ಕೊರೋನಾ ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡಿದ ಕೊಹ್ಲಿ-ಅನುಷ್ಕಾ ಜೋಡಿ!

ಕೊರೋನಾ ಬಗ್ಗೆ ವಿರುಷ್ಕಾ ದಂಪತಿಗಳು ವಿಡಿಯೋ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದರು. ಯಾರೂ ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ, ಮನೆಯಲ್ಲಿಯೇ ಇರಿ. ಸುರಕ್ಷಿತವಾಗಿರಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಅಭಿಮಾಣಿಗಳಲ್ಲಿ ಮನವಿ ಮಾಡುತ್ತಿದ್ದರು. ಸದ್ಯ ದೇಣಿಗೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ

ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ

 • Share this:
  ಕೊರೋನಾ ಸೋಂಕು ನಿವಾರಣೆಗಾಗಿ ಸೆಲೆಬ್ರಿಟಿಗಳು, ಸ್ಟಾರ್​ ನಟ-ನಟಿಯರು ಮೋದಿ ಕೇರ್​ಗೆ ದೇಣಿಗೆ ನೀಡುತ್ತಿದ್ದಾರೆ. ಇದೀಗ ಟೀಂ ಇಂಡಿಯಾ​ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಕೂಡ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಪೋಸ್ಟ್​  ಮಾಡಿರುವ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್​ ‘ನಾನು ಪಿಎಂ ಕೇರ್ಸ್​ ಫಂಡ್​ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಾಯ ಮಾಡಿದ್ದೇವೆ. ಅನೇಕ ಜನರು ಕೊರೋನಾದಿಂದಾಗಿ ಬಳಲುತ್ತಿರುವುದನ್ನು ನೋಡಿ ಹೃದಯ ಬಡಿತವೇ ನಿಂತಂತಾಗುತ್ತಿದೆ. ಇಂತಹ ಸನ್ನಿವೇಷದಲ್ಲಿ ನಾವು ನೀಡುತ್ತಿರುವ ಕೊಡುಗೆ ಪರಿಹಾರಕ್ಕೆ ನೆರವಾಗಲಿದೆ ಎಂದು ಭಾವಿಸಿದ್ದೇವೆ. ನಮ್ಮ ಪ್ರೀತಿಯ ಜನರ ನೋವು ನಿವಾರಿಸಲು ದೇಣಿಗೆ ಸಹಾಯವಾಗಲಿದೆ‘ ಎಂದು ಬರೆದುಕೊಂಡಿದ್ದಾರೆ.

  ಕೊರೋನಾ ಬಗ್ಗೆ ವಿರುಷ್ಕಾ ದಂಪತಿಗಳು ವಿಡಿಯೋ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದರು. ಯಾರೂ ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ, ಮನೆಯಲ್ಲಿಯೇ ಇರಿ. ಸುರಕ್ಷಿತವಾಗಿರಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಅಭಿಮಾಣಿಗಳಲ್ಲಿ ಮನವಿ ಮಾಡುತ್ತಿದ್ದರು. ಸದ್ಯ ದೇಣಿಗೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ, ಇವರು ಎಷ್ಟು ಹಣವನ್ನು ನೀಡಿದ್ದಾರೆ ಎಂಬುದನ್ನು ಮಾತ್ರ ಬಹಿರಂಗ ಪಡಿಸಿಲ್ಲ.

  ಇತ್ತೀಚೆಗೆ ಬಾಲಿವುಡಡ್​ ನಟ ಅಕ್ಷಯ್​ ಕುಮಾರ್​ 25 ಕೋಟಿ ರೂಪಾಯಿಯನ್ನು ಪಿಎಂ ಕೇರ್ಸ್​​ಗೆ ದೇಣಿಗೆ ನೀಡಿದ್ದರು. ಅನಂತರ ಮಾಸ್ಟರ್​ ಬ್ಲಾಸ್ಟರ್​ ಸಚಿತ್​ ತೆಂಡೂಲ್ಕರ್​ 50 ಲಕ್ಷ ರೂ. ಸುರೇಶ್​ ರೈನಾ 52 ಲಕ್ಷ ರೂ. ನೀಡಿದ್ದರು. ಬಿಸಿಸಿಐ ಅಧ್ಯಕ್ಷ ಸೌರವ್​​ ಗಂಗೂಲಿಯೂ ನೆರವು ನೀಡಿದ್ದಾರೆ. ಇನ್ನು ಬ್ಯಾಂಡ್ಮಿಂಟನ್​ ಆಟಗಾರ್ತಿ ಪಿ.ವಿ ಸಿಂಧೂ, ಒಲಿಂಪಿಕ್​ ಕ್ರಿಡಾಪಟು ಹಿಮಾ ದಾಸ್​, ಕುಸ್ತಿ ಪಟಯ ಭಜರಂಗ್​ ಪುನಿಯಾ ಕೂಡ ಸಹಾಯ ಧನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಾಲಿವುಡ್​ ನಟ ಸಲ್ಮಾನ್​ ಖಾನ್​​ ಕೂಡ 25 ಸಾವಿರ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

  ಭಾರತದಲ್ಲಿ ಮಹಮಾರಿ ಕೊರೋನಾ ವೈರಸ್​​ 28 ಜನರನ್ನು ಬಲಿ ತೆಗೆದುಕೊಂಡಿದೆ. ಸೋಂಕಿತರ ಸಂಖ್ಯೆ 10171ಕ್ಕೇ ಏರಿಕೆ. ಸರ್ಕಾರ ಕೂಡ ಕೊರೋನಾ ಸೋಂಕು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

  ಇದನ್ನೂ ಓದಿ: ನೈಟ್​ ಮೋಡ್​​ ಬಳಕೆದಾರರೇ ಎಚ್ಚರ! ಈ ಸಮಸ್ಯೆ ನಿಮ್ಮನ್ನು ಕಾಡಬಹುದು
  First published: