ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಈಗ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ 1-0 ಮುನ್ನಡೆ ಸಾಧಿಸಿದೆ. ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾ ಆದ ಬಳಿಕ, ಲಂಡನ್ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 151 ರನ್ ಗಳ ಭರ್ಜರಿ ಗೆಲುವು ದಾಖಲಿಸಿತು. ಆದರೆ, ಈ ಪಂದ್ಯದ 5ನೇ ದಿನ ನಡೆದ ಸ್ಲೆಡ್ಜಿಂಗ್ನಿಂದಾಗಿ ಭಾರತದ ಐತಿಹಾಸಿಕ ಗೆಲುವಿನ ನಡುವೆಯೂ ವಿವಾದಗಳಿಂದ ಕೂಡಿದೆ. ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತೀಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್ ಅವರು ಬ್ಯಾಟಿಂಗ್ಗೆ ಬರುತ್ತಿದ್ದಂತೆ ಬೌನ್ಸರ್ಗಳೊಂದಿಗೆ ಸ್ವಾಗತ ಮಾಡಿದಾಗಿನಿಂದಲೇ ವಿವಾದ ಆರಂಭವಾಯಿತು. ಆ್ಯಂಡರ್ಸನ್ಗೆ ಆಕ್ರಮಣಕಾರಿ ಸ್ವಾಗತ ಕೋರಿದ್ದಕ್ಕೆ ಹಲವರು ಬುಮ್ರಾ ವಿರುದ್ಧ ಟೀಕೆ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು, ಬೌಲರ್ ಆಗಿ ಬುಮ್ರಾ ಅವರ ಕ್ರಮವನ್ನು ಹಲವರು ಸಮರ್ಥಿಸಿಕೊಂಡರೆ, ಇತರರು ಬೌಲರ್ನ ಉದ್ದೇಶವನ್ನು ಪ್ರಶ್ನಿಸಿದ್ದಾರೆ. ಆದರೂ, ಭಾರತದ ಎರಡನೇ ಇನ್ನಿಂಗ್ಸ್ನಲ್ಲಿ ಬುಮ್ರಾ 5ನೇ ದಿನ ಬ್ಯಾಟಿಂಗ್ಗೆ ಬಂದಾಗ ಭಾರತ ಮತ್ತು ಇಂಗ್ಲೆಂಡ್ ಆಟಗಾರರ ನಡುವೆ ಮೈದಾನದಲ್ಲಿ ಸಂಘರ್ಷ ನಡೆದಿದ್ದು, ಅವಾಚ್ಯ ಶಬ್ದಗಳಿಂದ ಕೆಲ ಆಟಗಾರರು ಬೈದಾಡಿಕೊಂಡಿದ್ದಾರೆ.
ಇಂಗ್ಲೆಂಡ್ನ ಎರಡನೇ ಇನ್ನಿಂಗ್ಸ್ ವೇಳೆ ನಡೆದ ಘಟನೆ ವೈರಲ್:
ಆತಿಥೇಯ ತಂಡ ತಮ್ಮ ಎರಡನೇ ಇನ್ನಿಂಗ್ಸ್ ವೇಳೆ ಆ್ಯಂಡರ್ಸನ್ ಇಂಗ್ಲೆಂಡ್ ಪರ ಬ್ಯಾಟಿಂಗ್ ಮಾಡಲು ಹೋದಾಗ ಮತ್ತೊಬ್ಬ ಭಾರತೀಯ ವೇಗಿ ಮೊಹಮ್ಮದ್ ಸಿರಾಜ್ ಮೊದಲ ಇನ್ನಿಂಗ್ಸ್ನಲ್ಲಿ ಬುಮ್ರಾ ಮಾಡಿದಂತೆ ಆಂಗ್ಲರನ್ನು ಸ್ವಾಗತಿಸಲು ಬಯಸಿದರು ಮತ್ತು ತಂಡದ ನಾಯಕ ವಿರಾಟ್ ಕೊಹ್ಲಿಯ ಅನುಮೋದನೆಗಾಗಿ ಕೇಳಿದರು. ಈಗ ಆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಹಲವು ನೆಟ್ಟಿಗರು ಸಾಕಷ್ಟು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಸಿರಾಜ್ ಕೊಹ್ಲಿಯೊಂದಿಗೆ ಮಾತನಾಡುವಾಗ ಅವರ ತಲೆಯ ಕಡೆಗೆ ತೋರಿಸುವುದನ್ನು ಈ ಚಿಕ್ಕ ವಿಡಿಯೋ ಕ್ಲಿಪ್ನಲ್ಲಿ ಕಾಣಬಹುದು. ಆದರೆ, ನಾಯಕ ಕೊಹ್ಲಿ ಸ್ಟಂಪ್ ಮೇಲೆ ಬೌಲ್ ಮಾಡುವಂತೆ ಹೇಳಿದರು ಹಾಗೂ ಸೇಡು ತೀರಿಸಿಕೊಳ್ಳುವ ಬಗ್ಗೆ ಗಮನ ಹರಿಸಬೇಡಿ ಎಂದು ಹೇಳಿದರು. ಕೊಹ್ಲಿಯ ಕಾರ್ಯತಂತ್ರ ವರ್ಕ್ ಆಗಿದ್ದು, ಸಿರಾಜ್ ಬೌಲಿಂಗ್ ಮಾಡುತ್ತಿರುವಾಗ ಪಂದ್ಯದ 51.5 ನೇ ಓವರ್ನಲ್ಲಿ ಆ್ಯಂಡರ್ಸನ್ ಕ್ಲೀನ್ ಬೌಲ್ಡ್ ಆದರು. ನಂತರ ಭಾರತ ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್ಸ್ ಮೈದಾನದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ.
ಈ ಮಧ್ಯೆ, ಮೊಹಮ್ಮದ್ ಸಿರಾಜ್ ಈ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ (4/94 ಮತ್ತು 4/32) ನಾಲ್ಕು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಸ್ಟಾರ್ ಎನಿಸಿಕೊಂಡರು.
ಇನ್ನು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಆಗಸ್ಟ್ 25ರಿಂದ ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆದಿದ್ದು, ಎರಡನೇ ಪಂದ್ಯದಲ್ಲಿ ನಡೆದ ಈ ಘಟನೆಗಳ ಕಾರಣದಿಂದಾಗಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ