HOME » NEWS » Sports » CRICKET VIRAT KOHLI AND BEN STOKES INVOLVED IN HEATED EXCHANGE UMPIRES INTERVENE ZP

Video: ತನ್ನ ಆಟಗಾರರನ್ನು ಕೆಣಕಿದ ಸ್ಟೋಕ್ಸ್​ಗೆ ಬಿಸಿ ಮುಟ್ಟಿಸಿದ ವಿರಾಟ್ ಕೊಹ್ಲಿ..!

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್​ನಲ್ಲಿ 205 ರನ್​ಗಳಿಗೆ ಸರ್ವಪತನ ಕಂಡಿದೆ.

news18-kannada
Updated:March 4, 2021, 6:15 PM IST
Video: ತನ್ನ ಆಟಗಾರರನ್ನು ಕೆಣಕಿದ ಸ್ಟೋಕ್ಸ್​ಗೆ ಬಿಸಿ ಮುಟ್ಟಿಸಿದ ವಿರಾಟ್ ಕೊಹ್ಲಿ..!
Kohli-Stokes fight
  • Share this:
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ. 30 ರನ್ ಪೇರಿಸುವಷ್ಟರಲ್ಲಿ ಪ್ರಮುಖ ಮೂರು ದೊಡ್ಡ ವಿಕೆಟ್‌ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಜ್ಯಾಕ್ ಕ್ರಾಲೆ (02). ಡೊಮಿನಿಕ್ ಸಿಬ್ಲಿ (09) ಮತ್ತು ನಾಯಕ ಜೋ ರೂಟ್ (05) ಅವರನ್ನು ಟೀಮ್ ಇಂಡಿಯಾ ಬೌಲರುಗಳು ಬೇಗನೆ ಪೆವಿಲಿಯನ್ ಕಡೆ ಕಳುಹಿಸಿದ್ದರು. ಇದಾಗ್ಯೂ ಬೆನ್ ಸ್ಟೋಕ್ಸ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಈ ನಡುವೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್​ ಅವರನ್ನು ಸ್ಟೋಕ್ಸ್ ಕೆಣಕುವ ಪ್ರಯತ್ನ ಮಾಡಿದ್ದರು.

ಇದರಿಂದ ಕುಪಿತಗೊಂಡ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಟೋಕ್ಸ್ ಜೊತೆ ವಾಗ್ವಾದಕ್ಕೆ ಇಳಿದರು. 12ನೇ ಓವರ್​ನಲ್ಲಿ ಸಿರಾಜ್ ಬೌನ್ಸರ್ ಎಸೆದಿದಕ್ಕೆ ಸ್ಟೋಕ್ಸ್ ಏನೋ ಹೇಳಿದ್ದರು. ಇದನ್ನು ಕೇಳಿದ ಕೊಹ್ಲಿ ಬೆನ್ ಸ್ಟೋಕ್ಸ್ ಬಳಿ ಬಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲವೊತ್ತು ಮುಂದುವರೆದ ಮಾತಿನಲ್ಲಿ ಕೊಹ್ಲಿ ಸ್ಟೋಕ್ಸ್ ನಡುವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಈ ವಾಗ್ವಾದ ಮತ್ತಷ್ಟು ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು.




ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್​ನಲ್ಲಿ 205 ರನ್​ಗಳಿಗೆ ಸರ್ವಪತನ ಕಂಡಿದೆ. ಅಕ್ಷರ್ ಪಟೇಲ್ ಪಟೇಲ್ (4 ವಿಕೆಟ್) ಹಾಗೂ ಅಶ್ವಿನ್ (3 ವಿಕೆಟ್) ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ತಡಕಾಡಿದ ಆಂಗ್ಲರು ಮೂರನೇ ಸೆಷನ್ ವೇಳೆಗೆ ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು.
Published by: zahir
First published: March 4, 2021, 6:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories