• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Virat Kohli: ಫೀಲ್ಡಿಂಗ್ ಮಾಡುತ್ತಲೇ ಸ್ನ್ಯಾಕ್ಸ್ ತಿಂದು ಸಿಕ್ಕಿಬಿದ್ದ ವಿರಾಟ್! ವೈರಲ್ ಆದ ವಿಡಿಯೋದಲ್ಲಿ ಏನಿದೆ?

Virat Kohli: ಫೀಲ್ಡಿಂಗ್ ಮಾಡುತ್ತಲೇ ಸ್ನ್ಯಾಕ್ಸ್ ತಿಂದು ಸಿಕ್ಕಿಬಿದ್ದ ವಿರಾಟ್! ವೈರಲ್ ಆದ ವಿಡಿಯೋದಲ್ಲಿ ಏನಿದೆ?

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಕಟ್ಟುನಿಟ್ಟಿನ ನಿಯಮಿತ ವರ್ಕೌಟ್ (Work Out) ಮಾಡುವ ಕೊಹ್ಲಿ ಡಯೆಟ್ ( Diet) ವಿಚಾರದಲ್ಲೂ ಶಿಸ್ತನ್ನು ಕಾಪಾಡಿಕೊಳ್ಳುವವರು. ಹಾಗೆಯೇ ಏನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬುದರ ಬಗ್ಗೆ ಹೆಚ್ಚು ಕಾಳಜಿಯುಳ್ಳ ಕ್ರೀಡಾಪಟು ಕೂಡ ಹೌದು. ಆದರೆ ಅಹಮದಾಬಾದ್​ ಟೆಸ್ಟ್​ ವೇಳೆ ಮೈದಾನದಲ್ಲೇ ಎನರ್ಜಿ ಬಾರ್​ ತಿನ್ನುವ ವಿಡಿಯೋ ವೈರಲ್ ಆಗುತ್ತಿದೆ.

ಮುಂದೆ ಓದಿ ...
  • Share this:

ಟೀಮ್ ಇಂಡಿಯಾ (Team India) ಆಟಗಾರ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಫಿಟ್‌ನೆಸ್ ಫ್ರೀಕ್ ಎಂದೇ ಹೆಸರುವಾಸಿಯಾದವರು. ಕಟ್ಟುನಿಟ್ಟಿನ   ವರ್ಕೌಟ್ (Work Out) ಮಾಡುವ ಕೊಹ್ಲಿ ಡಯೆಟ್ ( Diet) ವಿಚಾರದಲ್ಲೂ ಶಿಸ್ತನ್ನು ಕಾಪಾಡಿಕೊಳ್ಳುತ್ತಾರೆ. ಹಾಗೆಯೇ ಏನು ತಿನ್ನಬೇಕು ಏನನ್ನು ತಿನ್ನಬಾರದು ಎಂಬುದರ ಬಗ್ಗೆ ಹೆಚ್ಚು ಕಾಳಜಿಯುಳ್ಳ ಕ್ರೀಡಾಪಟು ಕೂಡ ಹೌದು.  ಇದನ್ನೇ ಕಿರಿಯ ಆಟಗಾರರಿಗೂ ಅನುಸರಿಸಲು ಹೇಳಿಕೊಡುತ್ತಾರೆ.  ಕ್ರೀಡಾಪಟುಗಳು ಉತ್ತಮ ದೇಹದಾರ್ಢ್ಯವನ್ನು ಹೊಂದಿರಬೇಕು ಹಾಗೂ ಆರೋಗ್ಯವಂತರಾಗಿರಬೇಕು ಎಂಬ ಕಾರಣಕ್ಕೆ ತಮ್ಮ ತಿನ್ನುವ ಚಪಲಕ್ಕೆ ಬ್ರೇಕ್ ಹಾಕಿರುವುದಾಗಿಯೇ ಸ್ಟಾರ್ ಆಟಗಾರ ಸಾಕಷ್ಟು ಬಾರಿ ಬಹಿರಂಗಪಡಿಸಿದ್ದಾರೆ. ಆದರೆ ಚೋಲೆ ಕುಲ್ಚಾ (Chole Kulcha) ಅಂದರೆ ತುಂಬಾ ಇಷ್ಟಪಡುವ ವಿರಾಟ್, ಚೀಟ್ ಮೀಲ್ ಸಮಯದಲ್ಲಿ ಇದನ್ನು ತಪ್ಪಿಸದೇ ಸೇವಿಸುತ್ತಾರೆ ಎಂದು ತಮ್ಮ ಸಂದರ್ಶನಗಳಲ್ಲಿ ತಿಳಿಸಿದ್ದಾರೆ.


ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಡ್ರೆಸ್ಸಿಂಗ್ ರೂಮ್​ನಲ್ಲಿ ಚೋಲೆ ಕುಲ್ಚಾ ನೋಡಿ ಸಂಭ್ರಮಿಸುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ವಿರಾಟ್ ತಿಂಡಿಪೋತ ಎಂಬ ಅಂಶಕ್ಕೆ ಇನ್ನಷ್ಟು ಪುಷ್ಟಿ ದೊರೆತಿತ್ತು.


ಮೈದಾನದಲ್ಲಿ ಪ್ರೊಟೀನ್ ಬಾರ್​ ತಿಂದ ಕೊಹ್ಲಿ


ಡ್ರೆಸ್ಸಿಂಗ್ ರೂಮ್‌ನಲ್ಲಿ ವಿರಾಟ್ ವ್ಯಕ್ತಪಡಿಸಿದ್ದ ಆಹಾರ ಪ್ರೇಮ ಕೇವಲ ಟೀಸರ್ ಆಗಿತ್ತು. ಆದರೆ ಭಾರತ ಹಾಗೂ ಆಸ್ಟ್ರೇಲಿಯಾದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿಗೆ ತಿನಿಸುಗಳ ಮೇಲಿನ ಪ್ರೀತಿ  ಎಷ್ಟಿದೆ ಎಂಬುದು ಅವ್ಯಕ್ತವಾಗಿ ಬಹಿರಂಗಗೊಂಡಿದೆ.


23 ನೇ ಓವರ್‌ನಲ್ಲಿ ಶಮಿ ಆಸೀಸ್​ ಸ್ಟಾರ್ ಮಾರ್ನಸ್ ಲ್ಯಾಬುಶೇನ್​ ಅವರ  ವಿಕೆಟ್​ತೆಗೆದುಕೊಳ್ಳುವ ಮೊದಲು ಕೊಹ್ಲಿ ಸ್ನ್ಯಾಕ್ಸ್ ಸೇವಿಸುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಭಾರತದ ಮಾಜಿ ನಾಯಕ ಪ್ರೊಟೀನ್ ಬಾರ್ ತಿನ್ನುತ್ತಿದ್ದರು ಎನ್ನಲಾಗಿದ್ದು, ನಂತರ ಅದನ್ನು ಜೇಬಿಗೆ ಹಾಕಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.


ಇದನ್ನೂ ಓದಿ: Team India: ವಡಾ ಪಾವ್​ನಿಂದ ಮಸಾಲೆ ದೋಸೆವರೆಗೆ, ಇವೇ ಅಂತೆ ಭಾರತೀಯ ಕ್ರಿಕೆಟಿಗರ ಇಷ್ಟದ ಫುಡ್!


ಶ್ರೇಯಸ್ ಅಯ್ಯರ್‌ ಜೊತೆ ಎನರ್ಜಿ ಬಾರ್ ಶೇರ್ ಮಾಡಿದ ಕೊಹ್ಲಿ


ಮೈದಾನದಲ್ಲಿ ಆಟದ ವೇಳೆಯಲ್ಲೇ ಕೊಹ್ಲಿ ಜೇಬಿಗೆ ಕೈ ಹಾಕಿ ಪ್ರೊಟೀನ್ ಬಾರ್‌ ತಿನ್ನುತ್ತಿರುವುದು ಕ್ಯಾಮೆರಾದಲ್ಲಿ  ಸೆರೆಯಾಗಿದೆ. ಕೊಹ್ಲಿ ತಾವು ಮಾತ್ರವೇ ಬಾರ್ ಸೇವಿಸದೇ ತಮ್ಮ ಪಕ್ಕ ನಿಂತಿದ್ದ ಸಹ ಆಟಗಾರರಾದ ಶ್ರೇಯಸ್ ಅಯ್ಯರ್‌ಗೆ ಕೂಡ ಪ್ರೊಟೀನ್ ಬಾರ್ ನೀಡಿದ್ದಾರೆ. ಕೊಹ್ಲಿ ಅಯ್ಯರ್‌ನತ್ತ ಬಾರ್​ ಎಸೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪುನಃ ಅದನ್ನು ಪಡೆದು ಜೇಬಿಗಿಳಿಸಿರುವುದು ಸೆರೆಯಾಗಿದೆ.




ರಾಷ್ಟ್ರಗೀತೆ ಹಾಡಲು ಜತೆಯಾದ ಪ್ರಧಾನಿ


ಅಹಮದಾಬಾದ್‌ನ ಟೆಸ್ಟ್ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ತಂಡದ ಆಟಗಾರರ ಜೊತೆಗೆ ರಾಷ್ಟ್ರಗೀತೆ ಹಾಡಿದರು. ಪಂದ್ಯ ಆರಂಭಕ್ಕೂ ಮುನ್ನ ಭಾರತ ತಂಡವನ್ನು ಸೇರಿಕೊಂಡ ಪ್ರಧಾನ ಮಂತ್ರಿ  ವಿರಾಟ್ ಹಾಗೂ ರೋಹಿತ್ ಶರ್ಮಾ ಪಕ್ಕ ನಿಂತು ರಾಷ್ಟ್ರಗೀತೆ ಹಾಡಿದರು. ತಂಡದ ಪ್ರತಿಯೊಬ್ಬ ಆಟಗಾರರಿಗೂ ಮೋದಿ ಹಸ್ತಲಾಘವ ಮಾಡಿದರು. ಕೊಹ್ಲಿ ಭೇಟಿಯಾದಾಗ  ನಡೆಸಿದ ಸಂವಾದ ಹೆಚ್ಚಿನ ಮೆರುಗನ್ನುಂಟು ಮಾಡಿತು.



 ಆಸ್ಟ್ರೇಲಿಯಾ ಬೃಹತ್ ಮೊತ್ತ



 ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ  4ನೇ  ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾದ ತಂಡ ಬೃಹತ್​ ಮೊತ್ತ ದಾಖಲಿಸಿದೆ. ಮೊದಲೆರಡು ಪಂದ್ಯಗಳಲ್ಲಿ ರನ್​ಗಳಿಸಲು ಪರದಾಡಿದ್ದ ಪ್ರವಾಸಿ ತಂಡ ಆರಂಭಿಕ ಆಟಗಾರ ಉಸ್ಮಾನ್ ಖವಾಜ (180)  ಹಾಗೂ ಆಲ್​ರೌಂಡರ್​ ಕ್ಯಾಮರೂನ್​ ಗ್ರೀನ್ (114)  ಅವರ ಶತಕಗಳ ನೆರವಿನಿಂದ 480 ರನ್​ಗಳಿಸಿದೆ.


ರವಿಚಂದ್ರನ್ ಅಶ್ವಿನ್​ 91ಕ್ಕೆ 6 , ಶಮಿ 2, ಅಕ್ಷರ್​ ಪಟೇಲ್ ಹಾಗೂ ಜಡೇಜಾ ತಲಾ ಒಂದು ವಿಕೆಟ್​ ಪಡೆದಿದ್ದಾರೆ. ಭಾರತ ತಂಡ ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್ ಆರಂಭಿಸಿದ್ದು 10 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 36 ರನ್​ಗಳಿಸಿದೆ.



First published: