Virat Kohli: ಪಂಟರ್ ಪಾಂಟಿಂಗ್ ವಿಶ್ವ ದಾಖಲೆ ಮುರಿಯುವ ಸನಿಹದಲ್ಲಿ ಕಿಂಗ್ ಕೊಹ್ಲಿ

Virat Kohli

Virat Kohli

ಇನ್ನು ಕಳೆದ 11 ವರ್ಷಗಳಿಂದ ಕೊಹ್ಲಿ ಶತಕದ ಸಾಧನೆಯೊಂದನ್ನು ಮಾಡುತ್ತಾ ಬಂದಿದ್ದರು. ಅಂದರೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲೂ ಕೊಹ್ಲಿ ಬ್ಯಾಟ್​ನಿಂದ ಕನಿಷ್ಠ ಒಂದು ಏಕದಿನ ಶತಕವಾದರೂ ಮೂಡಿಬಂದಿತ್ತು.

  • Share this:

ಭಾರತ-ಆಸ್ಟ್ರೇಲಿಯಾ ನಡುವಣ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್​ ಪಂದ್ಯಕ್ಕೆ ಅಡಿಲೇಡ್ ಮೈದಾನ ಸಜ್ಜಾಗಿದೆ. ಡಿಸೆಂಬರ್ 17 ರಂದು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಚಾಲನೆ ದೊರೆಯಲಿದ್ದು, ಒಟ್ಟು 4 ಟೆಸ್ಟ್ ಪಂದ್ಯಗಳು ನಡೆಯಲಿದೆ. ಆದರೆ ಮೊದಲ ಟೆಸ್ಟ್ ಪಂದ್ಯವನ್ನು ಹೊರತುಪಡಿಸಿ, ಉಳಿದ ಪಂದ್ಯಗಳಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಜನವರಿ ತಿಂಗಳಲ್ಲಿ ಕೊಹ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಹೀಗಾಗಿ ಮೊದಲ ಟೆಸ್ಟ್ ಬಳಿಕ ಕೊಹ್ಲಿ ಭಾರತಕ್ಕೆ ಹಿಂತಿರುಗಲಿದ್ದಾರೆ.


ಅತ್ತ ಮೊದಲ ಟೆಸ್ಟ್​ ಪಂದ್ಯದ ಮೂಲಕ ವಿಶ್ವ ದಾಖಲೆ ಬರೆಯುವ ಸುವರ್ಣಾವಕಾಶ ಕೊಹ್ಲಿ ಮುಂದಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಮೂಡಿಬಂದರೆ ನಾಯಕನಾಗಿ ಅತೀ ಹೆಚ್ಚು ಶತಕ ಬಾರಿಸಿದ ವಿಶ್ವ ದಾಖಲೆ ಕೊಹ್ಲಿ ಪಾಲಾಗಲಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಪಂಟರ್ ಪಾಂಟಿಂಗ್ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಾಯಕನಾಗಿ 41 ಶತಕಗಳನ್ನು ಬಾರಿಸಿದ್ರೆ, ವಿರಾಟ್ ಕೊಹ್ಲಿ ಸಹ 41 ಶತಕಗಳನ್ನು ಸಿಡಿಸಿದ್ದಾರೆ.


ಅಚ್ಚರಿಯ ಆಯ್ಕೆ: ಆಕಾಶ್ ಚೋಪ್ರಾ ಹೆಸರಿಸಿದ ದಶಕದ ಟಿ20 ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?


ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಕೊಹ್ಲಿ ಸೆಂಚುರಿ ಬಾರಿಸಿದ್ರೆ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಾಯಕನಾಗಿ ಅತೀ ಹೆಚ್ಚು ಶತಕ ಬಾರಿಸಿದ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಪಾಲಾಗಲಿದೆ. ಇನ್ನು ಕಳೆದ 11 ವರ್ಷಗಳಿಂದ ಕೊಹ್ಲಿ ಶತಕದ ಸಾಧನೆಯೊಂದನ್ನು ಮಾಡುತ್ತಾ ಬಂದಿದ್ದರು. ಅಂದರೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲೂ ಕೊಹ್ಲಿ ಬ್ಯಾಟ್​ನಿಂದ ಕನಿಷ್ಠ ಒಂದು ಏಕದಿನ ಶತಕವಾದರೂ ಮೂಡಿಬಂದಿತ್ತು. ಆದರೆ 2020ರ ಇಸವಿಯಲ್ಲಿ ಯಾವುದೇ ಶತಕ ಬಾರಿಸಿಲ್ಲ. ಇದಕ್ಕೆ ಒಂದು ಕಾರಣ ಕೊರೋನಾ ಕಾರಣದಿಂದ ಬದಲಾದ ಸರಣಿಗಳ ವೇಳಾಪಟ್ಟಿ ಎನ್ನಬಹುದು.


ಇದೀಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದ ಮೂಲಕ ಆ ವಿಶೇಷ ದಾಖಲೆಯನ್ನು ಮುಂದುವರೆಸುವ ಅವಕಾಶ ಕೂಡ ವಿರಾಟ್ ಕೊಹ್ಲಿ ಮುಂದಿದೆ. ಹೀಗಾಗಿ ಅಡಿಲೇಡ್​ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಎಲ್ಲರ ಕುತೂಹಲದ ಕೇಂದ್ರವಾಗಿದೆ.

First published: