟೆಸ್ಟ್​​ನಲ್ಲೂ ಮುಂದುವರೆಸುವ ವಿಶ್ವಾಸದಲ್ಲಿದೆ.

ನಾಯಕ ವಿರಾಟ್ ಕೊಹ್ಲಿ ಇಂಜುರಿಯಿಂದ ಗುಣಮುಖರಾಗಿದ್ದು ಮೊದಲ ಟೆಸ್ಟ್​ನಲ್ಲಿ ಕಣಕ್ಕಿಳಿಯುವುದು ಪಕ್ಕ ಆಗಿದೆ. ಇದರ ಮೂಲಕ ವಿಂಡೀಸ್ ವಿರುದ್ಧ ಕೊಹ್ಲಿ ಹೊಸ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ.

Virat Kohli close to equalling MS Dhoni's Test captaincy record
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)


ಶ್ರೀಶಾಂತ್ ಮೇಲಿನ ನಿಷೇಧ ಶಿಕ್ಷೆ ಕಡಿತ: ಮುಂದಿನ ವರ್ಷದಿಂದ ಕ್ರಿಕೆಟ್ ಆಡಲು ಅವಕಾಶ

ಟೆಸ್ಟ್​ ಕ್ರಿಕೆಟ್ ಅನ್ನು ಆಳುತ್ತಿರುವ ನಂಬರ್ 1 ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ವೆಸ್ಟ್​ ಇಂಡೀಸ್ ವಿರುದ್ಧ ಟೆಸ್ಟ್​ ಪಂದ್ಯಗಳಲ್ಲಿ ಈವರೆಗೆ 15 ಇನ್ನಿಂಗ್ಸ್​ನಲ್ಲಿ 45.73 ಸರಾಸರಿಯೊಂದಿಗೆ 686 ರನ್ ಬಾರಿಸಿದ್ದಾರೆ. ವಿಂಡೀಸ್ ವಿರುದ್ಧದ ಎರಡು ಟೆಸ್ಟ್​ ಪಂದ್ಯಗಳಲ್ಲಿ ಕೊಹ್ಲಿ ಒಟ್ಟು 314 ರನ್ ಕಲೆಹಾಕಿದರೆ ಕೆರಿಬಿಯನ್ನರ ವಿರುದ್ಧ 1 ಸಾವಿರ ರನ್​ ಗಡಿ ದಾಟಿದ ಭಾರತದ 11ನೇ ಆಟಗಾರ ಆಗಲಿದ್ದಾರೆ.

ಇಷ್ಟೇ ಅಲ್ಲದೆ ವಿಂಡೀಸ್ ವಿರುದ್ಧದ ಟೆಸ್ಟ್​ ಪಂದ್ಯಗಳಲ್ಲಿ ಕೊಹ್ಲಿ 6 ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ನಾಲ್ಕು ಪಂದ್ಯ ಗೆದ್ದರೆ ಎರಡು ಪಂದ್ಯ ಡ್ರಾ ಆಗಿದೆ. ವಿಂಡೀಸ್ ವಿರುದ್ಧ ಭಾರತ ಎರಡು ಟೆಸ್ಟ್​ ಪಂದ್ಯವನ್ನು ಆಡಲಿದೆ. ಈ ಎರಡೂ ಟೆಸ್ಟ್​ ಗೆದ್ದರೆ ಕೆರಿಬಿಯನ್ನರ ವಿರುದ್ಧ ಗರಿಷ್ಠ ಟೆಸ್ಟ್​ ಪಂದ್ಯ ಗೆದ್ದ ಭಾರತದ ನಾಯಕ ಕೊಹ್ಲಿ ಆಗಲಿದ್ದಾರೆ. ಸದ್ಯ ಎಂ ಎಸ್ ಧೋನಿ 8 ಟೆಸ್ಟ್​ನಲ್ಲಿ 5 ಪಂದ್ಯ ಗೆದ್ದಿದ್ದಾರೆ. ಮೂರು ಪಂದ್ಯ ಡ್ರಾ ಆಗಿದೆ. ಈ ಮೂಲಕ ಕೆರಿಬಿಯನ್ನರ ನಾಡಲ್ಲಿ ಕೊಹ್ಲಿಯಿಂದ ಮತ್ತಷ್ಟು ಹೊಸ ದಾಖಲೆಗಳು ಸೃಷ್ಟಿಯಾಗಲಿವೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
Loading...

First published:August 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...