ಕ್ರಿಕೆಟ್ ಅಭ್ಯಾಸ ಮಾಡಲು ಪಟ್ಟ ಶ್ರಮ ಅಷ್ಟಿಟ್ಟಲ್ಲ; ನೆನಪಿನ ಬುತ್ತಿ ಬಿಚ್ಚಿಟ್ಟಿ ಹಾರ್ದಿಕ್ ಪಾಂಡ್ಯ!

ಟೀಂ ಇಂಡಿಯಾ ಆಟಗಾರರು ಇಂದು ಶ್ರೀಮಂತರಾಗಿರಬಹುದು. ಆದರೆ, ಕೆಲವು ಆಟಗಾರರು ಬೆಳೆದು ಬಂದ ಹಾದಿ, ತಂಡ ಸೇರಿಕೊಳ್ಳಲು ಪಟ್ಟ ಶ್ರಮ ಅಷ್ಟಿಟ್ಟಲ್ಲ. ಇದೇ ಸಾಲಿನಲ್ಲಿ ಪ್ರಮುಖರು ಎಂದರೆ ಪಾಂಡ್ಯ ಬ್ರದರ್ಸ್​​.

Vinay Bhat | news18-kannada
Updated:September 21, 2019, 10:29 AM IST
ಕ್ರಿಕೆಟ್ ಅಭ್ಯಾಸ ಮಾಡಲು ಪಟ್ಟ ಶ್ರಮ ಅಷ್ಟಿಟ್ಟಲ್ಲ; ನೆನಪಿನ ಬುತ್ತಿ ಬಿಚ್ಚಿಟ್ಟಿ ಹಾರ್ದಿಕ್ ಪಾಂಡ್ಯ!
ಹಾರ್ದಿಕ್ ಪಾಂಡ್ಯ
  • Share this:
ಬೆಂಗಳೂರು (ಸೆ. 21): ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಮೂರನೇ ಟಿ-20 ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ನಾಳೆ (ಸೆ. 22) ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದ್ದು, ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಈ ಮಧ್ಯೆ ಬಿಡುವಿನ ವೇಳೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಟೀಂ ಇಂಡಿಯಾ ಆಟಗಾರರು ಇಂದು ಶ್ರೀಮಂತರಾಗಿರಬಹುದು. ಆದರೆ, ಕೆಲವು ಆಟಗಾರರು ಬೆಳೆದು ಬಂದ ಹಾದಿ, ತಂಡ ಸೇರಿಕೊಳ್ಳಲು ಪಟ್ಟ ಶ್ರಮ ಅಷ್ಟಿಟ್ಟಲ್ಲ. ಇದೇ ಸಾಲಿನಲ್ಲಿ ಪ್ರಮುಖರು ಎಂದರೆ ಪಾಂಡ್ಯ ಬ್ರದರ್ಸ್​​.

‘ತಂಡದಿಂದ ಕಿತ್ತೆಸೆಯುವ ಮುನ್ನ ಧೋನಿಯೇ ನಿವೃತ್ತಿ ನೀಡಲಿ’ ಎಂದ ಭಾರತೀಯ ಮಾಜಿ ಆಟಗಾರ

ಸದ್ಯ ತಾನು ಟೀಂ ಇಂಡಿಯಾ ಸೇರುವ ಮುನ್ನ ನಡೆದ ಬಂದ ಹಾದಿಯ ಬಗ್ಗೆ ನೆನಪು ಮಾಡಿಕೊಂಡು ಹಾರ್ದಿಕ್ ತಮ್ಮ ಟ್ವಿಟ್ಟರ್​ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಕ್ರಿಕೆಟ್ ಪಂದ್ಯ ಆಡಲು ಅಭ್ಯಾಸಕ್ಕಾಗಿ ಟ್ರಕ್‌ನಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ಹಾರ್ದಿಕ್ ಶೇರ್ ಮಾಡಿದ್ದು, ಸಿಕ್ಕಾಪಟ್ಟು ವೈರಲ್ ಆಗುತ್ತಿದೆ.

 ಹಾರ್ದಿಕ್ ಈ ಫೋಟೋ ಹಂಚಿಕೊಂಡ ಬೆನ್ನಲ್ಲೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಬಾಲ್ಯದ ನೆನಪನ್ನು ಮೆಲುಕು ಹಾಕಿದ್ದಾರೆ.

ತಮ್ಮ 16ನೇ ವಯಸ್ಸಿನಲ್ಲಿ ತೆಗೆದ ಫೋಟೋವನ್ನು ಕೊಹ್ಲಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಳೆಯ ಫೋಟೋ ಜೊತೆಗೆ ಈಗಿನ ಫೋಟೋವನ್ನು ಎಡಿಟ್ ಮಾಡಿರುವ ಕೊಹ್ಲಿ, ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ.

 First published: September 21, 2019, 10:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading