ವಿರಾಟ್​​ ಕೊಹ್ಲಿ RCB ನಾಯಕತ್ವ ಬಿಟ್ಟಿದ್ಯಾಕೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ!

RCB captaincy: ಪರಿಶ್ರಮವು ಕಠಿಣವಾಗಿರಬೇಕು. ಆದರೆ ಕಲಿತಿದ್ದನ್ನು ಯೋಜನಾಬದ್ಧವಾಗಿ ಜಾರಿಗೊಳಿಸುವಾಗ ಉತ್ತಮ ಗುಣಮಟ್ಟ ಇರಲೇಬೇಕು. ಪ್ರತಿದಿನವೂ ನಾನು ನಾನಾಗಿರದಿದ್ದರೆ ಪಂದ್ಯದ ಅಂಗಳದಲ್ಲಿಯೂ ನಾನು ಬೇರೆಯೇ ಆಗಿರುತ್ತೇನಲ್ಲವೇ? ಎಂದು ವಿರಾಟ್ ಕೊಹ್ಲಿ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ(Cricket Fans) ಕಾಡುತ್ತಿದೆ ಒಂದೇ ಒಂದು ಪ್ರಶ್ನೆ ಅಂದರೆ ವಿರಾಟ್ ಕೊಹ್ಲಿ(Virat Kohli) ಯಾಕೆ ನಾಯಕತ್ವ(Captaincy) ಬಿಟ್ಟುಕೊಟ್ಟರು ಎಂದು.. ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಹೇಳಿದ ಬಳಿಕ ಭಾರತೀಯ ಕ್ರಿಕೆಟ್ ತಂಡದಲ್ಲಿ ಮೂರು ಮಾದರಿಯ ನಾಯಕತ್ವವನ್ನು ಕೂಡ ತ್ಯಜಿಸಿದ್ದರು.. ಯಶಸ್ಸಿನ ಉತ್ತುಂಗದಲ್ಲಿ ಇದ್ದರೂ ಸಹ ವಿರಾಟ್ ಕೊಹ್ಲಿ ಯಾಕೆ ಇದ್ದಕ್ಕಿದ್ದಂತೆ ನಾಯಕತ್ವ ವಹಿಸಿದ್ದರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ(Answer) ಸಿಕ್ಕಿರಲಿಲ್ಲ.. ಅದೇ ವಿರಾಟ್ ಕೊಹ್ಲಿ ಸಹ ಈ ಬಗ್ಗೆ ಯಾವುದನ್ನು ಸ್ಪಷ್ಟಪಡಿಸಲಿಲ್ಲ.. ಆದ್ರೆ ಈಗ ವಿರಾಟ್ ಕೊಹ್ಲಿ ನಾನು ಯಾಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ತ್ಯಜಿಸಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ

  RCB ನಾಯಕತ್ವ ಕೈಬಿಟ್ಟ ಬಗ್ಗೆ ವಿರಾಟ್ ಮಾತು

  ಕಳೆದ ವರ್ಷದ ಐಪಿಎಲ್ ಕ್ರಿಕೆಟ್ ಟೂರ್ನಿಯ ಮೊದಲ ಚರಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ, ಯುಎಇ ನಲ್ಲಿ ನಡೆದ ಎರಡನೇ ಚರಣದ ಪಂದ್ಯದ ವೇಳೆ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದರು.ಅದೇ ಕೇವಲ ನಾನು ಆರ್ಸಿಬಿ ಆಟಗಾರನಾಗಿ ಮಾತ್ರ ಕಣಕ್ಕೆ ಇಳಿಯುತ್ತೇನೆ ಅಂತ ಹೇಳಿ ಹೇಳಿದರು.. ಆದರೆ ವಿರಾಟ್ ಯಾಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸ್ಪಷ್ಟ ಉತ್ತರ ಇದು ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ.. ಆದರೆ ಈಗ ವಿರಾಟ್ ಕೊಹ್ಲಿ ಅವರೇ ಈ ಬಗ್ಗೆ ಮಾತನಾಡಿದ್ದು ಆರ್ಸಿಬಿ ನಾಯಕತ್ವ ಕಾರಣ ತಿಳಿಸಿದ್ದಾರೆ.

  ಇದನ್ನೂ ಓದಿ: ಅಧ್ಯಕ್ಷ ಸ್ಥಾನದಿಂದ 'ಔಟ್' ಆಗ್ತಾರಾ 'ದಾದಾ'? ಈ ಬಗ್ಗೆ BCCI ಹೇಳಿದ್ದೇನು?

  ಉತ್ತಮ ಫಲಿತಾಂಶ ನೀಡಲು ನಾಯಕತ್ವ ಬಿಟ್ಟೆ ಎಂದು ಕೊಹ್ಲಿ

  RCB ಪೋಡ್​ಕಾಸ್ಟ್​​ನಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಬಿಟ್ಟ ಬಗ್ಗೆ ಮಾತನಾಡಿರುವ ಕೊಹ್ಲಿ,ನನ್ನ ಕೈಯಿಂದ ಮಾಡಲಾಗದನ್ನು ನ್ನನ್ನಲ್ಲೇ ಹಿಡಿದಿಟ್ಟುಕೊಳ್ಳಬೇಕು ಎಂದು ಬಯಸುವ ವ್ಯಕ್ತಿ ನಾನಲ್ಲ. ನಾನು ಸಾಕಷ್ಟನ್ನು ಮಾಡಬಲ್ಲೇ ಎಂದು ನನಗೆ ಗೊತ್ತಿದ್ದರೂ ಸಹಾ, ಆ ಪ್ರಕ್ರಿಯೆಯನ್ನು ಆನಂದಿಸಲು ಆಗದಿದ್ದರೆ, ಅಂತಹವುಗಳನ್ನು ನಾನು ಮಾಡಲು ಹೋಗುವುದಿಲ್ಲ. ಕಾರ್ಯೊತ್ತಡ ಹೆಚ್ಚಿದಾಗಲೂ ಸಹಿಸಿಕೊಂಡು ಇರುವಂತಹ ವ್ಯಕ್ತಿ ನಾನಲ್ಲ. ಅದನ್ನು ನಿಭಾಯಿಸುವ ಸಾಮರ್ಥ್ಯ ಇದ್ದರೂ ಕೂಡ ಚೆನ್ನಾಗಿ ಫಲಿತಾಂಶ ಕೊಡಲು ಸಾಧ್ಯವಾಗುವ ಮಿತಿಯಲ್ಲಿ ಮಾತ್ರ ಕೆಲಸ ಮಾಡುತ್ತೇನೆ. ಕೆಲಸವನ್ನು ಯಾಂತ್ರಿಕವಾಗಿ ಮಾಡುವುದಕ್ಕಿಂತ ಮನಸಾರೆ ಆಸ್ವಾದಿಸುವುದು ಮುಖ್ಯ ಎಂದು ಹೇಳಿದ್ದಾರೆ.

  ಇನ್ನು ಹೊರಗಿನ ಜನರಿಗೆ ನಮ್ಮ ಪರಿಸ್ಥಿತಿ ಅರ್ಥವಾಗುವುದಿಲ್ಲ. ಒತ್ತಡ ಅನುಭವಿಸುವವರಿಗೆ ಮಾತ್ರ ಅದು ಗೊತ್ತಿರುತ್ತದೆ. ಆದ್ದರಿಂದ ನಮ್ಮ ಕುರಿತು ನಾವೇ ನಿರ್ಧರಿಸುವುದು ಸೂಕ್ತ. ಜನ ಏನೆನ್ನುತ್ತಾರೆನ್ನುವುದನ್ನು ಯೋಚಿಸಬಾರದು. ನನ್ನ ನಿರ್ಧಾರದ ಕುರಿತು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಆಘಾತ, ಅಚ್ಚರಿ ಪಡೆಯುವಂತದ್ದೇನೂ ಇಲ್ಲ. ನನಗಾಗಿ ಸ್ವಲ್ಪ ಸಮಯ ಬೇಕಿತ್ತು ಅಷ್ಟೇ' ಎಂದರು.

  'ಇನ್ನು ಪರಿಶ್ರಮವು ಕಠಿಣವಾಗಿರಬೇಕು. ಆದರೆ ಕಲಿತಿದ್ದನ್ನು ಯೋಜನಾಬದ್ಧವಾಗಿ ಜಾರಿಗೊಳಿಸುವಾಗ ಉತ್ತಮ ಗುಣಮಟ್ಟ ಇರಲೇಬೇಕು. ಪ್ರತಿದಿನವೂ ನಾನು ನಾನಾಗಿರದಿದ್ದರೆ ಪಂದ್ಯದ ಅಂಗಳದಲ್ಲಿಯೂ ನಾನು ಬೇರೆಯೇ ಆಗಿರುತ್ತೇನಲ್ಲವೇ? ಎಂದು ವಿರಾಟ್ ಕೊಹ್ಲಿ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ.

  ಇದನ್ನೂ ಓದಿ: ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಗೆದ್ದು ಬೀಗಿದ ಭಾರತ

  ವಿರಾಟ್ ಕೊಹ್ಲಿ 2013 ರ ಋತುವಿನಿಂದ ಆರ್ ಸಿಬಿ ಗೆ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ, ತಂಡವು ಖಂಡಿತವಾಗಿಯೂ 2016 ರ ಫೈನಲ್ ತಲುಪಿತ್ತು. ಆದರೆ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ವಿರಾಟ್ ಐಪಿಎಲ್‌ನಲ್ಲಿ 140 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ ಆರ್‌ಸಿಬಿ 64ರಲ್ಲಿ ಗೆಲುವು ಸಾಧಿಸಿದೆ. 69 ಪಂದ್ಯಗಳಲ್ಲಿ ಸೋತಿದೆ. 3 ಪಂದ್ಯಗಳು ಟೈ ಆಗಿದ್ದು, 4 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ
  Published by:ranjumbkgowda1 ranjumbkgowda1
  First published: