Virat Kohli| ವಿರಾಟ್​ ಕೊಹ್ಲಿಯೇ ನಿವೃತ್ತಿ ಘೋಷಿಸುವವರೆಗೆ ಅವರನ್ನೇ ನಾಯಕತ್ವದಲ್ಲಿ ಮುಂದುವರೆಸಬೇಕು; ರಿತೀಂದರ್​ ಸೋಧಿ

ಟೀಂ ಇಂಡಿಯಾ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ 45 ಟಿ 20 ಪಂದ್ಯಗಳಲ್ಲಿ 27 ರಲ್ಲಿ ಗೆಲುವು ಸಾಧಿಸಿದೆ. ಮುಂಬರುವ ಟಿ 20 ವಿಶ್ವಕಪ್​ 32 ವರ್ಷದ ವಿರಾಕ್ ಕೊಹ್ಲಿ ಪಾಲಿಗೆ ನಿರ್ಣಾಯಕವಾಗಲಿದೆ ಎನ್ನಲಾಗುತ್ತಿದೆ.

ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ.

 • Share this:
  ವಿರಾಟ್​ ಕೊಹ್ಲಿ (Virat Kohli) ಭಾರತದ ಕ್ರಿಕೆಟ್ (Team India)​ ತಂಡದ ನಾಯಕತ್ವ ವಹಿಸಿ 6 ವರ್ಷಗಳಾಯ್ತು. ಆದರೆ, ಆರು ವರ್ಷಗಳಿಂದ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿಯನ್ನು (ICC Trophy) ಗೆಲ್ಲುವಲ್ಲಿ ವಿಫಲವಾಗಿದೆ. ಹೀಗಾಗಿ ಆಗಿಂದಾಗ್ಗೆ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬರುತ್ತಲೇ ಇದೆ. ವಿರಾಟ್​ ಕೊಹ್ಲಿ ನಾಯಕತ್ವವನ್ನು ಟೆಸ್ಟ್​ಗೆ (Test Cricket) ಸೀಮಿತಗೊಳಿಸಿ ಏಕದಿನ ಮತ್ತು ಟಿ20 ನಾಯಕತ್ವವನ್ನು ರೋಹಿತ್​ ಶರ್ಮಾಗೆ (Rohit sharma) ನೀಡಬೇಕು ಎಂಬ ಮಾತುಗಳು ಆಗಿಂದಾಗ್ಗೆ ಚಾಲ್ತಿಯಲ್ಲಿರುತ್ತಲೇ ಇವೆ. ಟಿ20 ವಿಶ್ವಕಪ್​ ಟೂರ್ನಿಗೆ ಮುಂಚಿತವಾಗಿಯೇ ಮತ್ತೆ ಈ ಮಾತು ಕೇಳಿ ಬರುತ್ತಿದೆ. ಆದರೆ, ಈ ಕುರಿತು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಟೀಂ ಇಂಡಿಯಾ ಮಾಜಿ ಆಲ್​ರೌಂಡರ್​ ರಿತೀಂದರ್​ ಸಿಂಗ್ ಸೋಧಿ, "ವಿರಾಟ್​ ಕೊಹ್ಲಿ ಅದ್ಭುತವಾದ ಬ್ಯಾಟ್ಸ್​ಮನ್ ಮತ್ತು ನಾಯಕ. ಹೀಗಾಗಿ ಅವರೇ ನಾಯಕತ್ವವನ್ನು ತ್ಯಜಿಸುವವರೆಗೆ ಅವರನ್ನೇ ಮುಂದುವರೆಸಬೇಕು" ಎಂದು ತಿಳಿಸಿದ್ದಾರೆ.

  ಇಂಡಿಯಾ ನ್ಯೂಸ್​ ಜೊತೆಗಿನ ಚರ್ಚೆಯ ವೇಳೆ ಈ ಬಗ್ಗೆ ಮಾತನಾಡಿರುವ ರಿತೀಂದರ್​ ಸಿಂಗ್ ಸೋಧಿ, "ನಾಯಕನಾಗಿ ವಿರಾಟ್ ಕೊಹ್ಲಿಯ ಸಾಧನೆ ಉತ್ತಮವಾಗಿಯೇ ಇದೆ. ಆದರೆ, ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬ ಮಾತ್ರಕ್ಕೆ ಅವರನ್ನು ಟೀಕಿಸುವುದು ಸರಿಯಲ್ಲ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಾಯಕನಾಗಿ ಒಟ್ಟಾರೆ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಹೀಗಾಗಿ ಜನರ ಅನಗತ್ಯ ಟೀಕೆಗಳಿಗೆ ಅವರು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಟೀಂ ಇಂಡಿಯಾ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದ 45 ಟಿ 20 ಪಂದ್ಯಗಳಲ್ಲಿ 27 ರಲ್ಲಿ ಗೆಲುವು ಸಾಧಿಸಿದೆ. ಮುಂಬರುವ ಟಿ 20 ವಿಶ್ವಕಪ್​ 32 ವರ್ಷದ ವಿರಾಕ್ ಕೊಹ್ಲಿ ಪಾಲಿಗೆ ನಿರ್ಣಾಯಕವಾಗಲಿದೆ ಎನ್ನಲಾಗುತ್ತಿದೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ಮತ್ತೆ ಈ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆಯೇ? ಎಂದು ಅಭಿಮಾನಿಗಳೂ ಸಹ ಕಾತರದಿಂದ ಕಾಯುತ್ತಿದ್ದಾರೆ.

  ಧೋನಿ ಆಯ್ಕೆಗೆ ಜಡೇಜಾ ಅಚ್ಚರಿ!;

  ತನ್ನ ನಾಯಕತ್ವದಲ್ಲಿ ಎರಡು ಬಾರಿ ಭಾರತ ಕ್ರಿಕೆಟ್ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದಂತಹ ಮಹೇಂದ್ರ ಸಿಂಗ್ ಧೋನಿರನ್ನು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮೆಂಟರ್ (ಮಾರ್ಗದರ್ಶಿ) ಆಗಿ ನಿಯೋಜಿಸಿದ್ದ ವಿಷಯ ಕೇಳಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದು ನಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ.ಆದರೆ ಈ ವಿಚಾರವನ್ನು ನಾವು ಮತ್ತೆ ನಿಮಗೆ ನೆನಪಿಸುವಂತೆ ಮಾಡಿದ್ದು ಭಾರತದ ಮಾಜಿ ಕ್ರಿಕೆಟಿಗ ಎಂದರೆ ತಪ್ಪಾಗುವುದಿಲ್ಲ. ಧೋನಿ ಅವರನ್ನು ಮೆಂಟರ್ ಆಗಿ ನೇಮಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನವನ್ನು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಪ್ರಶ್ನಿಸಿದ್ದಾರೆ.

  ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನೊಂದಿಗೆ ಮಾತನಾಡಿದ ಮಾಜಿ ಆಟಗಾರ ಮತ್ತು ವೀಕ್ಷಕ ವಿವರಣೆಗಾರರಾದ ಜಡೇಜಾ "ನನಗೆ ಬಿಸಿಸಿಐ ನಿರ್ಧಾರವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ. ಈ ನಿರ್ಧಾರದ ಹಿಂದಿನ ಆಲೋಚನೆ ಏನಾಗಿರಬಹುದು ಎಂಬುದರ ಬಗ್ಗೆ ನಾನು ಕಳೆದ ಎರಡು ದಿನಗಳಿಂದ ಇದರ ಬಗ್ಗೆಯೇ ಯೋಚಿಸುತ್ತಿದ್ದೇನೆ. ನಾನು ಎಂ.ಎಸ್. ಧೋನಿ ಬಗ್ಗೆ ಮಾತನಾಡುತ್ತಿಲ್ಲ, ಅವರ ತಿಳುವಳಿಕೆ ಅಥವಾ ಅವರು ತಂಡಕ್ಕೆ ಎಷ್ಟು ಉಪಯುಕ್ತವಾಗಬಹುದು, ನಾನು ಅದರ ಬಗ್ಗೆ ಮಾತಾಡುತ್ತಿಲ್ಲ” ಎಂದು ಹೇಳಿದ್ದಾರೆ.

  ಇದನ್ನೂ ಓದಿ: ICC T20 World Cup| ಮಾಜಿ ಆಟಗಾರ ಆಕಾಶ್ ಚೋಪ್ರ ಪ್ರಕಾರ ಸೆಮಿ ಫೈನಲ್ ತಲುಪಬಲ್ಲ ಆ ನಾಲ್ಕು ತಂಡಗಳು ಯಾವುವು?

  "ನಾನು ಸಹ ಧೋನಿಯ ದೊಡ್ಡ ಅಭಿಮಾನಿ. ತಾವು ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯುವಾಗ ಮುಂದಿನ ನಾಯಕನನ್ನು ತಂಡಕ್ಕೆ ನೀಡಿ ಹೋಗಿದ್ದರು ಮತ್ತು ಅವರು ತಂಡಕ್ಕೆ ಅವಶ್ಯಕತೆ ಇದ್ದಾಗ ತಮ್ಮ ತಂಡದಲ್ಲಿಯೇ ನಾಯಕತ್ವದ ಬದಲಾವಣೆ ಮಾಡಲಾಗಿತ್ತು" ಎಂದು ಹೇಳಿದ್ದಾರೆ.

  “ಈಗಾಗಲೇ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ತರಬೇತುದಾರ ರವಿಶಾಸ್ತ್ರಿ ಉಪಸ್ಥಿತಿಯಲ್ಲಿ ಭಾರತ ತಂಡವು ತುಂಬಾ ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದೆ. ಆದ್ದರಿಂದ ಮುಂಬರುವ ವಿಶ್ವಕಪ್ ಗೆ ಮಾರ್ಗದರ್ಶಕರ ಅವಶ್ಯಕತೆ ಇರಲಿಲ್ಲ ಎಂದು ಜಡೇಜಾ ಒತ್ತಿ ಹೇಳಿದ್ದಾರೆ.

  ಇದನ್ನೂ ಓದಿ: Afghan Cricket| ತಾಲಿಬಾನ್ ಕಾಟ, ಅಫ್ಘನ್​ನಲ್ಲಿ ಕ್ರಿಕೆಟ್​ಗೆ ಪೀಕಲಾಟ; ಐಸಿಸಿ ನಿರ್ಧಾರದ ಮೇಲೆ ನಿಂತಿದೆ ಭವಿಷ್ಯ!

  "ಭಾರತ ಕ್ರಿಕೆಟ್ ತಂಡವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ದ ತರಬೇತುದಾರ ಮತ್ತು ನಾಯಕರಿದ್ದಾರೆ. ಆದರೂ ಮಾರ್ಗದರ್ಶಕನ ಅಗತ್ಯವಿತ್ತು ಎಂದು ರಾತ್ರೋರಾತ್ರಿ ಇವರಿಗೆ ಅನ್ನಿಸಿದ್ದೇಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ಬಿಸಿಸಿಐನ ಈ ನಿರ್ಧಾರ ನನಗೆ ಸ್ವಲ್ಪ ಆಶ್ಚರ್ಯವನ್ನುಂಟು ಮಾಡಿದೆ" ಎಂದು ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.
  Published by:MAshok Kumar
  First published: