ಕ್ರಿಕೆಟ್ ಇತಿಹಾಸದಲ್ಲೇ ನೂತನ ಸಾಧನೆ; ಒಂದು ದಶಕದಲ್ಲಿ ಕೊಹ್ಲಿ ಬಾರಿಸಿದ ರನ್ ಎಷ್ಟು ಗೊತ್ತಾ?

ರಿಕಿ ಪಾಂಟಿಂಗ್ 2000 ಇಸವಿಯಲ್ಲಿ 18962 ರನ್ ಪೂರೈಸುವ ಮೂಲಕ ಇತಿಹಾಸ ರಚಿಸಿದ್ದರು. ಇದೀಗ ಕೊಹ್ಲಿ 20,000 ರನ್ ಸಿಡಿಬಾರಿಸಿ ಹಿಂದಿನಾ ಎಲ್ಲಾ ದಾಖಲೆಗಳನ್ನು ನುಚ್ಚುನೂರು ಮಾಡಿದ್ದಾರೆ.

ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)

ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)

  • News18
  • Last Updated :
  • Share this:
ಬೆಂಗಳೂರು (ಆ. 15): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವೆಸ್ಟ್​ ಇಂಡೀಸ್ ವಿರುದ್ಧದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಈ ಮೂಲಕ ಕೊಹ್ಲಿ ಕ್ರಿಕೆಟ್​ನಲ್ಲಿ ಯಾರು ಮಾಡದ ಅಪರೂಪದ ಸಾಧನೆ ಮಾಡಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ 99 ಎಸೆತಗಳಲ್ಲಿ 14 ಬೌಂಡರಿಯೊಂದಿಗೆ ಅಜೇಯ 114 ರನ್ ಬಾರಿಸಿ 43ನೇ ಶತಕ ಸಿಡಿಸಿದರು. ಈ ಮೂಲಕ ಕೊಹ್ಲಿ ಒಂದು ದಶಕದಲ್ಲಿ 20,000 ಅಂತರಾಷ್ಟ್ರೀಯ ರನ್ ಪೂರೈಸಿದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೊಹ್ಲಿ 2010 ರಿಂದ ಒಂದು ದಶತಕದಲ್ಲಿ ಒಟ್ಟು 20502 ರನ್ ಕಲೆಹಾಕಿದ್ದಾರೆ. 2010 ರಲ್ಲಿ ಟೆಸ್ಟ್​ ಹಾಗೂ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ, ಇದಕ್ಕೂ ಮೊದಲು ಏಕದಿನ ಕ್ರಿಕೆಟ್​ನಲ್ಲಿ 484 ರನ್ ಕಲೆಹಾಕಿದ್ದರು. 2008 ರಲ್ಲಿ ಏಕದಿನ ಕ್ರಿಕೆಟ್​ಗೆ ಕಾಲಿಟ್ಟಿದ್ದರು.

 Independence Day 2019: 73ನೇ ಸ್ವಾತಂತ್ಯ್ರೋತ್ಸವಕ್ಕೆ ಟೀಂ ಇಂಡಿಯಾ ಆಟಗಾರರಿಂದ ದೇಶದ ಜನತೆಗೆ ಶುಭಾಶಯ

ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ರಿಕಿ ಪಾಂಟಿಂಗ್ 2000 ಇಸವಿಯಲ್ಲಿ 18962 ರನ್ ಪೂರೈಸುವ ಮೂಲಕ ಇತಿಹಾಸ ರಚಿಸಿದ್ದರು. ಇದೀಗ ಕೊಹ್ಲಿ 20,000 ರನ್ ಸಿಡಿಬಾರಿಸಿ ಹಿಂದಿನಾ ಎಲ್ಲಾ ದಾಖಲೆಗಳನ್ನು ನುಚ್ಚುನೂರು ಮಾಡಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ 10 ವರ್ಷಗಳಲ್ಲಿ 20502 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ರಿಕಿ ಪಾಂಟಿಂಗ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾ ಮಾಜಿ ಆಲ್ರೌಂಡರ್ ಆಟಗಾರ ಜಾಕ್ ಕಾಲಿಸ್ 16777 ರನ್ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.

First published: