VIRAL VIDEO: ಚೆಂಡನ್ನು ಬೌಂಡರಿಗಟ್ಟಲು ಹೋಗಿ ವಿಕೆಟ್​ ಹೊಡೆದುರುಳಿಸಿದ ಶೊಯೆಬ್ ಮಲ್ಲಿಕ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಸ್ಪೋಟಕ ಆಟಗಾರ ಬಾಬರ್ ಆಝಂ (115) ಶತಕದ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 340 ರನ್ ಗಳಿಸಿತ್ತು.

zahir | news18
Updated:May 19, 2019, 9:54 AM IST
VIRAL VIDEO: ಚೆಂಡನ್ನು ಬೌಂಡರಿಗಟ್ಟಲು ಹೋಗಿ ವಿಕೆಟ್​ ಹೊಡೆದುರುಳಿಸಿದ ಶೊಯೆಬ್ ಮಲ್ಲಿಕ್
@LatestLY
  • News18
  • Last Updated: May 19, 2019, 9:54 AM IST
  • Share this:
ನಾಟಿಂಗ್​ಹ್ಯಾಮ್​ನಲ್ಲಿ ಶುಕ್ರವಾರ ನಡೆದ ಪಾಕಿಸ್ತಾನ​ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಏಕದಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿತ್ತು. ಅವೆಲ್ಲಕ್ಕಿಂತಲೂ ಹೆಚ್ಚಾಗಿ ಗಮನ ಸೆಳೆದಿದ್ದು ಮಾತ್ರ ಶೋಯೆಬ್ ಮಲ್ಲಿಕ್ ಅವರ ಬ್ಯಾಟಿಂಗ್. ಅಂದರೆ ಮಲ್ಲಿಕ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ ನೀವಂದುಕೊಂಡರೆ ನಿಮ್ಮ ಊಹೆ ತಪ್ಪು.

ಏಕೆಂದರೆ ಪಾಕ್​ ತಂಡದ ಅನುಭವಿ ಆಟಗಾರನಾಗಿರುವ ಮಲ್ಲಿಕ್ ಹಿಟ್ ವಿಕೆಟ್ ಆಗುವ ಮೂಲಕ ಔಟಾಗಿದ್ದರು. ಅದು ಕೂಡ ತೀರಾ ಹಾಸ್ಯ ರೂಪದಲ್ಲಿ ಎಂಬುದು ವಿಶೇಷ. 47ನೇ ಓವರ್​ ಎಸೆದ ಮಾರ್ಕ್​ವುಡ್​ ಬೌಲಿಂಗ್​ನಲ್ಲಿ ಸ್ಕೇರ್​ ಮೂಲಕ ಬೌಂಡರಿ ಬಾರಿಸಲು ಮಲ್ಲಿಕ್​ ಯತ್ನಿಸಿದ್ದರು. ಆದರೆ ತನ್ನ ಹೊಡೆತ ಲೇಟ್​ ಆಗಿದ್ದಲೇ ಫುಟ್​ ವರ್ಕ್ ಹಿಂದೆ ಸರಿದ ಪರಿಣಾಮ ಮಲ್ಲಿಕ್ ಚೆಂಡಿನ ಬದಲು ಹೊಡೆದಿದ್ದು ವಿಕೆಟ್​ಗೆ. ಒಂದೆಡೆ ಚೆಂಡು ಹೋಗುತ್ತಿದ್ದರೆ ಇತ್ತ ಮಲ್ಲಿಕ್ ವಿಕೆಟ್​ಗಳನ್ನು ಹೊಡೆದುರುಳಿಸಿ ಔಟಾಗಿದ್ದರು.

ಈ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಲ್ಲಿಕ್​ ಅವರ ಬ್ಯಾಟಿಂಗ್​ ಕುರಿತು ಹಾಸ್ಯಗಳು ಹರಿದಾಡುತ್ತಿದೆ. ಕ್ರಿಸ್​ನಲ್ಲಿ ನಿಂತು ಶೊಯೆಬ್ ಮಲ್ಲಿಕ್ ಅದೇನೋ ಯೋಚಿಸುತ್ತಿದ್ದರು, ಬಾಲ್ ಹೋದ ಮೇಲೆ ಬಾರಿಸಿದರು..ಗುರಿ ತಪ್ಪಲಿಲ್ಲ ವಿಕೆಟ್ ಉರುಳಿತು. ಮಲ್ಲಿಕ್ ಪಾಕ್ ಪರ ಆಡುತ್ತಿದ್ದಾರಾ, ಇಲ್ಲ ಇಂಗ್ಲೆಂಡ್ ಪರ ಕಣಕ್ಕಿಳಿದಿದ್ದಾರಾ ಎಂಬ ಡೌಟಿದೆ..ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಳ್ಳುವುದು ಅಂದರೆ ಇದೇನಾ ...ಎಂಬಿತ್ಯಾದಿ ಕಮೆಂಟ್​ಗಳ ಮೂಲಕ ಮಲ್ಲಿಕ್​ರನ್ನು ಟ್ರೋಲ್ ಮಾಡಲಾಗುತ್ತಿದೆ.


Loading...ಪಾಕ್ ಪರ ವಿಶ್ವಕಪ್​ನಲ್ಲಿ ಸ್ಥಾನ ಪಡೆದಿರುವ ಶೊಯೇಬ್ ಮಲ್ಲಿಕ್ ಉತ್ತಮ ಫಾರ್ಮ್​ನಲ್ಲಿದ್ದು, ಹಿಟ್​ ವಿಕೆಟ್​ ಮೂಲಕ ಔಟಾಗುವ ಮುನ್ನ ಕೇವಲ 21 ಎಸೆತಗಳಲ್ಲಿ ಮಲ್ಲಿಕ್ 41 ರನ್​ ಬಾರಿಸಿದ್ದರು.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಸ್ಪೋಟಕ ಆಟಗಾರ ಬಾಬರ್ ಆಝಂ (115) ಶತಕದ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 340 ರನ್ ಗಳಿಸಿತ್ತು. ಈ ಸವಾಲಿನ ಮೊತ್ತವನ್ನು ಚೇಸ್ ಮಾಡಿದ ಇಂಗ್ಲೆಂಡ್ ತಂಡ ಜೇಸನ್ ರಾಯ್(114) ಬಿರುಸಿನ ಶತಕ ಹಾಗೂ ಬೆನ್ ಸ್ಟೋಕ್ಸ್ (ಔಟಾಗದೆ 71) ಹೊಡಿಬಡಿಯ ಅರ್ಧಶತಕದ ಬೆಂಬಲದಿಂದ ಕೊನೆಯ ಓವರ್​ನಲ್ಲಿ ಗೆಲುವಿನಲ್ಲಿ ಗೆದ್ದು ಬೀಗಿತು. ಅಲ್ಲದೆ  5 ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಇಂಗ್ಲೆಂಡ್ ವಶಪಡಿಸಿಕೊಂಡಿತು.ಇದನ್ನೂ ಓದಿ: ನಿಮಗೆ ಗರ್ಲ್​ಫ್ರೆಂಡ್ ಸಿಗದಿರಲು ಇದು ಕೂಡ ಕಾರಣವಾಗಿರಬಹುದು..!

ಇದನ್ನೂ ಓದಿ: VIDEO: ಬಾಲಕಿಯ ಕೆಳಭಾಗವನ್ನು ಮುಟ್ಟಿದ ಬಾಲಕನನ್ನು ನಡುರಸ್ತೆಯಲ್ಲೇ ನಗ್ನಗೊಳಿಸಿದ ತಾಯಿ: ಇದೆಂಥಾ ಶಿಕ್ಷೆ?

ಇದನ್ನೂ ಓದಿ: ಮಾನವೀಯತೆ ಮರೆದ ವಿಶ್ವದ ಶ್ರೇಷ್ಠ ಆಟಗಾರ..!

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

ಇದನ್ನೂ ಓದಿ: ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?
First published:May 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...