ರೋಹಿತ್ ಜೊತೆ ಮುನಿಸು ಇಲ್ಲ ಅಂತ ನಂಗೂ ಹೇಳಿ ಹೇಳಿ ಸಾಕಾಗಿದೆ: ವಿರಾಟ್ ಕೊಹ್ಲಿ

Virat Kohli Speaks: ಟಿ20 ಮತ್ತು ಓಡಿಐನಲ್ಲಿ ಕ್ಯಾಪ್ಟನ್ ಆಗಿಲ್ಲದೇ ಇರುವುದರಿಂದ ತನ್ನ ಉತ್ಸಾಹ ತಗ್ಗಿಲ್ಲ. ತಂಡಕ್ಕಾಗಿ ಆಡುವ ಹುಮ್ಮಸ್ಸು ಹೆಚ್ಚಿದೆ. ವೈಯಕ್ತಿಕವಾಗಿ ಆಟಗಾರ ಬಹಳಷ್ಟು ಕೊಡುಗೆ ನೀಡಬಹುದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಮುಂಬೈ, ಡಿ. 15: ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ಮುಂದುವರಿಯುತ್ತೇನೆಂದು ಕೆಲ ತಿಂಗಳ ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದ ವಿರಾಟ್ ಕೊಹ್ಲಿ (Virat Kohli) ಅವರಿಂದ ದಿಢೀರನೇ ಕ್ಯಾಪ್ಟನ್ಸಿ ಹಿಂಪಡೆದು ರೋಹಿತ್ ಶರ್ಮಾಗೆ ನೀಡಲಾಗಿದೆ. ವಿರಾಟ್ ಕೊಹ್ಲಿಗೆ ಬಿಸಿಸಿಐ (BCCI) ಮೊದಲೇ ಮಾತನಾಡಿ ನಾಯಕತ್ವ ಹಿಂಪಡೆಯುವಂತೆ ಸೂಚಿಸಲಾಗಿತ್ತು ಎಂಬಂತಹ ಸುದ್ದಿ ಕೆಲ ದಿನಗಳಿಂದ ಕೇಳಿಬರುತ್ತಿದೆ. ಆದರೆ, ವಿರಾಟ್ ಕೊಹ್ಲಿ ಈ ಸುದ್ದಿಗಳನ್ನ ಅಲ್ಲಗಳೆದಿದ್ದಾರೆ. ಏಕದಿನ ತಂಡದ ನಾಯಕತ್ವ (ODI team captaincy) ಬಿಡುವ ವಿಚಾರದಲ್ಲಿ ತನ್ನೊಂದಿಗೆ ಯಾರೂ ಮುಂಚಿತವಾಗಿ ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಅವರು ಮಾತನಾಡುತ್ತಾ ಹಲವು ವಿಚಾರಗಳ ಬಗ್ಗೆ ನೇರ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.

“ಟೆಸ್ಟ್ ತಂಡದ ಆಯ್ಕೆಗೆ ಒಂದೂವರೆ ತಾಸು ಮೊದಲು ಆಯ್ಕೆಗಾರರು ನನ್ನನ್ನು ಸಂಪರ್ಕಿಸಿದರು. ಅದಕ್ಕೂ ಮುನ್ನ ನಮ್ಮ ಮಧ್ಯೆ ಯಾವ ಮಾತುಕತೆಯೂ ನಡೆದಿಲ್ಲ. ಮುಖ್ಯ ಅಯ್ಕೆಗಾರರು ಟೆಸ್ಟ್ ತಂಡದ ಬಗ್ಗೆ ಚರ್ಚೆ ನಡೆಸಿದರು. ಕೊನೆಯಲ್ಲಿ, ನಾನು ಏಕದಿನ ತಂಡಕ್ಕೆ ಕ್ಯಾಪ್ಟನ್ ಆಗಿರುವುದಿಲ್ಲ ಎಂದು ತಿಳಿಸಿದರು. ಪರವಾಗಿಲ್ಲ ಎಂದು ನಾನು ಹೇಳಿದೆ. ಅದಕ್ಕಿಂತ ಮುಂಚೆ ಯಾರೂ ನನ್ನೊಂದಿಗೆ ಮಾತನಾಡಿಲ್ಲ” ಎಂದು ವಿರಾಟ್ ಕೊಹ್ಲಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಓಡಿಐ ಕ್ಯಾಪ್ಟನ್ಸಿ ಹೋಗಿದ್ದು ಯಾವ ಕಾರಣಕ್ಕೆ?

ವಿರಾಟ್ ಕೊಹ್ಲಿ ಅವರಿಂದ ಓಡಿಐ ಕ್ಯಾಪ್ಟನ್ಸಿ ಯಾಕೆ ಹಿಂಪಡೆಯಲಾಯಿತು ಎಂಬ ಪ್ರಶ್ನೆಗೆ ನಿಖರ ಕಾರಣಗಳು ಬಹಿರಂಗಗೊಂಡಿಲ್ಲ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಮ್ಮೆಯೂ ಐಸಿಸಿ ಟ್ರೋಫಿಗಳನ್ನ ಗೆದ್ದಿಲ್ಲ ಎಂಬ ಕಾರಣಕ್ಕೆ ನಾಯಕತ್ವದಿಂದ ಕೆಳಗಿಳಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ವಿರಾಟ್ ಕೊಹ್ಲಿ ಇಂದು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಸುದ್ದಿಗೆ ಪೂರಕವಾಗಿ ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ: ಕೊಹ್ಲಿ ಅಲ್ಲ, ರೋಹಿತ್ ಅಲ್ಲ, ನಟ ಅಕ್ಷಯ್ ಕುಮಾರ್​ಗೆ ಇಷ್ಟವಾದ ಇಬ್ಬರು ಕ್ರಿಕೆಟಿಗರು ಇವರು

“ನಾವು ಐಸಿಸಿ ಟೂರ್ನಿ ಗೆದ್ದಿಲ್ಲ ಎಂಬುದು ಸ್ಪಷ್ಟ ಕಾರಣ. ಅವರು ಈ ನಿರ್ಧಾರ ತೆಗೆದುಕೊಳ್ಳುವುದರ ಹಿಂದಿನ ತರ್ಕವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ” ಎಂದು ನಯವಾಗಿಯೇ ಕೊಹ್ಲಿ ಉತ್ತರಿಸಿದ್ದಾರೆ.

ರೋಹಿತ್ ಜೊತೆಗಿನ ಸಂಬಂಧ:

ನನ್ನ ಮತ್ತು ರೋಹಿತ್ ಮಧ್ಯೆ ಯಾವ ಸಮಸ್ಯೆಯೂ ಇಲ್ಲ. ಈ ವಿಚಾರವನ್ನು ಕಳೆದ 2-3 ವರ್ಷಗಳಿಂದಲೂ ಹೇಳುತ್ತಲೇ ಬಂದಿದ್ಧೇನೆ. ಈಗಲೂ ಅದರ ಬಗ್ಗೆ ಮಾತನಾಡಬೇಕೆಂದರೆ ಹೇಗೆ ಎಂದು ಕೊಹ್ಲಿ ಹೇಳಿದ್ಧಾರೆ.

“ರೋಹಿತ್ ಬಹಳ ಸಮರ್ಥ ನಾಯಕ. ತಾಂತ್ರಿಕವಾಗಿ ಬಲಿಷ್ಠವಾಗಿದ್ದಾರೆ. ಹಿಂದೆ ಅವರು ಕ್ಯಾಪ್ಟನ್ ಆಗಿ ನಿರ್ವಹಿಸಿದ ರೀತಿ ನೋಡಿದ್ದೇವೆ. ಟಿ20 ಮತ್ತು ಓಡಿಐನಲ್ಲಿ ತಂಡದ ಉನ್ನತಿಗೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ” ಎಂದು ಕೊಹ್ಲಿ ಸ್ಪಷ್ಟಪಡಿಸಿದ್ಧಾರೆ.

ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಗುರಿ:

ದಕ್ಷಿಣ ಆಫ್ರಿಕಾದಲ್ಲಿ ಭಾರತ ಎಂದಿಗೂ ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ, ನಮ್ಮ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ಈ ಸವಾಲನ್ನು ಎದುರಿಸಲು ನಮ್ಮ ಕೈಮೀರಿದ ಪ್ರಯತ್ನವನ್ನಂತೂ ಹಾಕುತ್ತೇವೆ. ದಕ್ಷಿಣ ಆಫ್ರಿಕಾದಲ್ಲಿ ಆಡುವುದು ಕ್ಲಿಷ್ಟಕರ ಸವಾಲು. ನೀವು ಅತ್ಯುತ್ತಮವಾಗಿ ಆಡಬೇಕಾಗುತ್ತದೆ. ಇಂಥ ಸಂದರ್ಭಗಳನ್ನ ಎದುರಿಸಿದ ಅನುಭವ ನಮಗೆ ಇದೆ. ಈ ಬಾರಿಯೂ ನಾನು ಸಾಧಿಸಿ ತೋರಿಸುತ್ತೇವೆ ಎಂದು ಟೆಸ್ಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ಧಾರೆ.

ಇದನ್ನೂ ಓದಿ: Nivethan: ನಿವೇದನ್ ರಾಧಾಕೃಷ್ಣನ್, ಆಸ್ಟ್ರೇಲಿಯಾದ ಹೊಸ ಬೌಲಿಂಗ್ ಸೆನ್ಸೇಷನ್; ಒಂದು ಕಿರುಪರಿಚಯ

ಕ್ಯಾಪ್ಟನ್ಸಿ ಇಲ್ಲದಿರುವುದು ನಿರಾಸೆ ಮೂಡಿಸಿದೆಯೇ?:

ಟಿ20 ಮತ್ತು ಏಕದಿನ ಕ್ರಿಕೆಟ್ ತಂಡಗಳಲ್ಲಿ ನಾಯಕನ ಸ್ಥಾನದ ಬದಲು ಅಟಗಾರನಾಗಿ ಅಡಲಿರುವುದು ತಮ್ಮ ಉತ್ಸಾಹ ಕುಗ್ಗಿಸುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಯನ್ನ ವಿರಾಟ್ ಕೊಹ್ಲಿ ತಳ್ಳಿಹಾಕಿದ್ಧಾರೆ.

“ಭಾರತಕ್ಕಾಗಿ ಆಡುವ ನನ್ನ ಅದಮ್ಯ ಆಸೆ ಮಣ್ಣುಪಾಲಾಗುವುದಕ್ಕೆ ಬಿಡುವುದಿಲ್ಲ. ನೀವು ವೈಯಕ್ತಿಕವಾಗಿ ಬಹಳಷ್ಟು ಸಾಧಿಸಬಹುದು. ಅದಕ್ಕೆ ಸರಿಯಾದ ಯೋಚನೆ ಅಗತ್ಯ. ತಂಡಕ್ಕಾಗಿ ಆಡುವ ನನ್ನ ಉತ್ಸಾಹ ಕುಗ್ಗುವುದಿಲ್ಲ. ಕ್ಯಾಪ್ಟನ್ ಆಗಿ ನಾನು ಪ್ರಾಮಾಣಿಕವಾಗಿ ಜವಾಬ್ದಾರಿ ನಿಭಾಯಿಸಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಸುದೀರ್ಘ ಕಾಲ ಬ್ಯಾಟಿಂಗ್ ಮಾಡುತ್ತಾ ಬಂದಿರುವಾಗ ಹೇಗೆ ಆಡಬೇಕೆಂದು ಖಂಡಿತ ಗೊತ್ತಿರುತ್ತದೆ” ಎಂದು ಕೊಹ್ಲಿ ತಿಳಿಸಿದ್ದಾರೆ.
Published by:Vijayasarthy SN
First published: